ಬಡವರ ಬಂಡಿ: ಸ್ಪೋರ್ಟಿ ಲುಕ್, 63 ಕಿ.ಮೀ ಮೈಲೇಜ್: ಆಧುನಿಕ ಫೀಚರ್ಸ್... ಬೆಲೆ ಇಷ್ಟೇನಾ

2025 ಹೋಂಡಾ SP 125 (2025 Honda SP 125) ಭಾರತದಲ್ಲಿ ಹೆಚ್ಚು ಮಾರಾಟವಾಗುವ 125cc ಪ್ರಯಾಣಿಕ ಬೈಕ್ ಆಗಿದ್ದು, ಆಧುನಿಕ ತಂತ್ರಜ್ಞಾನ, ಅತ್ಯುತ್ತಮ ಮೈಲೇಜ್ ಮತ್ತು ತೊಂದರೆ ಮುಕ್ತ ನಗರ ಸವಾರಿಗೆ ಬೆಸ್ಟ್ ಆಯ್ಕೆಯಾಗಿದೆ. ಇದು ಬಜೆಟ್ ಬೆಲೆಯಲ್ಲಿ ಸುರಕ್ಷತೆ - ಪ್ರಜ್ಞೆಯುಳ್ಳ ಸವಾರರಿಗೂ ಸೂಕ್ತ ಆಯ್ಕೆಯಾಗಿದ್ದು, ವಿಶ್ವಾಸಾರ್ಹತೆ ಮತ್ತು ಪ್ರೀಮಿಯಂ ಪ್ರಯಾಣಿಕ ಅನುಭವವನ್ನು ನೀಡುತ್ತದೆ. ಪ್ರಸ್ತುತ ಎರಡು ವೇರಿಯೆಂಟ್‌ಗಳು ಮತ್ತು ಐದು ಆಧುನಿಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

2025 ಹೋಂಡಾ SP 125 ಡ್ರಮ್ ಬ್ರೇಕ್ ಹೊಂದಿರುವ ಬೇಸ್ ವೇರಿಯೆಂಟ್ ಬೆಲೆಯು ರೂ. 85,564 (ಎಕ್ಸ್‌ ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಡಿಸ್ಕ್ ಬ್ರೇಕ್ ಹೊಂದಿರುವ ಮಾಡಲ್ ಬೆಲೆಯು ರೂ. 93,152 (ಳಎಕ್ಸ್-ಶೋರೂಂ) ವರೆಗೆ ಇದೆ. RTO, ವಿಮೆ ಮತ್ತು ಇತರ ವೆಚ್ಚಗಳನ್ನು ಒಳಗೊಂಡಂತೆ ಆನ್-ರೋಡ್ ಬೆಲೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ.

best-mileage-bike-under-1-lakh-honda-sp-125-details

ಹೋಂಡಾ ಎಸ್ ಪಿ 125 ಬೈಕ್ 3 ವೆರಿಯೆಂಟ್ ಗಳನ್ನು ಹೊಂದಿದ್ದು, 7 ಬಣ್ಣಗಳಲ್ಲಿ ಲಭ್ಯವಿದೆ. 123.94 ಸಿಸಿ ಬಿಎಸ್-6 ಎಂಜಿನ್ ಹೊಂದಿದ್ದು, 10.72 ಬಿಹೆಚ್ ಪಿ ಪವರ್ ಮತ್ತು 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 60 ರಿಂದ 63 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ದೈನಂದಿನ ಪ್ರಯಾಣಕ್ಕೆ ಹೆಚ್ಚು ಇಂಧನ ಸಮರ್ಥ ಆಯ್ಕೆಯಾಗಿದೆ.

ರೈಡಿಂಗ್ ಶೈಲಿ ಮತ್ತು ಟ್ರಾಫಿಕ್ ಅನ್ನು ಅವಲಂಬಿಸಿ ನೈಜ - ಪ್ರಪಂಚದಲ್ಲಿ ಮೈಲೇಜ್ ಬದಲಾಗಬಹುದಾಗಿದ್ದು, ಸರಿಸುಮಾರು 55 ರಿಂದ 60 kmpl ಮೈಲೇಜ್ ಸಿಗಬಹುದು. ಇನ್ನು 17-ಇಂಚಿನ ಅಲಾಯ್ ವೀಲ್‌ಗಳು, ಹೋಂಡಾ SP 125 ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ಗಳನ್ನು ಹೊಂದಿದ್ದು, 117 ಕೆಜಿ ತೂಕವಿದೆ. ಹಾಗೆಯೇ 11 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಟ್ಯೂಬ್‌ಲೆಸ್ ಟೈರ್‌ಗಳನ್ನು ಈ ಬೈಕ್ ಹೊಂದಿದೆ.

best-mileage-bike-under-1-lakh-honda-sp-125-details

ಫೀಚರ್ಸ್ ವಿಷಯಕ್ಕೆ ಬಂದರೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬ್ಲೂಟೂತ್, ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್ ಬೆಂಬಲದೊಂದಿಗೆ ಹೊಸ 4.2 - ಇಂಚಿನ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದು, ಇದರಲ್ಲಿ ರಿಯಲ್-ಟೈಮ್ ಫ್ಯೂಲ್ ಎಫಿಷಿಯೆನ್ಸಿ, ಡಿಸ್ಟನ್ಸ್ ಟು ಎಂಪ್ಟಿ, ಆವರೇಜ್ ಫ್ಯೂಲ್ ಎಕಾನಮಿ, ಇಕೋ ಇಂಡಿಕೇಟರ್ ಮತ್ತು ಗೇರ್ ಇಂಡಿಕೇಟರ್‌ಗಳನ್ನು ಪ್ರದರ್ಶಿಸುತ್ತದೆ.

ಇವಿಷ್ಟೆ ಅಲ್ಲದೆ USB-C ಚಾರ್ಜಿಂಗ್ ಪೋರ್ಟ್, ಸಂಯೋಜಿತ ಬ್ರೇಕಿಂಗ್ ಸಿಸ್ಟಮ್, ಪೂರ್ಣ LED ಹೆಡ್‌ಲ್ಯಾಂಪ್ ಮತ್ತು ನವೀಕರಿಸಿದ ಗ್ರಾಫಿಕ್ಸ್‌ನೊಂದಿಗೆ ಹೊಸ ತೀಕ್ಷ್ಣವಾದ ವಿನ್ಯಾಸ, ಸೈಲೆಂಟ್ ಸ್ಟಾರ್ಟ್ ACG, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಸುಧಾರಿತ ಮೈಲೇಜ್‌ಗಾಗಿ ಐಡಲ್ ಸ್ಟಾರ್ಟ್ ಸ್ಟಾಪ್ ನಂತಹ ಫೀಚರ್ಸ್ ಇದರಲ್ಲಿ ಒದಗಿಸಲಾಗಿದೆ.

best-mileage-bike-under-1-lakh-honda-sp-125-details

2025 ಹೋಂಡಾ SP 125 ಬೈಕ್ 2025 ಕ್ಕೆ OBD2B ಹೊರಸೂಸುವಿಕೆ (ಎಮಿಷನ್) ಮಾನದಂಡಕ್ಕೆ ಅನುಗುಣವಾಗಿದೆ. CBS ಸ್ಟ್ಯಾಂಡರ್ಡ್ (ಸಂಯೋಜಿತ ಬ್ರೇಕಿಂಗ್ ಸಿಸ್ಟಮ್) ಆಗಿ ನೀಡಲಾಗುತ್ತದೆ. ಬಣ್ಣ ಆಯ್ಕೆಗಳಲ್ಲಿ ಪರ್ಲ್ ಇಗ್ನಿಯಸ್ ಬ್ಲಾಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ, ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಇವೆ.

2025 ಹೋಂಡಾ SP 125 ಪ್ರೀಮಿಯಂ ಕಮ್ಯುಟರ್ ಸೆಗ್ಮೆಂಟಿನಲ್ಲಿ ಸ್ಪರ್ಧಿಸುತ್ತದೆ. ಈ ವಿಭಾಗದಲ್ಲಿ ಟಿವಿಎಸ್ ರೈಡರ್ 125 ಮತ್ತು ಹೀರೋ ಗ್ಲಾಮರ್ ನಂತಹ ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ. ಒಟ್ಟಾರೆ ಹೋಂಡಾ SP 125 ಪ್ರೀಮಿಯಂ ಪ್ರಯಾಣಿಕರ ಮತ್ತು ಅದರ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಗಳಲ್ಲಿ ಒಂದಾಗಿದೆ. ಈ ಬೈಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.



Previous Post Next Post