ಕೃಷಿಕರು ಅಥವಾ ಸ್ವಂತ ಉದ್ದಿಮೆಯನ್ನು ಮುನ್ನೆಡೆಸುತ್ತಿರುವ ಅಭ್ಯರ್ಥಿಗಳು ಬ್ಯಾಂಕ್ ಮೂಲಕ ಪಡೆಯುವ ಸಾಲಕ್ಕೆ ಶೇ 3% ಬಡ್ಡಿದರ ಸಹಾಯಧನವನ್ನು(Bank Loan Interest Subsidy) ಪಡೆಯಲು ಅವಕಾಶವಿದ್ದು ಕೇಂದ್ರ ಸರಕಾರದ AIF ಯೋಜನೆ ಅಡಿಯಲ್ಲಿ ಬಡ್ಡಿ ಸಹಾಯಧನವನ್ನು ಪಡೆಯಬಹುದು. ಈ ಯೋಜನೆಯ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ಅನೇಕರಿಗೆ AIF ಯೋಜನೆಯ ಕುರಿತು ಮಾಹಿತಿಯೇ ಇರುವುದಿಲ್ಲ ಕೃಷಿಕರು ಬ್ಯಾಂಕ್ ನಲ್ಲಿ ಕೃಷಿ ಚಟುವಟಿಕೆ ಮತ್ತು ಇನ್ನಿತರೆ ಉದ್ದಿಮೆಗಳಿಗೆ ಸಾಲವನ್ನು(Bank Loan Interest) ಪಡೆದುಕೊಂಡಲ್ಲಿ ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಶೇ 3% ಬಡ್ದಿ ರಿಯಾಯಿತಿಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
AIF ಯೋಜನೆಯಡಿ ಬಡ್ಡಿ ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕಾಗಿ ಬೇಕಾಗುವ ದಾಖಲಾತಿಗಳೇನು? ಶೇ 3% ಬಡ್ಡಿ ಸಬ್ಸಿಡಿ ಫಲಾನುಭವಿಗಳಿಗೆ(Bank Loan Interest Subsidy Application) ಹೇಗೆ ಸಿಗುತ್ತದೆ? ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.
What Is AIF Scheme-ಏನಿದು AIF ಯೋಜನೆ?
ಕೇಂದ್ರ ಸರಕಾರವು ಕೃಷಿಕರಿಗೆ ವಿವಿಧ ಬಗ್ಗೆಯ ಕೊಯ್ಲೋತ್ತರ ಸೌಲಭ್ಯಗಳನ್ನು ಒದಗಿಸಲು ಮತ್ತು ಬ್ಯಾಂಕ್ ಮೂಲಕ ಪಡೆಯುವ ಸಾಲಕ್ಕೆ ಶೇ 3% ಬಡ್ಡಿ ಸಹಾಯಧನವನ್ನು ಒದಗಿಸಲು ಕೃಷಿ ಮೂಲಸೌಕರ್ಯ ನಿಧಿ(AIF-Agriculture Infrastructure Fund) ಯೋಜನೆಯನ್ನು ಜಾರಿಗೆ ತರಲಾಗಿದ್ದು ರೈತರು ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಮೂಲಕ ಪಡೆಯುವ ಸಾಲದ ಬಡ್ಡಿಗೆ ಶೇ 3% ಅಂದರೆ ಉದಾಹರಣೆಗೆ ಹೇಳುವುದಾದರೆ ನೀವು ಬ್ಯಾಂಕ್ ನಲ್ಲಿ ಮಾಡಿರುವ ಸಾಲಕ್ಕೆ ವಾರ್ಷಿಕ 50,000 ಬಡ್ಡಿ ಪಾವತಿ ಮಾಡುತ್ತಿದ್ದರೆ ಇದಕ್ಕಾಗಿ ಈ ಯೋಜನೆಯಡಿ ರೂ 15,000/- ಸಹಾಯಧನ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗುತ್ತದೆ.
Bank Loan Interest Subsidy-ಶೇ 3% ಸಬ್ಸಿಡೆ ಹೇಗೆ ವರ್ಗಾವಣೆ ಅಗುತ್ತದೆ?
ಬ್ಯಾಂಕ್ ಮೂಲಕ ಒಮ್ಮೆ ಸಾಲವನ್ನು ಪಡೆದ ಬಳಿಕ ಈ ಸಾಲಕ್ಕೆ ಬ್ಯಾಂಕ್ ನಲ್ಲಿ ಶೇ 9% ಬಡ್ಡಿದರ ನಿಗದಿಪಡಿಸಿದರೆ ನೀವು ಇದನ್ನು ಪಾವತಿ ಮಾಡಿ 3 ತಿಂಗಳಲ್ಲಿ ಇದಕ್ಕಾ ಶೇ 3% ಬಡ್ಡಿ ಸಹಾಯಧನ ನಿಮ್ಮ ಉಳಿತಾಯ ಖಾತೆಗೆ ಡಿಬಿಟಿ ಮೂಲಕ ಬಡ್ಡಿ ಸಬ್ಸಿಡಿ ಜಮಾ ಅಗುತ್ತದೆ.
ಇತರೆ ಯೋಜನೆ ಅಡಿಯಲ್ಲಿ ಸಾಲ ಪಡೆದರು ಅರ್ಜಿ ಸಲ್ಲಿಸಿಬಹುದು:
ಈಗಾಗಲೇ ಕೇಂದ್ರ ಸರಕಾರದ ಈ NHB, MoNRE, MoFPI(PMFME), MoFPI(PMKSY), AC&ABC, PMEGP, PMKUSUM(B&C) ಯೋಜನೆ ಅಡಿಯಲ್ಲಿ ಸಬ್ಸಿಡಿಯಲ್ಲಿ ಉದ್ದಿಮೆಯನ್ನು ಆರಂಭಿಸಲು ಸಾಲವನ್ನು ಪಡೆದಿರುವ ಫಲಾನುಭವಿಗಳು ಬಡ್ಡಿ ಸಬ್ಸಿಡಿಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
Who Can Apply For AIF Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಈ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಕೃಷಿಕರಲ್ಲದೇ ಈ ಕೆಳಗಿನ ಪಟ್ಟಿಯಲ್ಲಿರುವ ಸಂಸ್ಥೆಗಳು ಸಹ ಅರ್ಜಿ ಸಲ್ಲಿಸಲು ಪ್ರಯೋಜನವನ್ನು ಪಡೆಯಲು ಅವಕಾಶವಿರುತ್ತದೆ.
ರೈತರು/Farmers
ಕೃಷಿ ಉದ್ದಿಮೆಗಳು/Agri-Entrepreneur
ರೈತ ಉತ್ಪಾದಕ ಕಂಪನಿ/FPO
ಸ್ವ-ಸಹಾಯ ಗುಂಪು/SHG
ಸ್ಟಾರ್ಟ್ ಅಪ್/Start-Up
ಕೋ-ಆಪರೇಟಿವ್ ಸೊಸೈಟಿ/Cooperative Society
Agriculture Infrastructure Fund Online Application-AIF ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಕೃಷಿ ಮೂಲಸೌಕರ್ಯ ನಿಧಿ(AIF-Agriculture Infrastructure Fund) ಯೋಜನೆ ಅಡಿಯಲ್ಲಿ ಕೃಷಿಕರು ಬಡ್ಡಿ ಸಬ್ಸಿಡಿಯನ್ನು ಪಡೆಯಲು ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿಬೇಕು.
Step-1: ಮೊದಲಿಗೆ ಇಲ್ಲಿ ಕ್ಲಿಕ್ AIF Online Application ಮಾಡಿ ಅಧಿಕೃತ ಕೃಷಿ ಮೂಲಸೌಕರ್ಯ ನಿಧಿ(AIF-Agriculture Infrastructure Fund) ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಿ.
Step-2: ಇದಾದ ಬಳಿಕ ಈ ಪೇಜ್ ನ ಮುಖಪುಟದಲ್ಲಿ ಕಾಣುವ "Beneficiary Corner" ಆಯ್ಕಯ ಮೇಲೆ ಕ್ಲಿಕ್ ಮಾಡಿ "Register As Beneficiary" ಇತರೆ ಯೋಜನೆಯಡಿ ಸಾಲ ಪಡೆದಿದ್ದರೆ "Convergence with Other Schemes" ಬಟನ್ ಮೇಲೆ ಕ್ಲಿಕ್ ಮಾಡಿ.
Step-3: ನಂತರ ಈ ಪುಟದಲ್ಲಿ ಅರ್ಜಿದಾರರ ಹೆಸರು, ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆಯನ್ನು ಹಾಕಿ Send OTP ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
Step-4: ಅಧಿಕೃತ ಅರ್ಜಿ ನಮೂನ್ಎ ತೆರೆದುಕೊಂಡ ನಂತರ ಇಲ್ಲಿ ಕೇಳುವ ಎಲ್ಲಾ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
Required Documents For Online Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
ಕೃಷಿ ಮೂಲಸೌಕರ್ಯ ನಿಧಿ(AIF) ಯೋಜನೆಯಡಿ ಬಡ್ಡಿ ಸಬ್ಸಿಡಿಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಅರ್ಜಿದಾರರ ಆಧಾರ್ ಕಾರ್ಡ
ಬ್ಯಾಂಕ್ ಪಾಸ್ ಬುಕ್
ಅರ್ಜಿದಾರರ ಪೋಟೋ
ಸಾಲ ಮಂಜೂರಾತಿ ಪತ್ರ
ಮೊಬೈಲ್ ನಂಬರ್
AIF Scheme Website-ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್- Click Here
AIF Scheme Helpline-ಸಹಾಯವಾಣಿ- Click Here