ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾದ ಝೀಲಿಯೋ ಇ (ZELIO E) ಮೊಬಿಲಿಟಿ, ತನ್ನ ಕಡಿಮೆ - ವೇಗದ ಎಲೆಕ್ಟ್ರಿಕ್ ಸ್ಕೂಟರ್ 'ಗ್ರೇಸಿ' (Gracyi) ನ ಫೇಸ್‌ಲಿಫ್ಟ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇಂದಿನ ನಗರ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾದ, ನವೀಕರಿಸಿದ ಗ್ರೇಸಿ ಸುಧಾರಿತ ಕಾರ್ಯಕ್ಷಮತೆ, ಉತ್ತಮ ಸೌಕರ್ಯ ಮತ್ತು ವಿದ್ಯಾರ್ಥಿಗಳು, ವೃತ್ತಿಪರರು, ಸಣ್ಣ ಕೆಲಸಗಾರರಿಗೆ ಅನುಗುಣವಾಗಿ ದೈನಂದಿನ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಮಾರ್ಟ್, ಸುಸ್ಥಿರ ಮತ್ತು ಎಲ್ಲರೂ ಖರೀದಿಸಿಬಹುದಾದ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಹೊಸ ಫೇಸ್‌ಲಿಫ್ಟ್ ಗ್ರೇಸಿ ಅನ್ನು ವಿವಿಧ ಪ್ರಯಾಣದ ಅಗತ್ಯಗಳನ್ನು ಪೂರೈಸಲು ಮೂರು ವಿಭಿನ್ನ ಬ್ಯಾಟರಿ ಸಂರಚನೆಗಳಲ್ಲಿ ನೀಡಲಾಗುತ್ತಿದೆ. ಲಿಥಿಯಂ - ಐಯಾನ್ ಬ್ಯಾಟರಿ ವೇರಿಯೆಂಟ್ 60V/30Ah ಪ್ಯಾಕ್‌ನಲ್ಲಿ ಲಭ್ಯವಿದ್ದು, ರೂ. 66,000 (ಎಕ್ಸ್ - ಶೋರೂಂ) ಬೆಲೆಯಲ್ಲಿ ಸಿಗಲಿದೆ ಒಮ್ಮೆ ಚಾರ್ಜ್ ಮಾಡಿದ್ರೆ ಇದು 90 ರಿಂದ 100 ಕಿ.ಮೀ ಕ್ರಮಿಸಬಲ್ಲದು.
ಜೆಲ್ ಬ್ಯಾಟರಿ ವೇರಿಯೆಂಟ್‌ಗಳಲ್ಲಿ ಮೊದಲನೆಯದು 60V/32Ah ಪ್ಯಾಕ್ ಹೊಂದಿದ್ದು ರೂ. 54,000 ಎಕ್ಸ್ - ಶೋರೂಂ ಬೆಲೆಯನ್ನು ಹೊಂದಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 80 ರಿಂದ 90 ಕಿ.ಮೀ ಚಲಿಸಬಲ್ಲದು. ಎರಡನೇಯದು 72V/42Ah ಪ್ಯಾಕ್ ಹೊಂದಿದ್ದು, ಇದರ ಬೆಲೆಯು ರೂ. 58,500/- ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 130 ರಿಂದ 140 ಕಿ.ಮೀ ರೇಂಜ್ ನೀಡುತ್ತದೆ.
ವೆಚ್ಚ -
ಸಮರ್ಥ ಮತ್ತು ವಿಶ್ವಾಸಾರ್ಹ ನಗರ ಸವಾರಿಗಳನ್ನು ನೀಡಲು ನಿರ್ಮಿಸಲಾದ ಹೊಸ ಗ್ರೇಸಿ, ಗಂಟೆಗೆ 25 ಕಿ.ಮೀ. ಗರಿಷ್ಠ ವೇಗ ಮತ್ತು ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ. ಸವಾರಿ ರೇಂಜ್ ನೀಡುತ್ತದೆ. ಇದು ಶಕ್ತಿಯುತ 60/72V BLDC ಮೋಟಾರ್ ಒಳಗೊಂಡಿದ್ದು, ಪ್ರತಿ ಪೂರ್ಣ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ.
ಭಾರತದ ನಗರ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಈ ಸ್ಕೂಟರ್ 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್, 85 ಕೆ.ಜಿ ಒಟ್ಟು ತೂಕ ಮತ್ತು 150 ಕೆ.ಜಿ ಪೇಲೋಡ್ ಸಾಮರ್ಥ್ಯದೊಂದಿಗೆ ಬರುತ್ತದೆ. ಚಾರ್ಜಿಂಗ್ ಅನುಕೂಲಕರವಾಗಿದ್ದು, ಬ್ಯಾಟರಿ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಲಿಥಿಯಂ - ಐಯಾನ್ ವೇರಿಯೆಂಟ್‌ಗಳು ಫುಲ್ ಚಾರ್ಜ್ ಆಗಲು 4 ಗಂಟೆ ಮತ್ತು ಜೆಲ್ ಬ್ಯಾಟರಿ ಮಾಡಲ್‌ಗಳು 8 ಗಂಟೆ ತೆಗೆದುಕೊಳ್ಳುತ್ತವೆ.
ಸುರಕ್ಷತೆ ಮತ್ತು ಸವಾರಿ ಗುಣಮಟ್ಟಕ್ಕಾಗಿ,
ಗ್ರೇಸಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿದ್ದು, ಎರಡೂ ತುದಿಗಳಲ್ಲಿ 90-90/12 ಟೈರ್‌ಗಳೊಂದಿಗೆ ಬರುತ್ತದೆ. ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳಿಂದ ಬೆಂಬಲಿತವಾಗಿದೆ. ಈ ವೈಶಿಷ್ಟ್ಯಗಳು ವೈವಿಧ್ಯಮಯ ನಗರ ಭೂಪ್ರದೇಶಗಳಲ್ಲಿ ಸ್ಥಿರತೆ, ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸುತ್ತವೆ.
ಈ ಸ್ಕೂಟರ್ ಡಿಜಿಟಲ್ ಮೀಟರ್, ಎಲ್ಇಡಿ ಹೆಡ್‌ಲ್ಯಾಂಪ್, ಕೀಲೆಸ್ ಡ್ರೈವ್, ಆಂಟಿ - ಥೆಫ್ಟ್ ಅಲಾರ್ಮ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಪ್ರಯಾಣಿಕರ ಫುಟ್‌ರೆಸ್ಟ್ ಅನ್ನು ಒಳಗೊಂಡಿದೆ. ವೈಟ್, ಬ್ಲಾಕ್ ಹಾಗೂ ಬ್ಲಾಕ್ - ವೈಟ್, ಯೆಲ್ಲೋ - ಬ್ಲೂ ಮತ್ತು ಬ್ಲಾಕ್ - ರೆಡ್ ಸೇರಿದಂತೆ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಝೀಲಿಯೊ ಕಂಪನಿಯು, ಮೋಟಾರ್ ಕಂಟ್ರೋಲ್ ಮತ್ತು ಚೌಕಟ್ಟಿನ ಮೇಲೆ 2 ವರ್ಷಗಳ ವಾರೆಂಟಿಯನ್ನು ನೀಡುತ್ತಿದೆ. ಜೊತೆಗೆ ಲಿಥಿಯಂ - ಐಯಾನ್ ಬ್ಯಾಟರಿಗಳ ಮೇಲೆ 3 ವರ್ಷಗಳ ವಾರೆಂಟಿ ಮತ್ತು ಜೆಲ್ ಬ್ಯಾಟರಿಗಳ ಮೇಲೆ 1 ವರ್ಷದ ವಾರೆಂಟಿ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
2021 ರಲ್ಲಿ ಪ್ರಾರಂಭವಾದ ಝೀಲಿಯೋ ಇ ಮೊಬಿಲಿಟಿ, ಭಾರತದಲ್ಲಿ ತ್ವರಿತವಾಗಿ ಪ್ರಮುಖ ಕಂಪನಿಯಾಗಿ ಹೊರಹೊಮ್ಮಿದೆ. 2,00,000 ಕ್ಕೂ ಹೆಚ್ಚು ರೈಡರ್‌ಗಳು ಮತ್ತು 400 ಕ್ಕೂ ಹೆಚ್ಚು ಔಟ್‌ಲೆಟ್‌ಗಳ ಡೀಲರ್‌ಶಿಪ್ ಹೆಜ್ಜೆಗುರುತನ್ನು ಹೊಂದಿರುವ ಕಂಪನಿಯು, 2025 ರ ಅಂತ್ಯದ ವೇಳೆಗೆ ತನ್ನ ಜಾಲವನ್ನು 1,000 ಡೀಲರ್‌ಶಿಪ್‌ಗಳಿಗೆ ಹೆಚ್ಚಿಸುವ ಹಾದಿಯಲ್ಲಿದೆ ಎಂದು ಹೇಳಿಕೊಂಡಿದೆ.