ರೇಶನ್ ಕಾರ್ಡ್ ರದ್ದಾಗಲು ಪ್ರಮುಖ ಕಾರಣಗಳ ಪಟ್ಟಿ ಬಿಡುಗಡೆ ration card cancellation

Ration card cancellation ರಾಜ್ಯಾದ್ಯಂತ ಅನರ್ಹ ಪಡಿತರ ಚೀಟಿದಾರರ ಪಟ್ಟಿ ಸಿದ್ಧವಾಗುತ್ತಿದ್ದು, ಹಲವಾರು ರೇಶನ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ನಡೆಯುತ್ತಿದೆ. ಆಹಾರ ಮತ್ತು ನಾಗರಿಕರ ವ್ಯವಹಾರಗಳ ಇಲಾಖೆಯು ಬಿಪಿಎಲ್ (BPL) ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು ಪಡೆಯಲು ಅನರ್ಹರಾದ ಕುಟುಂಬಗಳನ್ನು ಗುರುತಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ರದ್ದು ಮಾಡುವ ಪ್ರಮುಖ ಕಾರಣಗಳು:

ಪಡಿತರ ಚೀಟಿಯಲ್ಲಿರುವ ಸದಸ್ಯರು ಸೇರಿ 7 ಎಕರೆಗೂ ಹೆಚ್ಚು ಜಮೀನು ಹೊಂದಿದ್ದರೆ.

4 ಚಕ್ರ ವಾಹನ (white board) ಹೊಂದಿರುವವರು ಅಥವಾ ಅವರ ಅವಲಂಬಿತರು.

ಜಿ.ಎಸ್.ಟಿ ಅಥವಾ ಆದಾಯ ತೆರಿಗೆ ಪಾವತಿಸುವವರು ಅಥವಾ ಅವರ ಅವಲಂಬಿತರು.

ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರು.

ಸಹಕಾರಿ ಸಂಘದ ಖಾಯಂ ನೌಕರರು.

ವೃತ್ತಿಪರರು (ವೈದ್ಯರು, ಇಂಜಿನಿಯರ್‌ಗಳು, ವಕೀಲರು ಇತ್ಯಾದಿ) ಅಥವಾ ಅವರ ಅವಲಂಬಿತರು.

ಗುತ್ತಿಗೆದಾರರು, APMC ಟ್ರೇಡರ್‌ಗಳು, ಕಮಿಷನ್ ಏಜಂಟರು, ಬೀಜ/ಗೊಬ್ಬರ ಡೀಲರ್‌ಗಳು.

ಅನುದಾನಿತ ಶಾಲಾ/ಕಾಲೇಜು ನೌಕರರು.

ಸರ್ಕಾರಿ ಸ್ವಾಮ್ಯದ ಉದ್ಯಮಗಳು, ಮಂಡಳಿಗಳು, ನಿಗಮಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆಗಳ ನೌಕರರು.

ಅರ್ಹರಿದ್ದರೂ ಕಾರ್ಡ್ ರದ್ದು ಆಯಿತೇ?

ಯಾವುದೇ ಕಾರಣವಿಲ್ಲದೆ ಅರ್ಹ ಕುಟುಂಬಗಳ ಕಾರ್ಡ್ ರದ್ದು ಮಾಡಲಾಗಿದ್ದರೆ, ತಕ್ಷಣವೇ ತಮ್ಮ ತಾಲ್ಲೂಕು ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು.

ನಾಗರಿಕರಿಗೆ ಸಲಹೆ:

ಅನರ್ಹ ಕುಟುಂಬಗಳು ಸ್ವಯಂವಾಗಿ ರೇಶನ್ ಕಾರ್ಡ್ ಅನ್ನು ರದ್ದುಪಡಿಸುವ ಮೂಲಕ ನಿಜವಾದ ಬಡ ಕುಟುಂಬಗಳಿಗೆ ಲಾಭ ತಲುಪುವಂತೆ ಸಹಕರಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.


Previous Post Next Post