LIC ಖಾಲಿ ಇರುವ ಹುದ್ದೆಗಳ ನೇಮಕಾತಿ ಅಧಿ ಸೂಚನೆ ಪ್ರಕಟ; ಡಿಗ್ರಿ ಆದವರು ಕೂಡಲೇ ಅರ್ಜಿ ಸಲ್ಲಿಸಿ

LIC ಖಾಲಿ ಇರುವ ಹುದ್ದೆಗಳ ನೇಮಕಾತಿ ಅಧಿ ಸೂಚನೆ ಪ್ರಕಟ; ಡಿಗ್ರಿ ಆದವರು ಕೂಡಲೇ ಅರ್ಜಿ ಸಲ್ಲಿಸಿ.ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ದೇಶಾದ್ಯಂತ ಖಾಲಿಯಿರುವ 350 ಸಹಾಯಕ ಆಡಳಿತಾಧಿಕಾರಿ (Assistant Administrative Officer – AAO) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಯಾವುದೇ ಪದವಿ ಪಡೆದವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಒಟ್ಟು ಹುದ್ದೆಗಳು: 350

ಸಾಮಾನ್ಯ ವರ್ಗ: 142

ಒಬಿಸಿ (OBC): 88

ಅನುಸೂಚಿತ ಜಾತಿ (SC): 51

ಅನುಸೂಚಿತ ಪಂಗಡ (ST): 22

ಆರ್ಥಿಕವಾಗಿ ದುರ್ಬಲ ವರ್ಗ (EWS): 38

ಅರ್ಹತಾ ಮಾನದಂಡ:

ಶೈಕ್ಷಣಿಕ ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ (ಗ್ರ್ಯಾಜುಯೇಶನ್) ಉತ್ತೀರ್ಣರಾಗಿರಬೇಕು.

ವಯೋಮಿತಿ: 1 ಆಗಸ್ಟ್ 2025 ರಂದು ಅಭ್ಯರ್ಥಿಯ ವಯಸ್ಸು 21 ರಿಂದ 30 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ:

SC/ST: 5 ವರ್ಷಗಳ ಸಡಿಲಿಕೆ

OBC: 3 ವರ್ಷಗಳ ಸಡಿಲಿಕೆ

PwBD: 10 ರಿಂದ 15 ವರ್ಷಗಳ ಸಡಿಲಿಕೆ

ಅರ್ಜಿ ಸಲ್ಲಿಕೆ ವಿಧಾನ:

ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.

ಕೊನೆಯ ದಿನಾಂಕ: 8 ಸೆಪ್ಟೆಂಬರ್ 2025

ಅರ್ಜಿ ಶುಲ್ಕ:

ಸಾಮಾನ್ಯ & OBC: ₹700/-

SC/ST/PwBD: ₹85/-

ಆಯ್ಕೆ ಪ್ರಕ್ರಿಯೆ:

ಆಯ್ಕೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ:

ಪ್ರಾಥಮಿಕ ಪರೀಕ್ಷೆ (Prelims) – 3 ಅಕ್ಟೋಬರ್ 2025

ಮುಖ್ಯ ಪರೀಕ್ಷೆ (Mains) – 8 ನವೆಂಬರ್ 2025

ಸಂದರ್ಶನ

ವೈದ್ಯಕೀಯ ತಪಾಸಣೆ

ವೇತನ ಮತ್ತು ಸೌಲಭ್ಯಗಳು:

ಆಯ್ಕೆಯಾದವರಿಗೆ ಆಕರ್ಷಕ ವೇತನವಿದೆ. ಪ್ರಾರಂಭಿಕ ಮೂಲ ವೇತನ ಮಾಸಿಕ ₹88,635 ರಿಂದ ₹1,69,025 ರವರೆಗೆ ಇರುತ್ತದೆ. ಇದರ ಜೊತೆಗೆ ಎಲ್‌ಐಸಿ ನೌಕರರಿಗೆ ಒದಗಿಸುವ ಎಲ್ಲಾ ಭತ್ಯೆಗಳು ಮತ್ತು ಸೌಲಭ್ಯಗಳು ಲಭ್ಯವಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸಲು, ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ licindia.in ಗೆ ಭೇಟಿ ನೀಡಿ.

Previous Post Next Post