Krishi Mela Dharwad-ಧಾರವಾಡ ಕೃಷಿ ಮೇಳ 2025: ರೈತರ ಹಬ್ಬಕ್ಕೆ ದಿನಾಂಕ ಘೋಷಣೆ

ಕೃಷಿ ವಿಶ್ವವಿದ್ಯಾಲಯ ಧಾರವಾಡ ವತಿಯಿಂದ(UASD) "ಪೌಷ್ಠಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು" ಎನ್ನುವ ಶೀರ್ಷಿಕೆ ಅಡಿಯಲ್ಲಿ 2025 ನೇ ಸಾಲಿನ ಕೃಷಿ ಮೇಳವನ್ನು(Krishi Mela Dharwad) ಆಯೋಜನೆ ಮಾಡಲು ಅಧಿಕೃತ ದಿನಾಂಕವನ್ನು ಪ್ರಕಟಣೆ ಮಾಡಲಾಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಲೇಖನದಲ್ಲಿ ಕೃಷಿ ಮೇಳದಲ್ಲಿ(Krishi Mela Dharwad 2025) ರೈತರಿಗೆ ಯಾವೆಲ್ಲ ವಿಷಯಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ಆಯೋಜನೆ ಮಾಡಲಾಗಿದೆ ಎನ್ನುವ ಮಾಹಿತಿ ಜೊತೆಗೆ ಮೇಳದಲ್ಲಿ ಭಾಗವಹಿಸಲು ಮಳಿಗೆಗಲನ್ನು ಪಡೆಯುವುದರ ಕುರಿತು ವಿವರ ಹಾಗೂ ಮೇಳದ ಕುರಿತು ಇನ್ನಷ್ಟು ಅಗತ್ಯ ಮಾಹಿತಿಯನ್ನು ತಿಳಿಸಲಾಗಿದೆ.

ಕೃಷಿ ಮೇಳದ(Krishi mela) ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ವಿವಿ ಕುಲಪತಿಗಾಳದ(VC) ಪಿ ಎಲ್ ಪಾಟೀಲ್ ಅವರು ಕಳೆದ ವರ್ಷ ಕೃಷಿ ಮೇಳದಲ್ಲಿ 10 ಲಕ್ಷಕ್ಕೂ ಅಧಿಕ ರೈತರು ಭಾಗವಹಿಸಿದ್ದು ಈ ಬಾರಿಯ ಮೇಳದಲ್ಲಿಯು ಸಹ ಕೃಷಿ ನಾವೀನ್ಯತೆಗೆ ಪ್ರತೇಕ ಸ್ಟಾಲ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು ಕೃಷಿಯಲ್ಲಿ ವಿವಿಧ ಬಗ್ಗೆಯ ಆವಿಷ್ಕಾರವನ್ನು ಮಾಡಿರುವ ಯುವ ಪ್ರತಿಭೆಗಳಲ್ಲಿಗೆ ಬೆಂಬಲವನ್ನು ನೀಡಲಾಗುತ್ತಿದೆ ಎಂದು ಮಾಹಿತಿಯನ್ನು ತಿಳಿಸಿದರು.

Krishimela 2025-ಧಾರವಾಡ ಕೃಷಿ ಮೇಳ:

ಕೃಷಿ ವಿಶ್ವವಿದ್ಯಾಲಯ ಧಾರವಾಡ ದಿಂದ ಪ್ರತಿ ವರ್ಷ ಆಯೋಜನೆ ಮಾಡುವ ಕೃಷಿ ಮೇಳವು ಉತ್ತರ ಕರ್ನಾಟಕ ಭಾಗದಲ್ಲಿ ಒಂದು ರೀತಿಯ ಅತೀ ದೊಡ್ಡ ರೈತರ ಜಾತ್ರೆ ಅಥವಾ ಹಬ್ಬ ಎಂದು ಹೇಳಬಹುದು ಈ ಮೇಳದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ರೈತರು ಸೇರುತ್ತಾರೆ. ರೈತರಿಗೆ ಈ ಮೇಳದಲ್ಲಿ ನೂತನ ಕೃಷಿ ಯಂತ್ರೋಪಕರಣ ಪ್ರಾತ್ಯಕ್ಷಿಕೆ, ಕೃಷಿ ಸಂಶೋಧನ ಕೇಂದ್ರದ ನೂತನ ತಳಿಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ತಾಕು ವಿಕ್ಷಣೆ, ಕೃಷಿ ನಾವೀನ್ಯತೆಗಳ ಕುರಿತು ಈಗಾಗಲೇ ಸಾಧನೆ ಮಾಡಿರುವ ರೈತರ ಮಳಿಗೆಗಳ ಮೂಲಕ ಇತರೆ ರೈತರಿಗೆ ಮಾಹಿತಿ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿಯನ್ನು ಈ ಮೇಳದ ಮೂಲಕ ಪಡೆಯಬಹುದು.

Dharwad Krishimela 2025 Dates-ಕೃಷಿ ಮೇಳ ಧಾರವಾಡ 2025 ನಡೆಯಲಿರುವ ದಿನಾಂಕ:

ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ಒಟ್ಟೂ ನಾಲ್ಕು ದಿನದ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿದ್ದು ಈ ಮೇಳವು 13 ಸೆಪ್ಟೆಂಬರ್ 2025 ರಿಂದ ಪ್ರಾರಂಭವಾಗಿ 16 ಸೆಪ್ಟೆಂಬರ್ 2025 ಕ್ಕೆ ಮುಕ್ತಾಯವಾಗಲಿದೆ.

Krishimela Dharwad 2025 Details-ಕೃಷಿ ಮೇಳದಲ್ಲಿ ಏನೆಲ್ಲ ಇರಲಿದೆ?

ವಿವಿಧ ಕೃಷಿ ಪರಿಕರಗಳ ಮಾರಾಟ ಮತ್ತು ಪ್ರದರ್ಶನ.

ಕೃಷಿ ನಾವೀನ್ಯತೆಗಳನ್ನು ಅಳವಡಿಸಿಕೊಂಡಿರುವ ರೈತರ ಮಳಿಗೆಗಳು.

ನೀರಾವರಿ ಉಪಕರಣಗಳ ಪ್ರಾತ್ಯಕ್ಷಿಕೆ.

ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ

ಸಿರಿಧಾನ್ಯಗಳ ಮಹತ್ವ

ಕೃಷಿ-ತೋಟಗಾರಿಕೆ-ಅರಣ್ಯ ಸಮಗ್ರ ಪದ್ದತಿಗಳು.

ಹೈಟೆಕ್ ತೋಟಗಾರಿಕೆ.

ಪಶು ಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು.

ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ.

ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು.

ಶ್ರೇಷ್ಠ ಕೃಷಿಕರು ಮತ್ತು ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ.

ರೈತ ವಿಜ್ಞಾನಿ ಸಂವಾದ.

ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ ವಿತರಣೆ.

Dharwad Krishimela Stall Booking- ಮೇಳದಲ್ಲಿ ಭಾಗವಹಿಸಲು ಮುಂಚಿತವಾಗಿ ಮಳಿಗೆಗಳನ್ನು ಬುಕ್ ಮಾಡುವುದು ಹೇಗೆ?

ರೈತರು ತಮ್ಮ ಉತ್ಪನ್ನದ ಕುರಿತು ಮೇಳದಲ್ಲಿ ಭಾಗವಹಿಸುವ ಇತರೆ ಜಿಲ್ಲೆಯ ರೈತರಿಗೆ ಮಾಹಿತಿಯನ್ನು ಒದಗಿಸಲು ಮೇಳದಲ್ಲಿ ಭಾಗವಹಿಸಲು ಮುಂಚಿತವಾಗಿ ಮಳಿಗೆಗಳನ್ನು ಬುಕ್ ಮಾಡಲು ಈ 8277478507 or 0836-221497 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಗತ್ಯ ವಿವರ ಮತ್ತು ಹಣವನ್ನು ಪಾವತಿ ಮಾಡಿ ಮಳಿಗೆಗಳನ್ನು ಬುಕ್ ಮಾಡಬಹುದು.

Dharwad Krishimela Video-ಕೃಷಿ ಮೇಳ 2025 ರ ಕುರಿತು ಮಾಹಿತಿಯ ವಿಡಿಯೋ ವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ-Watch Now

Dharwad Krishimela Website-ಕೃಷಿ ಮೇಳದ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಜಾಲತಾಣ-Click Here

Previous Post Next Post