ಸೈಬರ್ ವಂಚಕರ ಹೆಡೆಮುರಿ ಕಟ್ಟಲು ರಾಜ್ಯ ಸರ್ಕಾರ ಸಜ್ಜಾಗಿದೆ. ಹೈಕೋರ್ಟ್ ಸೂಚನೆ ಬೆನ್ನಲ್ಲೆ ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಕರ್ನಾಟಕದಲ್ಲಿ ಸ್ಥಾಪನೆಯಾಗಿದೆ. ಈ ಸೈಬರ್ ಕಮಾಂಡ್ ಸೆಂಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ಎಷ್ಟು ವಿಂಗ್‌ಗಳನ್ನು ಒಳಗೊಂಡಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೈಬರ್ ವಂಚನೆಗೆ (Cyber fraud) ಕಡಿವಾಣ ಹಾಕಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಂದು ದೇಶದಲ್ಲೇ ಮೊದಲ ಸೈಬರ್ ಕಮಾಂಡ್ ಸೆಂಟರ್ (cyber command center) ಅನ್ನು ಬೆಂಗಳೂರಲ್ಲಿ ತೆರೆಯಲಾಗಿದೆ. ಪ್ರಣಬ್ ಮೊಹಂತಿಯವರನ್ನ ಡಿಐಜಿಯಾಗಿ ಕಮಾಂಡ್ ಸೆಂಟರ್‌ಗೆ ನೇಮಕ ಮಾಡಲಾಗಿದೆ. ಸೈಬರ್ ಕಮಾಂಡ್ ಸೆಂಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಯಲು ಮುಂದೆ ಓದಿ.ಕೇವಲ ಸೈಬರ್ ಫ್ರಾಡ್ ಪತ್ತೆಗೆ ಸಿದ್ದವಾಗಿರುವ ಕಮಾಂಡ್ ಸೆಂಟರ್‌ನಲ್ಲಿ ನಾಲ್ಕು ವಿಂಗ್‌ಗಳು ಕಾರ್ಯನಿರ್ವಹಣೆ ಮಾಡಲಿವೆ.
High Court Directs Govt to Set Up Powerful Cyber Command Centre Amid Surge in Cybercrime
1. ಸೈಬರ್ ಕ್ರೈಂ ವಿಂಗ್: ಸೈಬರ್ ಅಪರಾಧಗಳನ್ನ ಪತ್ತೆ ಮಾಡಿ, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೆ.
2. ಸೈಬರ್ ಸೆಕ್ಯೂರಿಟಿ ವಿಂಗ್: ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣ, ಸಾಫ್ಟ್‌ವೇರ್ ಹ್ಯಾಕ್ ಮಾಡುವವರನ್ನ ಪತ್ತೆ ಮಾಡುತ್ತೆ.
3. IDTU ವಿಂಗ್: ಸೈಬರ್ ಅಪರಾಧಿಗಳ ಸ್ಥಳ ಪತ್ತೆ ಮಾಡುವುದು, ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಿಂದ ಮಾಹಿತಿ ಪಡೆಯುವುದು. ಐಪಿ ಅಡ್ರೆಸ್ ಪತ್ತೆ ಮಾಡುತ್ತೆ
4. ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಜನಜಾಗೃತಿ ದಳ: ಸೈಬರ್ ಕಮಾಂಡ್ ಸೆಂಟರ್ ಅಧಿಕಾರಿಗಳಿಗೆ ತರಬೇತಿ ನೀಡುವುದು. ಟೆಕ್ನಿಕಲ್ ಜ್ಞಾನ ವೃದ್ಧಿ ಮಾಡುವುದು. ಹೊಸ ತಂತ್ರಜ್ಞಾನಗಳ ತಿಳುವಳಿಕೆ ನೀಡುವುದು. ಮತ್ತು ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳಿಗೆ ಸೈಬರ್ ಅಪರಾಧ ಅರಿವು ಮೂಡಿಸುವ ಕೆಲಸ ಮಾಡುತ್ತೆ.
ಈ ರೀತಿಯಾಗಿ ಸೈಬರ್ ಕಮಾಂಡ್ ಸೆಂಟರ್ ಕೆಲಸ ನಿರ್ವಹಣೆ ಮಾಡಲಿದೆ. 45 ಸೈಬರ್ ಪೊಲೀಸ್ ಠಾಣೆಗಳು ಬೆಂಗಳೂರು ನಗರದಲ್ಲಿವೆ. ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳು ಎಸ್ಪಿಗಳ ಅಧೀನದಲ್ಲಿ ತನಿಖೆಗೆ ಒಳಪಟ್ಟಿರುತ್ತವೆ.
ಈಗಾಗಲೇ 16000 ಸಾವಿರ ಪ್ರಕರಣಗಳು ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಅಲ್ಲದೇ ದಿನೇದಿನೆ ಸೈಬರ್ ಪ್ರಕರಣ ಜಾಸ್ತಿ ಆಗ್ತಾನೇ ಇದೆ. ರಾಜ್ಯ ಸರ್ಕಾರ ಸ್ಥಾಪನೆ ಮಾಡಿರುವ ಸೈಬರ್ ಕಮಾಂಡ್ ಸೆಂಟರ್‌ನಿಂದಾದರೂ ಸೈಬರ್ ಕೈಂ ಕಂಟ್ರೋಲ್ ಆಗುತ್ತಾ ಕಾದು ನೋಡಬೇಕು.