Samsung Dolby Soundbar: ಸುಮಾರು ₹11,990 ರೂಗಳಿಗೆ ಸ್ಯಾಮ್‌ಸಂಗ್ ಕಂಪನಿಯ ಸೂಪರ್ ಕೂಲ್ ಸೌಂಡ್‌ಬಾರ್ ಲಭ್ಯ.ಬಳಕೆದಾರರು HSBC, Yes Bank, BOBCARD ಮತ್ತು Federal Bank ಕಾರ್ಡ್ ಮೇಲೆ ಸುಮಾರು 1500 ರೂಗಳ ಡಿಸ್ಕೌಂಟ್.
Samsung Dolby Soundbar On Amaozn
ನಿಮ್ಮ ಮನೆಯಲ್ಲೇ ಸಿನಿಮಾ ಥಿಯೇಟರ್ ಮಾದರಿಯ ಸೌಂಡ್ ಎಫೆಕ್ಟ್ ಪಡೆಯಲು ಬಯಸುವವರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಸ್ಯಾಮ್‌ಸಂಗ್ HW-C45E/XL ಡಾಲ್ಬಿ ಡಿಜಿಟಲ್ ಸೌಂಡ್ಬಾರ್ ಅಮೆಜಾನ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಈ ಸ್ಯಾಮ್‌ಸಂಗ್ 2.1 ಚಾನೆಲ್ ಸೌಂಡ್‌ಬಾರ್ ಬರೋಬ್ಬರಿ 300W ಸೌಂಡ್ ಔಟ್‌ಪುಟ್ ನೀಡುವುದರೊಂದಿಗೆ ಜಬರ್ದಸ್ತ್ ಅನುಭವವನ್ನು ನೀಡುತ್ತದೆ. ಇದರ ವಿಶೇಷ ಅಂದ್ರೆ ಈ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕೈಕ ಸ್ಯಾಮ್‌ಸಂಗ್ ಸೌಂಡ್ ಬಾರ್ ಇದಾಗಿದ್ದು ಇದನ್ನು ಬಿಟ್ರೆ ಬೇರೆ ಯಾವುದೇ ಸ್ಯಾಮ್‌ಸಂಗ್ ಡಾಲ್ಬಿ ಸೌಂಡ್ ಬಾರ್ ಇಲ್ಲ ಅನ್ನೋದು ಗಮನಿಸಬೇಕಿದೆ.
ಇದನ್ನು ನಿಮ್ಮ ಮನೆಯೊಳಗೆ ಸೆಟಪ್ ಮಾಡಿಕೊಂಡ್ರೆ ಅಕ್ಕಪಕ್ಕದ ಮನೆಯವರು ಬಂದು ಯಾವುದಪ್ಪಾ ಈ ಸೌಂಡ್ ಸಿಸ್ಟಮ್ ಅಂಥ ಕೇಳೋದರಲ್ಲಿ ಸಂದೇಹವಿಲ್ಲ. ಯಾಕೆಂದರೆ ನಿಮ್ಮ ಟಿವಿ ಅಥವಾ ಮೊಬೈಲ್ ಮೂಲಕ ನಡೆಸುವ ಯಾವುದೇ ಕಂಟೆಂಟ್ ಅದು ಸಿನಿಮಾವಾಗಿರಲಿ, ಧಾರಾವಾಹಿಗಳಾಗಿರಲಿ ಅಥವಾ ಯಾವುದೇ ಮ್ಯೂಸಿಕ್ ಮತ್ತು ಗೇಮಿಂಗ್‌ಗಾಗಿ ಡೀಪ್ ಬಾಸ್, ಸ್ಪಷ್ಟ ಗಾಯನ ಮತ್ತು ತಲ್ಲೀನಗೊಳಿಸುವ ಆಡಿಯೊವನ್ನು ಈ ಸ್ಯಾಮ್‌ಸಂಗ್ ಸೌಂಡ್‌ಬಾರ್ ಖಚಿತಪಡಿಸುವುದೆ ಇದರ ವಿಶೇಷ ಫೀಚರ್ ಆಗಿದೆ.
ಅಮೆಜಾನ್‌ನಲ್ಲಿ Samsung Dolby Soundbar ಮೇಲೆ ಮಸ್ತ್ ಆಫರ್ಗಳೇನು?
ಈ ಸ್ಯಾಮ್‌ಸಂಗ್ HW-C45E/XL ಡಾಲ್ಬಿ ಡಿಜಿಟಲ್ ಸೌಂಡ್ಬಾರ್ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಈಗಾಗಲೇ ಹೇಳಿರುವಂತೆ ಇದು ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಮಾರಾಟವಾಗುತ್ತಿದ್ದು ₹11,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಪ್ರಸ್ತುತ ಇದು ಅಮೆಜಾನ್ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಆಸಕ್ತ ಬಳಕೆದಾರರು HSBC, Yes Bank, BOBCARD ಮತ್ತು Federal Bank ಕಾರ್ಡ್ ಮೇಲೆ ಸುಮಾರು 1500 ರೂಗಳ ಡಿಸ್ಕೌಂಟ್ಗಳೊಂದಿಗೆ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
ಈ ಸ್ಯಾಮ್‌ಸಂಗ್ Dolby Soundbar ಏಕೆ ಪರಿಗಣಿಸಬೇಕು ಪರಿಗಣಿಸಬೇಕು?
ನಿಮ್ಮ ಮನೆಯ ಆಡಿಯೋವನ್ನು ಅಪ್‌ಗ್ರೇಡ್ ಮಾಡಲು ಸ್ಯಾಮ್‌ಸಂಗ್ ಸೌಂಡ್‌ಬಾರ್ ಅತ್ಯುತ್ತಮ ಮಾರ್ಗವಾಗಿದೆ. ಇದರ ಪವರ್ಫುಲ್ 300W ಔಟ್‌ಪುಟ್ ಮತ್ತು ವೈರ್‌ಲೆಸ್ ಸಬ್ ವೂಫರ್ ಆಳವಾದ ಬಾಸ್ ಮತ್ತು ಸ್ಪಷ್ಟ, ಡೈನಾಮಿಕ್ ಸೌಂಡ್ ನೀಡುತ್ತದೆ. ಡಾಲ್ಬಿ ಡಿಜಿಟಲ್ ಮತ್ತು ಡಿಟಿಎಸ್ ವರ್ಚುವಲ್ ಸೌಂಡ್ನೊಂದಿಗೆ ಇದು ಪ್ರಮಾಣಿತ ಟಿವಿ ಸ್ಪೀಕರ್‌ಗಳಿಗೆ ಹೊಂದಿಕೆಯಾಗದ ತಲ್ಲೀನಗೊಳಿಸುವ 3D ಆಡಿಯೊ ಅನುಭವವನ್ನು ಸೃಷ್ಟಿಸುತ್ತದೆ. ಇದು ಚಲನಚಿತ್ರಗಳು, ಗೇಮಿಂಗ್ ಮತ್ತು ಸಂಗೀತಕ್ಕೆ ಪರಿಪೂರ್ಣವಾಗಿಸುತ್ತದೆ.
Samsung Dolby Soundbar ಸ್ಮಾರ್ಟ್ ಫೀಚರ್ಗಳೇನು?
ಈ ಸೌಂಡ್‌ಬಾರ್ ಬುದ್ಧಿವಂತ ವೈಶಿಷ್ಟ್ಯಗಳಿಂದ ತುಂಬಿದೆ. ಇದರ ಅಡಾಪ್ಟಿವ್ ಸೌಂಡ್ ಲೈಟ್ ನೀವು ವೀಕ್ಷಿಸುತ್ತಿರುವುದಕ್ಕೆ ಆಡಿಯೊವನ್ನು ಅತ್ಯುತ್ತಮವಾಗಿಸುತ್ತದೆ. ಆದರೆ ಗೇಮ್ ಮೋಡ್ ಆಟದಲ್ಲಿನ ಧ್ವನಿಯನ್ನು ಹೆಚ್ಚಿಸುತ್ತದೆ. ನಿಮಗೆ ಅಗತ್ಯವಿರುವಾಗ ಬಾಸ್ ಬೂಸ್ಟ್ ಹೆಚ್ಚುವರಿ ಶಕ್ತಿಯನ್ನು ಒದಗಿಸುತ್ತದೆ. ಈ ಸೌಂಡ್‌ಬಾರ್ ಬ್ಲೂಟೂತ್ ಮತ್ತು ಆಪ್ಟಿಕಲ್ ಇನ್‌ಪುಟ್ ಮೂಲಕ ಹೊಂದಿಕೊಳ್ಳುವ ಸಂಪರ್ಕವನ್ನು ನೀಡುತ್ತದೆ ಮತ್ತು ನಿಮ್ಮ ಸ್ಯಾಮ್‌ಸಂಗ್ ಟಿವಿ ರಿಮೋಟ್‌ನೊಂದಿಗೆ ಸಹ ನಿಯಂತ್ರಿಸಬಹುದು.