RTC Crop Details-ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿ ತಿಳಿಯಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ರೈತರ ಜಮೀನಿನ ಪಹಣಿ/ಊತಾರ್/RTC ದಾಖಲೆಯಲ್ಲಿ ಅಧಿಕೃತವಾಗಿ ನಮೂದಿಸಿರುವ ಬೆಳೆ ಮಾಹಿತಿಯನ್ನು(Crop Details) ರೈತರು ತಮ್ಮ ಮೊಬೈಲ್ ನಲ್ಲೇ ಉಚಿತವಾಗಿ ಪರಿಶೀಲನೆ ಮಾಡಿ ಒಂದೊಮ್ಮೆ ಬೆಳೆ ಮಾಹಿತಿ ತಪ್ಪಾಗಿ ದಾಖಲಾಗಿದ್ದರೆ ಈ ಅಪ್ಲಿಕೇಶನ್ ಮೂಲಕವೇ ಮರು ಪರೀಶಿಲನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೃಷಿ ಇಲಾಖೆಯಿಂದ "ಬೆಳೆ ದರ್ಶಕ್" ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೈ ಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಪಹಣಿಯಲ್ಲಿ(Pahani) ಸರಿಯಾದ ಬೆಳೆ ಮಾಹಿತಿ ನಮೂದಿಸುವುದು ಬಹುಮುಖ್ಯವಾಗಿದೆ ಏಕೆಂದರೆ ಈ ಮಾಹಿತಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲಾ ಯೋಜನೆಯಡಿ ರೈತರಿಗೆ ಸಹಾಯಧನ ಒದಗಿಸಲು ಇನ್ನಿತರೆ ಫಲಾನುಭವಿ ಆಧಾರಿತ ಯೋಜನೆಯ ಪ್ರಯೋಜನ ನೀಡುವುದಕ್ಕೆ ಈ ಮಾಹಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಈ ನಿಟ್ಟಿನಲ್ಲಿ ರೈತರು ತಪ್ಪದೇ ತಮ್ಮ ಮೊಬೈಲ್ ನಲ್ಲಿ "ಬೆಳೆ ದರ್ಶಕ" ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಬೆಳೆ ಮಾಹಿತಿಯನ್ನು ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ.

ಇಂದಿನ ಈ ಲೇಖನದಲ್ಲಿ ಬೆಳೆ ಸಮೀಕ್ಷೆ(Bele Samikshe) ಮತ್ತು ಬೆಳೆ ದರ್ಶಕ(Bele Darshak Mobile App) ಮೊಬೈಲ್ ಅಪ್ಲಿಕೇಶನ್ ಗಳನ್ನು ರೈತರು ಬಳಕೆ ಮಾಡಿಕೊಳ್ಳುವುದರ ಮೂಲಕ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು ಈ ಮಾಹಿತಿಯು ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

Pahani Crop Information-ಪ್ರತಿ ವರ್ಷ ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ಹೇಗೆ ದಾಖಲಿಸಲಾಗುತ್ತದೆ?

ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿಯಾಗಿ ಪ್ರತಿ ವರ್ಷ ರಾಜ್ಯದ ಎಲ್ಲಾ ಹಳ್ಳಿಯ ರೈತರ ಜಮೀನಿನ ಬೆಳೆ ಮಾಹಿತಿಯನ್ನು ಬೆಳೆ ಸಮೀಕ್ಷೆ ಮಾಡುವ ಮೂಲಕ GPS ಆಧಾರಿತ ಪೋಟೋ ದಾಖಲಿಸಿ ಬೆಳೆ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗುತ್ತದೆ.

ಕೃಷಿ ಮತ್ತು ಕಂದಾಯ ಇಲಾಖೆಯಿಂದ ರಾಜ್ಯದ ಪ್ರತಿ ಹಳ್ಳಿಗೆ ನೇಮಿಸಿರುವ ಖಾಸಗಿ ನಿವಾಸಿ(PR)ಗಳ ಮೂಲಕ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ ಆ ಹಳ್ಳಿ ವ್ಯಾಪ್ತಿಯ ರೈತರ ಜಮೀನಿನ ಬೆಳೆ ಮಾಹಿತಿಯನ್ನು ಪ್ರತಿ ರೈತರ ತಾಕಿಗೆ ಭೇಟಿ ಮಾಡಿ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಳೆಯ GPS ಆಧಾರಿತ ಪೋಟೋಗೆ ಬೆಳೆ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಿ ಪ್ರತಿ ವರ್ಷ ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.

Farmer Crop Survey App-2025:ರೈತರೇ ಸ್ವಂತ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಬಹುದು!

ಹೌದು, ರೈತ ಬಂಧುಗಳೇ ನಿಮ್ಮ ಜಮೀನಿನ ಬೆಳೆ ಮಾಹಿತಿಯನ್ನು ಖುದ್ದು ನೀವೇ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Farmer Crop Survey ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು ಸ್ವಂತ ತಾವೇ ದಾಖಲಿಸಲು ಅವಕಾಶವನ್ನು ಕೃಷಿ ಇಲಾಖೆಯಿಂದ ಮಾಡಿಕೊಡಲಾಗಿದೆ.

How To Check RTC Crop Details-ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿ ತಿಳಿಯಲು ಮೊಬೈಲ್ ಅಪ್ಲಿಕೇಶನ್:

ಒಮ್ಮೆ ಖಾಸಗಿ ನಿವಾಸಿಗಳು ರೈತರ ಜಮೀನನ್ನು ಭೇಟಿ ಮಾಡಿ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಪಹಣಿಯಲ್ಲಿನ ಬೆಳೆ ಮಾಹಿತಿಯನ್ನು ರೈತರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ "ಬೆಳೆ ದರ್ಶಕ" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇಲ್ಲಿ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿ ಪರಿಶೀಲನೆ ಮಾಡಿಕೊಳ್ಳಬಹುದು.

ಹಂತ-1: ಇಲ್ಲಿ ಕ್ಲಿಕ್ ಮಾಡಿ "Download Bele Darshak" ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ "ಬೆಳೆ ದರ್ಶಕ" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಹಂತ-2: ಇದಾದ ಬಳಿಕ ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತದೆ ಸರ್ಕಾರಿ "ಸಿಬ್ಬಂದಿ/ಪ್ರೈವೇಟ್ ರೆಸಿಡೆಂಟ್ಸ್" ಮತ್ತು "ರೈತ" ಇಲ್ಲಿ ರೈತ ಎಂದು ಕ್ಲಿಕ್ ಮಾಡಿಕೊಂಡು ಮುಂದುವರೆಯಬೇಕು.

ಹಂತ-3: ನಂತರ ಇಲ್ಲಿ ವರ್ಷ: "2025-26" ಋತು: "ಮುಂಗಾರು" ಎಂದು ಕ್ಲಿಕ್ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಾಕಿ ವಿವರ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ-4: ಅಗ ನಿಮ್ಮ ಹೋಬಳಿಯ ಸರ್ವೆ ನಂಬರ್ ವಿವರ ಲೋದ್ ಅಗುತ್ತದೆ ನಂತರ ಹಿಸ್ಸಾ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ "ಸರ್ವೆ ನಂಬರ್ ನ ಹಿಸ್ಸಾ" ಮೇಲೆ ಕ್ಲಿಕ್ ಮಾಡಿಕೊಂಡು "ಮಾಲೀಕರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ" ಆಯ್ಕೆಯೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರಿರುವ ಆಯ್ಕೆಯನ್ನು ಕ್ಲಿಕ್ ಮಾಡಿ "ಸಮೀಕ್ಷೆ ವಿವರಗಳನ್ನು ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಮೀಕ್ಷೆ ಮಾಡಿದ ಖಾಸಗಿ ವ್ಯಕ್ತಿಯ ಹೆಸರು ಮೊಬೈಲ್ ನಂಬರ್ ತೋರಿಸುತ್ತದೆ ಇದರೆ ಮೇಲೆ ಕ್ಲಿಕ್ ಮಾಡಿ "ಬೆಳೆ ವಿವರ ವೀಕ್ಷಿಸಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ "ಬೆಳೆ ವಿವರ" ತೋರಿಸುತ್ತದೆ.

ಒಂದೊಮ್ಮೆ ಇಲ್ಲಿ ತೋರಿಸುವ ಬೆಳೆ ವಿವರ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ವಿವರಕ್ಕೆ ತಾಳೆ ಅಗದಿದ್ದಲ್ಲಿ "ಆಕ್ಷೇಪಣೆ ಇದೆ" ಎಂದು ಕೆಳಗೆ ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಆಕ್ಷೇಪಣೆ ಸಲ್ಲಿಸಬಹುದು.

Bele Darshak Application-ನಿಮ್ಮ ಜಮೀನಿನ ಬೆಳೆ ಮಾಹಿತಿ ತಪ್ಪಾಗಿ ದಾಖಲಾಗಿದ್ದರೆ ಹೀಗಿದೆ ಮಾಡಿ:

ಜಮೀನಲ್ಲಿ ಬೆಳೆದಿರುವ ಬೆಳೆಗೂ ಮತ್ತು ಸಮೀಕ್ಷೆಯಲ್ಲಿ ದಾಖಲಿಸಿದ ಬೆಳೆ ವಿವರಕ್ಕೂ ತಾಳೆ ಅಗದಿದ್ದರೆ ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಮೂಲಕ ಆಕ್ಷೇಪಣೆ ಸಲ್ಲಿಸಿದ ಬಳಿಕ ಈ ಅರ್ಜಿಯು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಲಾಗಿನ್ ಹೋಗುತ್ತದೆ ಇದನ್ನೊ ಪರೀಶಿಲಿಸಿ ನಿಮ್ಮ ಜಮೀನಿನ ಮರು ಸಮೀಕ್ಷೆಗೆ ಖಾಸಗಿ ನಿವಾಸಿಗಳನ್ನು ಮತ್ತೊಮ್ಮೆ ಕಳುಹಿಸಲಾಗುತ್ತದೆ.

ಮರು ಸಮೀಕ್ಷೆಯನ್ನು ಪುನಃ ಅಂದರೆ ಖಾಸಗಿ ನಿವಾಸಿಗಳು ಪುನಃ ನಿಮ್ಮ ಜಮೀನನ್ನು ಭೇಟಿ ಮಾಡಿ ಮತ್ತೊಮ್ಮೆ ಜಿಪಿಎಸ್ ಆಧಾರಿತ ಬೆಳೆ ಪೋಟೋ ವನ್ನು ತೆಗೆದು ಸರಿಯಾದ ಬೆಳೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.

For More Details-ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಕೆಳಗಿನ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ:

Crop Survey Helpline-ಬೆಳೆ ಸಮೀಕ್ಷೆ ಸಹಾಯವಾಣಿ: 844 844 7715

Farmer Toll Free Number-ರೈತರ ಸಹಾಯವಾಣಿ(ಟೋಲ್ ಪ್ರೀ): 1800-425-3553, 1800-180-1551

Crop Survey Website-ಅಧಿಕೃತ ಬೆಳೆ ಸಮೀಕ್ಷೆ ವೆಬ್ಸೈಟ್ : Click Here

Previous Post Next Post