Rich Village in India: ಇಲ್ಲಿದೆ ಅತ್ಯಂತ ಶ್ರೀಮಂತ ಗ್ರಾಮ; ಪ್ರತಿಯೊಬ್ಬರು ಕೋಟ್ಯಾಧಿಪತಿ, ಬ್ಯಾಂಕ್ನಲ್ಲಿ ₹5,000 ಕೋಟಿಗೂ ಹೆಚ್ಚು ಠೇವಣಿ

India’s Richest Village: Every Resident a Millionaire with ₹5,000 Crore in Bank Deposits:-ಸಾಮಾನ್ಯವಾಗಿ ಗ್ರಾಮವೆಂದರೆ (Village) ಮಣ್ಣಿನ ಗುಡಿಸಲು, ಹಸಿರಿನ ಹೊಲಗಳು, ದನಕರುಗಳು ಮತ್ತು ಶಾಂತಿಯುತ ಜೀವನದ ಚಿತ್ರಣ (Peaceful Life) ಕಣ್ಣ ಮುಂದೆ ಬರುತ್ತದೆ. ಆದರೆ ಇಲ್ಲೊಂದು ಗ್ರಾಮವಿದೆ, ಇದು ಭಾರತದ ಅತ್ಯಂತ ಶ್ರೀಮಂತ ಗ್ರಾಮ (Riches Village) ಎನಿಸಿಕೊಂಡಿದೆ. ಇಲ್ಲಿ ನೆಲೆಸಿರುವಂತಹ ಪ್ರತಿಯೊಬ್ಬರು ಕೋಟ್ಯಾಧಿಪತಿಗಳಾಗಿದ್ದಾರೆ. ಒಬ್ಬೊಬ್ಬರ ಖಾತೆಯಲ್ಲಿ ಸುಮಾರು ₹5,000 ಕೋಟಿಗೂ ಹೆಚ್ಚು ಠೇವಣಿ (Crores Together Deposit) ಇಡಲಾಗಿದೆ. ಈ ಗ್ರಾಮ ಇಡೀ ಭಾರತದಲ್ಲಿ ಶ್ರೀಮಂತಿಕೆಗೆ ಒಂದು ಉದಾಹರಣೆಯಾಗಿದೆ.

ಹೌದು, ಗುಜರಾತ್‌ನ ಕಚ್ ಜಿಲ್ಲೆಯ ಮಧಾಪರ್ ಗ್ರಾಮವು ಸಾಂಪ್ರದಾಯಿಕ ಗ್ರಾಮೀಣ ಚಿತ್ರಣವನ್ನು ಸಂಪೂರ್ಣವಾಗಿ ಮುರಿಯುವ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಗ್ರಾಮದಂತೆ ಅಲ್ಲ, ಮಧಾಪರ್ ಈ ಚಿತ್ರವನ್ನು ತಲೆಕೆಳಗಾಗಿಸಿದೆ.

ಅತ್ಯಂತ ಶ್ರೀಮಂತ ಗ್ರಾಮ ಎನಿಸಿಕೊಂಡ ಮಧಾಪರ್ ಗ್ರಾಮ!

ಗುಜರಾತ್‌ನ ಕಚ್ ಜಿಲ್ಲೆಯ ಮಧಾಪರ್ ಗ್ರಾಮ ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವೆಂದು ಖ್ಯಾತಿಯನ್ನು ಗಳಿಸಿದೆ. ಸುಮಾರು 92,000 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದ 7,600 ಮನೆಗಳಲ್ಲಿ ಪ್ರತಿಯೊಂದೂ ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿಯಾಗಿದ್ದು, ಸ್ಥಳೀಯ 17 ಬ್ಯಾಂಕ್‌ ಶಾಖೆಗಳಲ್ಲಿ 5,000 ಕೋಟಿ ರೂ.ಗಿಂತಲೂ ಹೆಚ್ಚಿನ ಠೇವಣಿಗಳಿವೆ. ಈ ಅಂಕಿಅಂಶವು ಮಧ್ಯಮ ಗಾತ್ರದ ನಗರದ ಆರ್ಥಿಕತೆಗೆ ಸಮಾನವಾದದ್ದಾಗಿದೆ.

ಮಧಾಪರ್‌ನ ಸಂಪತ್ತಿನ ರಹಸ್ಯ ಏನು?

ಮಧಾಪರ್‌ನ ಈ ಅಸಾಧಾರಣ ಸಂಪತ್ತಿನ ಹಿಂದಿನ ಕಾರಣವೆಂದರೆ ಅದರ ಜನರ ಜಾಗತಿಕ ಸಂಪರ್ಕ ಮತ್ತು ಕಠಿಣ ಪರಿಶ್ರಮ. ಗ್ರಾಮದ ಅನೇಕ ಕುಟುಂಬಗಳು ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಫ್ರಿಕಾ ಮತ್ತು ಗಲ್ಫ್ ದೇಶಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯ (ಎನ್‌ಆರ್‌ಐ) ಸಂಬಂಧಿಕರನ್ನು ಹೊಂದಿದ್ದಾರೆ. ಈ ಎನ್‌ಆರ್‌ಐಗಳು ತಮ್ಮ ಕಠಿಣ ಪರಿಶ್ರಮದಿಂದ ಗಣನೀಯ ಸಂಪತ್ತನ್ನು ಗಳಿಸಿದ್ದಾರೆ ಮತ್ತು ತಮ್ಮ ಗ್ರಾಮದ ಬೇರುಗಳೊಂದಿಗೆ ಗಟ್ಟಿಯಾದ ಸಂಪರ್ಕವನ್ನು ಕಾಪಾಡಿಕೊಂಡಿದ್ದಾರೆ.

ಅವರು ತಮ್ಮ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಗ್ರಾಮದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮತ್ತು ಸಮುದಾಯ ಕಲ್ಯಾಣಕ್ಕಾಗಿ ಹೂಡಿಕೆ ಮಾಡುತ್ತಾರೆ. ಈ ಕೊಡುಗೆಗಳು ಮಧಾಪರ್‌ನ ಗ್ರಾಮೀಣ ಜೀವನವನ್ನು ಆಧುನಿಕತೆಯ ಸೌಲಭ್ಯಗಳೊಂದಿಗೆ ಮಾದರಿಯಾಗಿ ಪರಿವರ್ತಿಸಿವೆ.


Previous Post Next Post