Ration Card: ಪಡಿತರ ಚೀಟಿ ತಿದ್ದುಪಡಿ ಆರಂಭ: ಇಲ್ಲಿದೆ ಡೆಡ್‌ಲೈನ್‌ ಮಾಹಿತಿ

Ration Card: ಪಡಿತರ ಚೀಟಿ ತಿದ್ದುಪಡಿ ಆರಂಭ: ಇಲ್ಲಿದೆ ಡೆಡ್‌ಲೈನ್‌ ಮಾಹಿತಿ

ಪ್ರಮುಖ ದಾಖಲೆಗಳಲ್ಲಿ ರೇಷನ್‌ ಕಾರ್ಡ್‌ ಕೂಡ ಒಂದಾಗಿದ್ದು, ಇವುಗಳಲ್ಲಿ ಹಲವು ವಿಧಗಳಿವೆ. ಇನ್ನೂ ರಾಜ್ಯದಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಡೆಡ್‌ಲೈನ್‌ ಸಹ ನೀಡಲಾಗಿದೆ. ಹಾಗಾದ್ರೆ ಕೊನೆಯ ದಿನಾಂಕ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.




ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದ್ದು, ಅಂತಹವರನ್ನು ಆದಾಯ ಆಧಾರಿಸಿ ಎಪಿಎಲ್‌ಗೆ ವರ್ಗಾವಾಣೆ ಮಾಡುವ ಕೆಲಸವನ್ನು ಮಾಡಿತ್ತು. ಮತ್ತೊಂದೆಡೆ ಅನರ್ಹರ ಬಳಿಯಿದ್ದ ಪಡಿತರ ಚೀಟಿಗಳನ್ನು ಸಹ ರದ್ದುಪಡಿಸುವ ಕೆಲಸವನ್ನೂ ಕೂಡ ಮಾಡುತ್ತಿದೆ.

Ration card correction start from today in state

ಇನ್ನೂ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿದ ವೇಳೆ ಬಡವರ ಬಳಿಯಿದ್ದ ಕಾರ್ಡ್‌ಗಳನ್ನು ಸಹ ರದ್ದುಪಡಿಸಿದೆ ಎಂದು ಬಹುತೇಕ ಜಿಲ್ಲೆಗಳ ಜನರು ಆರೋಪಿಸಿ ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ್ದರು. ಬಳಿಕ ಎಚ್ಚೆತ್ತ ಸರ್ಕಾರ ಬಡವರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌ಗಳನ್ನು ಹಿಂತಿರುಗಿಸಿ ಅವರಿಗೆ ಸಿಗಬೇಕಾದ ಪಡಿತರವನ್ನು ಕೂಡ ನೀಡಲಾಗುತ್ತದೆ ಎಂದು ಭರವಸೆ ನೀಡಿತ್ತು.

ಅಲ್ಲದೆ, ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತದೆ ಎಂದು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಹಾಗೂ ತಿದ್ದುಪಡಿ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಆದರೆ, ಇದೀಗ ಮತ್ತೆ ಇಂದಿನಿಂದ ಅಂದರೆ ಆಗಸ್ಟ್‌ 1ರಿಂದ 31ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ದಿನಗಳಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ತಿದ್ದುಪಡಿ ಮಾಡಲಾಗುತ್ತದೆ. ಇನ್ನು ಸಲ್ಲಿಸಿದ ಅರ್ಜಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸದಿದ್ದರೆ, ಸ್ವಯಂಚಾಲಿತವಾಗಿ ತಿರಸ್ಕರಿಸಲಾಗುತ್ತದೆ.

ಪಡಿತರ ಚೀಟಿ ತಿದ್ದುಪಡಿ ವಿಧಾನಗಳು

* ಆಹಾರ ಕರ್ನಾಟಕ ಅಧಿಕೃತ ವೆಬ್‌ಸೈಟ್‌ https://ahara.karnataka.gov.in/ಗೆ ಭೇಟಿ ನೀಡಿ
* ಬಳೀಕ ಇ-ಸೇವೆಗಳಿಗೆ ಭೇಟಿ ನೀಡಿ
* ಇ-ಪಡಿತರ ಚೀಟಿ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಪಡಿತರ ಚೀಟಿ ತಿದ್ದುಪಡಿಯ ಆಯ್ಕೆ ಮಾಡಿ.
* ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ, ವಿನಂತಿ ವಿವರಗಳನ್ನ ನೀಡಿ
* ಅಗತ್ಯ ವಿವರಗಳನ್ನು ಭರ್ತಿ ಮಾಡಿ ನಂತರ ಸಬ್ಮಿಟ್ ಬಟನ್‌ ಮೇಲೆ ಕ್ಲಿಕ್ ಮಾಡಿ

ಆಹಾರ ಸಚಿವರು ಹೇಳಿದ್ದೇನು?: 

ಇ-ಕೆವೈಸಿ ಮಾಡಿಸುವ ದಿನಾಂಕವನ್ನು ಮುಂದೂಡಿಕೆ ಮಾಡುತ್ತಲೇ ಬರಲಾಗುತ್ತಿದೆ. ಇನ್ನೂ ತುಂಬಾ ಜನ ಇದನ್ನು ಮಾಡಿಸಿಕೊಳ್ಳದ ಕಾರಣ ಇದೀಗ ಮತ್ತೆ ಕಾಲವಕಾಶವನ್ನು ಕಲ್ಪಿಸಲಾಗಿದ್ದು, ಇದರಿಂದ ಪಡಿತರ ಚೀಟಿದಾರರಿಗೆ ತುಂಬಾ ಅನುಕೂಲ ಆದಂತಾಗಿದೆ. ಇದನ್ನು ಪಡಿತರ ವಿತರಣೆಯಲ್ಲಿ ಆಗುವ ದುರ್ಬಳಕೆಯನ್ನು ತಪ್ಪಿಸುವುದೇ ಇದರ ಉದ್ದೇಶವಾಗಿದೆ.

ರಾಜ್ಯದಲ್ಲಿ ಪಡಿತರ ಚೀಟಿದಾರರು ಇ- ಕೆವೈಸಿಯನ್ನು ಆದಷ್ಟು ಬೇಗನೆ ಮಾಡಿಸಬೇಕು. ಮಾಡಿಸದಿದ್ದರೆ ಅಂತಹ ಸದಸ್ಯರ ಪಡಿತರ ಕಾರ್ಡ್ ರದ್ದು ಪಡಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸೂಚನೆ ನೀಡಿದ್ದಾರೆ. ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ್ದರು


ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಕಾಲಾವಕಾಶ ನೀಡಬೇಕು. ಒಂದೆ ವೇಳೆ ಈ ಅವಧಿಯೊಳಗೆ ಇ-ಕೆವೈಸಿ ಮಾಡಿಸದಿದ್ದರೆ, ಅಂತಹ ಸದಸ್ಯರ ಪಡಿತರ ಕಾರ್ಡ್ ರದ್ದು ಪಡಿಸುವ ಎಚ್ಚರಿಕೆ ನೀಡಿಬೇಕು. ಬಾಕಿ ಇರುವ ಇ-ಕೆವೈಸಿ ಪ್ರಕ್ರಿಯೆಗಳು ವಿಳಂಬ ಇಲ್ಲದೆ ಪೂರ್ಣಗೊಳ್ಳುವಂತೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನಗತ್ಯವಾಗಿ ಕಾರ್ಡುಗಳು ವಿತರಣೆ ಆದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಬೇಕಿರುವ ವಾಹನ ಸೌಲಭ್ಯ ಹಾಗೂ ಕಾನೂನು ಮಾಪನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

Post a Comment

Previous Post Next Post

Top Post Ad

CLOSE ADS
CLOSE ADS
×