ಈ ಪೋಸ್ಟ್ ಆಫೀಸ್ ಸ್ಕೀಮ್ ಕೊನೆಗೆ ನಿಮ್ಮ ಕೈಗೆ ಬರುತ್ತೆ 17 ಲಕ್ಷ! ಬಂಪರ್ ಕೊಡುಗೆ.ಪೋಸ್ಟ್ ಆಫೀಸ್ RD ಯೋಜನೆ ದಿನಕ್ಕೆ ₹333 ಉಳಿಸುವ ಪ್ಲಾನ್.10 ವರ್ಷಗಳಲ್ಲಿ ₹17 ಲಕ್ಷದ ನಿಶ್ಚಿತ ಲಾಭದ ಭರವಸೆ.
6.7% ಬಡ್ಡಿದರ, ಸಂಪೂರ್ಣ ಸರ್ಕಾರದ ಭದ್ರತೆ
ಸುರಕ್ಷಿತ ಹಾಗೂ ಉತ್ತಮ ಲಾಭ ನೀಡುವ ಹೂಡಿಕೆ ಆಯ್ಕೆಯನ್ನು ಹುಡುಕುತ್ತಿದ್ದರೆ, ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (RD) ಯೋಜನೆ ಉತ್ತಮ ಅವಕಾಶ. ಈ ಸರ್ಕಾರ ಬೆಂಬಲಿತ ಯೋಜನೆ ಸಾಮಾನ್ಯ ಜನರಿಗೆ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡುವ ಅಭ್ಯಾಸ ಬೆಳೆಸುವುದಲ್ಲದೆ, ಭವಿಷ್ಯಕ್ಕಾಗಿ ದೊಡ್ಡ ಮೊತ್ತವನ್ನು ಕೂಡಿಸುವ ಮಾರ್ಗವನ್ನು ಒದಗಿಸುತ್ತದೆ.
ಈ ಯೋಜನೆಯ ವಿಶೇಷತೆ ಏನೆಂದರೆ, ದಿನಕ್ಕೆ ಕೇವಲ ₹333 ಉಳಿಸುವ ಮೂಲಕ 10 ವರ್ಷಗಳಲ್ಲಿ ₹17,08,546 ರೂಪಾಯಿಗಳಷ್ಟು ನಿದಿ ಪಡೆಯಬಹುದು.
ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ ₹6 ಲಕ್ಷ ಹೂಡಿಕೆ ಆಗುತ್ತದೆ. 6.7% ಬಡ್ಡಿದರದಲ್ಲಿ ಸಿಗುವ ಬಡ್ಡಿ ₹1.13 ಲಕ್ಷ. ಹೂಡಿಕೆಯನ್ನು ಮತ್ತೊಂದು 5 ವರ್ಷ ವಿಸ್ತರಿಸಿದರೆ, ಒಟ್ಟು ಹೂಡಿಕೆ ₹12 ಲಕ್ಷವಾಗುತ್ತದೆ ಮತ್ತು ಬಡ್ಡಿ ₹5.08 ಲಕ್ಷಕ್ಕೆ ಏರುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಲು ಕನಿಷ್ಠ ₹100 ಸಾಕು. ಇದು ತಿಂಗಳಾವರಿ ಉಳಿತಾಯ ಯೋಜನೆ ಆಗಿದ್ದು, ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಜಮಾ ಮಾಡಬೇಕು. ಪ್ರಸ್ತುತ ಈ ಯೋಜನೆಗೆ 6.7% ವಾರ್ಷಿಕ ಬಡ್ಡಿದರ ನಿಗದಿಯಾಗಿದೆ, ತ್ರೈಮಾಸಿಕ ಕಮ್ಪೌಂಡಿಂಗ್ ಸೌಲಭ್ಯವೂ ಇದೆ.
ಎಲ್ಲಾ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆದಾರರು ಅಗಲಿದ ಸಂದರ್ಭದಲ್ಲಿ, ನಾಮಿನಿ ಖಾತೆಯನ್ನು ದಾವೆ ಮಾಡಬಹುದು ಅಥವಾ ಮುಂದುವರಿಸಬಹುದು. ಹೀಗಾಗಿ, ಭದ್ರತೆ, ನಿಗದಿತ ಲಾಭ ಮತ್ತು ಸರಳ ಪ್ರಕ್ರಿಯೆಯ ಕಾರಣದಿಂದ, ಪೋಸ್ಟ್ ಆಫೀಸ್ RD ಯೋಜನೆ ಮನೆಮಾತಾಗುತ್ತಿದೆ.