Minimum Balance: ಬ್ಯಾಂಕ್ ಅಕೌಂಟ್‌ನಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು: ಆರ್‌ಬಿಐನಿಂದ ಮಹತ್ವದ ಮಾಹಿತಿ

Minimum Balance: ಸಾರ್ವಜನಿಕರು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದು ಅದರಲ್ಲಿ ಇರಿಸುವ Minimum Balance ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಆರ್‌ಬಿಐ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್ ಏಕಾಏಕಿ ಮಿನಿಮಮ್ (ಕನಿಷ್ಠ ಉಳಿತಾಯ ಮೊತ್ತ)ವನ್ನು ಹೆಚ್ಚಳ ಮಾಡಿರುವುದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಬಡವರು ಹಾಗೂ ಮಧ್ಯಮ ವರ್ಗದವರ ಮಾಸಿಕ ವೇತನವೇ 50,000 ಸಾವಿರ ರೂಪಾಯಿ ಇಲ್ಲ. ಈ ರೀತಿ ಇರುವಾಗ ಇಷ್ಟು ಮೊತ್ತವನ್ನು Minimum Balance ಮಾಡಿದರೆ ಹೇಗೆ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ ವಿವಿಧ ಆರು ಪ್ರಮುಖ ಬ್ಯಾಂಕ್‌ಗಳು Minimum Balance ಎನ್ನುವ ಪರಿಕಲ್ಪನೆಯನ್ನೇ ಕೈಬಿಟ್ಟದ್ದವು. ಅಂದರೆ ಆರು ಪ್ರಮುಖ ಬ್ಯಾಂಕ್‌ಗಳಲ್ಲಿ ಕನಿಷ್ಠ ಉಳಿತಾಯ ಮೊತ್ತವು ಸೊನ್ನೆಯಾಗಿದೆ. ಆದರೆ ಐಸಿಐಸಿಐ ಬ್ಯಾಂಕ್ ಮಾತ್ರ ಏಕಾಏಕಿ (ಹೊಸ ಉಳಿತಾಯ ಖಾತೆದಾರರಿಗೆ) ಸೇವಿಂಗ್ಸ್‌ ಅಕೌಂಟ್ ಮೊತ್ತವನ್ನು ಹೆಚ್ಚಳ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ರಿಸರ್ವ್‌ ಬ್ಯಾಂಕ್ ಇಂಡಿಯಾ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ.

Minimum Balance Rules RBI s Important Update on How Much Money You Must Keep in Your Bank Account

ಬ್ಯಾಂಕ್‌ಗಳಿಗೆ ಬಿಟ್ಟ ವಿಷಯ: ವಿವಿಧ ಪ್ರಮುಖ ಬ್ಯಾಂಕ್‌ಗಳು ಕನಿಷ್ಠ ಉಳಿತಾಯ ಮಿತಿಯನ್ನು ಹೆಚ್ಚಳ ಮಾಡುತ್ತಿರುವುದನ್ನು ಆರ್‌ಬಿಐ ತಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಬ್ಯಾಂಕ್‌ಗಳಿಗೆ ಸಂಬಂಧಿಸಿದ ವಿಷಯ ಎಂದಿದ್ದಾರೆ. ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು ಎನ್ನುವುದು ಆಯಾ ಬ್ಯಾಂಕ್‌ಗಳಿಗೆ ಸಂಬಂಧಿಸಿದ ವಿಷಯವಾಗಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹೇಳಿದ್ದಾರೆ. ಈ ಮೂಲಕ ಬ್ಯಾಂಕ್‌ನ Minimum Balance ವಿಚಾರದಲ್ಲಿ ಆಯಾ ಬ್ಯಾಂಕ್‌ಗಳೇ ನಿರ್ಧಾರ ತೆಗೆದುಕೊಳ್ಳಲಿವೆ ಎಂದಿದ್ದಾರೆ.

ಸೇವಿಂಗ್ಸ್‌ ಅಕೌಂಟ್ / ಉಳಿತಾಯ ಖಾತೆಗೆ ಕನಿಷ್ಠ ₹50,000 ಬ್ಯಾಲೆನ್ಸ್ ಇರಬೇಕು ಹಾಗೂ ಇದು ಕಡ್ಡಾಯ ಎಂದು ಹೊಸ ಪ್ರಕಟಣೆಯನ್ನು ಐಸಿಐಸಿ ಬ್ಯಾಂಕ್ ನೀಡಿತ್ತು. ಹೊಸ ನಿಯಮವು ಆಗಸ್ಟ್ ಒಂದರಿಂದಲೇ ಜಾರಿಗೆ ಬರಲಿದೆ. ಮೆಟ್ರೋ ಹಾಗೂ ನಗರ ಪ್ರದೇಶಗಳ ಗ್ರಾಹಕರಿಗೆ ಕನಿಷ್ಠ ಸರಾಸರಿ ಉಳಿತಾಯ ಮೊತ್ತವನ್ನು ಈಗ 10,000 ರೂಪಾಯಿ ಇದೆ. ಇದನ್ನು ಬರೋಬ್ಬರಿ 50,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅರೆ-ನಗರ ಪ್ರದೇಶಗಳಲ್ಲಿ ಈ ಮೊತ್ತವನ್ನು ಈಗಿನ 5,000 ರೂಪಾಯಿಯಿಂದ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇನ್ಮುಂದೆ 25,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಶಾಖೆಗಳಲ್ಲಿ ಈ ಮೊತ್ತವನ್ನು ಈಗ ಇರುವ 2,500 ರೂಪಾಯಿಯಿಂದ 10,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಆದರೆ ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ.

ಈ ಆರು ಬ್ಯಾಂಕ್‌ಗಳಲ್ಲಿ Minimum Balance "0"

ಐಸಿಐಸಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಆದರೆ ಕಳೆದ ಒಂದು ತಿಂಗಳ ಮುಂಚೆಯಷ್ಟೇ ದೇಶದ ಪ್ರಮುಖ ಬ್ಯಾಂಕ್‌ಗಳು Minimum Balance "0" ಮಾಡಿವೆ. ಈ ಬ್ಯಾಂಕ್‌ಗಳಲ್ಲಿ ಖಾತೆ ಶೂನ್ಯ ಹಣವಿದ್ದರೂ ನಡೆಯುತ್ತಿದೆ. ಅದು ಯಾವ ಬ್ಯಾಂಕ್‌ಗಳು ಎನ್ನುವ ವಿವರ ಇಲ್ಲಿದೆ. ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ತಮ್ಮ ಹೆಚ್ಚಿನ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡಗಳನ್ನು ತೆಗೆದುಹಾಕಿರುವ ಕೆಲವು ಪ್ರಮುಖ ಬ್ಯಾಂಕ್‌ಗಳಾಗಿವೆ.

Previous Post Next Post