KSRTC Tour Package: ಕೆಎಸ್‌ಆರ್‌ಟಿಸಿ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಕೇಜ್‌ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಅದರಲ್ಲೂ, ಇದೀಗ ಮಳೆಗಾಲ ಆದ್ದರಿಂದ ಬಹುತೇಕ ಮಂದಿ ಮಲೆನಾಡಿನ ಜೋಗಕ್ಕೆ ಭೇಟಿ ನೀಡಲು ಭಯಸುತ್ತಾರೆ. ಅದಂತೆಯೇ ಇದೀಗ ಕೆಎಸ್‌ಆರ್‌ಟಿಸಿ ದಾವಣಗೆರೆಯಿಂದ ಜೋಗ ಸೇರಿದಂತೆ ಹಲವು ಭಾಗಗಳಿಗೆ ಟೂರ್ ಪ್ಯಾಕೇಜ್ ಘೋಷಿಸಿದೆ. ಹಾಗಾದರೆ, ಸ್ಥಳ, ಮಾರ್ಗ, ಸಮಯ, ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದ ಜೀವನಾಡಿ ಸಾರಿಗೆ ಕೆಎಸ್‌ಆರ್‌ಟಿಸಿ ಆಗಾಗ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಮತ್ತೊಂದು ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಆಗಸ್ಟ್ 17ರಿಂದ ಪ್ರತಿ ಭಾನುವಾರ, ರಜಾ ದಿನಗಳಂದು ದಾವಣಗೆರೆ ಕೆಎಸ್‍ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಪ್ರಾರಂಭ ಮಾಡಲಾಗಿದೆ. ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ.
KSRTC Announces Special Tour Package from Davanagere to Popular Destinations
ಪ್ರತಿ ಭಾನುವಾರ, ರಜಾ ದಿನಗಳಂದು ದಾವಣಗೆರೆಯಿಂದ ಜೋಗ-ಸಿಗಂಧೂರು ಮತ್ತು ಅಂಜನಾದ್ರಿಬೆಟ್ಟ- ಹಂಪಿ - ತುಂಗಾಭದ್ರಾ ಡ್ಯಾಂ ಹಾಗೂ ಇಂಡಗುಂಜಿ-ಅಪ್ಸರಕೊಂಡ ವಾಟರ್ ಫಾಲ್ಸ್ - ಇಕೋಬೀಚ್‍ಗೆ ದಾವಣಗೆರೆ ಕೆಎಸ್‍ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಪ್ರಾರಂಭ ಮಾಡಲಾಗಿದೆ.
ಎಲ್ಲೆಲ್ಲಿಗೆ ದರ ಎಷ್ಟು?: ದಾವಣಗೆರೆ, ಸಿಂಗದೂರು, ಇಕ್ಕೇರಿಕೋಟೆ, ವರದಮೂಲ, ಜೋಗಫಾಲ್‌ಗೆ ಎರಡು ಕಡೆಯಿಂದ ಸೇರಿ ಒಬ್ಬ ವ್ಯಕ್ತಿಗೆ 600 ರೂಪಾಯಿ, ಮಕ್ಕಳಿಗೆ 460 ರೂಪಾಯಿ ಇರಲಿದೆ. ದಾವಣಗೆರೆ, ಅಂಜನಾದ್ರಿಬೆಟ್ಟ, ಹಂಪಿ, ತುಂಗಾಭದ್ರಾ ಡ್ಯಾಂಗೆ ಎರಡು ಕಡೆಯಿಂದ ಸೇರಿ ಒಬ್ಬ ವ್ಯಕ್ತಿಗೆ 500 ರೂಪಾಯಿ, ಮಕ್ಕಳಿಗೆ 475 ರೂಪಾಯಿ ನಿಗದಿಪಡಿಲಾಗಿದೆ.
ದಾವಣಗೆರೆಯಿಂದ ಹೊರಟು ಇಡಗುಂಜಿ, ಅಪ್ಸರಕೊಂಡ ವಾಟರ್ ಫಾಲ್ಸ್, ಇಕೋಬೀಚ್, ಬ್ಯಾಕ್ ವಾಟರ್ ಬೋಟಿಂಗ್‍ಗೆ ಎರಡು ಕಡೆಯಿಂದ ಸೇರಿ ಪ್ರತಿ ವ್ಯಕ್ತಿಗೆ 685 ರೂಪಾಯಿ, ಮಕ್ಕಳಿಗೆ 515 ರೂಪಾಯಿ ನಿಗದಿ ಮಾಡಲಾಗಿದೆ. ಆಸಕ್ತರು ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಅಥವಾ ಅಧಿಕೃತ ವೆಬ್‌ಸೈಟ್ ksrtc.karnataka.gov.inಗೆ ಭೇಟಿ ನೀಡಿ ಟಿಕೆಟ್ ಬುಕ್ ಮಾಡಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್.ಎಫ್ ಬಸಾಪುರ ಅವರು ಮಾಹಿತಿ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿಯಿಂದ ಟೂರ್ ಪ್ಯಾಕೇಜ್ ಘೋಷಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಮೊದಲಿನಿಂದಲೂ ಸಹ ಪ್ರಯಾಣಿಕರ ಕೈಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಅದರಲ್ಲೂ ದಾವಣಗೆರೆಯಿಂದ ಇತ್ತೀಗಷ್ಟೇ ಜೋಗಕ್ಕೆ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಮತ್ತೆ ಇದೀಗ ಘೋಷಿಸಿದೆ.
ಇದೀಗ ರಾಜ್ಯದಲ್ಲಿ ಮಳೆಗಾಲ ಇದ್ದು, ಈ ವೇಳೆ ಪ್ರವಾಸ ಮಾಡುವುದರಲ್ಲಿ ಇರುವ ಮಜಾ ಬೇರೆ ಯಾವ ಸಮಯದಲ್ಲೂ ಸಿಗುವುದಿಲ್ಲ. ಆದ್ದರಿಂದ ಬಹುತೇಕ ಜನರು ಇದೇ ವೇಳೆ ಪ್ರವಾಸ ಮಾಡಲು ಬಯಸುತ್ತಾರೆ. ಇದನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಪ್ರವಾಸ ಮಾಡಬಯಸುವವರಿಗೆ ಇದೇ ಉತ್ತಮ ಸಮಯ ಆಗಿದೆ. ಇಷ್ಟು ಕಡಿಮೆ ದರದರಲ್ಲಿ ಮತ್ತೆ ಯಾವಾಗ ಇಂತಹ ಅವಕಾಶ ಸಿಗುತ್ತದೆಯೋ ಇಲ್ಲ ಗೊತ್ತಿಲ್ಲ. ಆದ್ದರಿಂದ ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಬೇಡಿ.