ಐಆರ್‌ಸಿಟಿಸಿ ಮತ್ತು ಕರ್ನಾಟಕ ಸರ್ಕಾರವು ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ ಕಾಶಿ ದರ್ಶನ ಮತ್ತು ದಕ್ಷಿಣ ಯಾತ್ರೆ ಎಂಬ ಎರಡು ವಿಶೇಷ ಪ್ರವಾಸಗಳನ್ನು ಪ್ರಾರಂಭಿಸಿವೆ. ಕಾಶಿ ದರ್ಶನವು ಆಗಸ್ಟ್ 31 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದ್ದು, ವಾರಣಾಸಿ, ಅಯೋಧ್ಯೆ, ಗಯಾ ಮುಂತಾದ ಸ್ಥಳಗಳಿಗೆ ಭೇಟಿ ನೀಡಲಾಗುವುದು. ದಕ್ಷಿಣ ಯಾತ್ರೆಯು ಸೆಪ್ಟೆಂಬರ್ 11 ರಿಂದ 16 ರವರೆಗೆ ನಡೆಯಲಿದ್ದು, ಕನ್ಯಾಕುಮಾರಿ, ತಿರುವನಂತಪುರಂ, ರಾಮೇಶ್ವರಂ ಮತ್ತು ಮಧುರೈಗೆ ಭೇಟಿ ನೀಡಲಾಗುವುದು. ಕರ್ನಾಟಕದ ಯಾತ್ರಿಕರಿಗೆ ಸರ್ಕಾರದಿಂದ ಸಹಾಯಧನ ಲಭ್ಯವಿದೆ.
ಕರ್ನಾಟಕದ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ . ಐಆರ್‌ಸಿಟಿಸಿ ಹಾಗೂ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಸಹಯೋಗದೊಂದಿಗೆ ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿ ಎರಡು ವಿಶೇಷ ಯಾತ್ರಾ ಪ್ರವಾಸಗಳನ್ನು ಘೋಸಲಾಗಿದೆ. ರಾಜ್ಯದ 7 ಜಿಲ್ಲೆಗಳ ಮೂಲಕ ಈ ರೈಲು ಸಂಚಾರ ನಡೆಸಲಿದೆ.
ಮೊದಲನೆ ಪ್ರವಾಸ ಪ್ಯಾಕೇಜ್ ಕಾಶಿ ದರ್ಶನ ಯಾತ್ರೆಯಾಗಿದೆ ಇದು 9 ದಿನಗಳ ಪ್ರಯಾಣವಾಗಿದ್ದು, ಆಗಸ್ಟ್ 31 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಯಾತ್ರೆಯು ವಾರಣಾಸಿ , ಅಯೋಧ್ಯೆ, ಗಯಾ ಮತ್ತು ಬೋಧಗಯಾ ಮತ್ತು ಪ್ರಯಾಗರಾಜ್ ಸೇರಿದಂತೆ ಪ್ರಮುಖ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ.
ಟಿಕೆಟ್ ದರ, ಸಹಾಯಧನ ಎಷ್ಟು?
ಈ ಪ್ಯಾಕೇಜ್‌ನ ಒಟ್ಟು ವೆಚ್ಚ ಪ್ರತಿ ವ್ಯಕ್ತಿಗೆ 22,500 ರೂ.. ಆದರೆ, ಕರ್ನಾಟಕದಲ್ಲಿ ವಾಸಿಸುವ ಯಾತ್ರಿಕರಿಗೆ ಕರ್ನಾಟಕ ಸರ್ಕಾರದಿಂದ 7,500 ರೂ. ಸಹಾಯಧನ ದೊರೆಯಲಿದ್ದು, ಪರಿಣಾಮಕಾರಿ ವೆಚ್ಚ 15,000 ರೂ. ಕ್ಕೆ ಇಳಿಯಲಿದೆ.
7 ಜಿಲ್ಲೆಗಳಿಂದ ರೈಲು ಸೌಲಭ್ಯ
ಈ ಪ್ರವಾಸಕ್ಕಾಗಿ ಎಸ್.ಎಂ.ವಿ.ಟಿ ಬೆಂಗಳೂರು / ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿ ಹತ್ತುವ ಅವಕಾಶ ಕಲ್ಪಿಸಲಾಗಿದೆ.
ಕಾಶಿಯಲ್ಲಿ ಯಾವೆಲ್ಲಾ ದೇವಸ್ಥಾನಗಳಿಗೆ ದರ್ಶನ?
ಕಾಶಿ ವಿಶ್ವನಾಥ ದೇವಸ್ಥಾನ
ತುಳಸಿ ಮಾನಸ ದೇವಸ್ಥಾನ
ಸಂಕಟ ಮೋಚನ ಹನುಮಾನ್ ದೇವಸ್ಥಾನ
ಅಯೋದ್ಯದಲ್ಲಿ ಎಲ್ಲೆಲ್ಲಿ ಭೇಟಿ?
ರಾಮ ಜನ್ಮ ಭೂಮಿ ದೇವಸ್ಥಾನ
ಹನುಮಾನ್ ಗಡ್
ದಕ್ಷಿಣ ಯಾತ್ರೆ ಟಿಕೆಟ್ ದರ ಎಷ್ಟು?
ಎರಡನೇ ಪ್ರವಾಸ ಪ್ಯಾಕೇಜ್ 'ದಕ್ಷಿಣ ಯಾತ್ರೆ'. ಇದು 6 ದಿನಗಳ ಪ್ರಯಾಣವಾಗಿದ್ದು, ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 16 ರವರೆಗೆ ನಡೆಯಲಿದೆ. ಈ ಯಾತ್ರೆಯು ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಾದ ಕನ್ಯಾಕುಮಾರಿ (ಭಗವತಿ ದೇವಾಲಯ ಮತ್ತು ವಿವೇಕಾನಂದ ರಾಕ್ ಮೆಮೋರಿಯಲ್), ತಿರುವನಂತಪುರಂ (ಪದ್ಮನಾಭಸ್ವಾಮಿ ದೇವಾಲಯ), ರಾಮೇಶ್ವರಂ (ರಾಮನಾಥಸ್ವಾಮಿ ದೇವಾಲಯ) ಮತ್ತು ಮಧುರೈ (ಮೀನಾಕ್ಷಿ ದೇವಾಲಯ) ಗಳನ್ನು ಒಳಗೊಂಡಿದೆ.
ಈ ಪ್ಯಾಕೇಜ್‌ನ ವೆಚ್ಚ ಪ್ರತಿ ವ್ಯಕ್ತಿಗೆ 15,000 ರೂ. ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಕರ್ನಾಟಕ ಸರ್ಕಾರದಿಂದ 5,000 ರೂ.ವಿಶೇಷ ಸಬ್ಸಿಡಿ ಸಿಗಲಿದ್ದು, ಅಂತಿಮ ಬೆಲೆ 10,000 ರೂ. ಆಗಲಿದೆ. ಈ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಮತ್ತು ಎಸ್.ಎಂ.ವಿ.ಟಿ ಬೆಂಗಳೂರುಗಳಿಂದ ಈ ರೈಲು ಹತ್ತುವ ಅವಕಾಶವಿದೆ.
ಯಾತ್ರೆಯ ವಿಶೇಷತೆಗಳು ಏನು?
- ಎರಡೂ ಯಾತ್ರೆಗಳಿಗೂ ಭಾರತ್ ಗೌರವ್ ಪ್ರವಾಸಿ ರೈಲಿನ ಎಸಿ ತ್ರಿ ಟೈರ್ ಆಸನ ವ್ಯವಸ್ಥೆ ಇರಲಿದೆ.
- ಪ್ಯಾಕೇಜ್‌ನಲ್ಲಿ ವಿವಿಧ ಸ್ಥಳಗಳಲ್ಲಿ ಎರಡು/ಮೂರು ಹಂಚಿಕೆಯ ಆಧಾರದ ಮೇಲೆ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ವಸತಿ ಇರಲಿದೆ.
- ಎಲ್ಲಾ ಸಸ್ಯಾಹಾರಿ ಊಟ ನೀಡಲಾಗುತ್ತದೆ.
- ಹವಾನಿಯಂತ್ರಿತವಲ್ಲದ ಬಸ್ಸುಗಳ ಮೂಲಕ ಪ್ರವಾಸಿ ಸ್ಥಳಗಳ ಭೇಟಿ.
- ಪ್ರತಿ ಕೋಚ್‌ಗೆ ಪ್ರವಾಸ ಮಾರ್ಗದರ್ಶಿಗಳು ಇರುತ್ತಾರೆ.
ಪ್ರಯಾಣಿಕರಿಗಾಗಿ ಪ್ರಯಾಣ ವಿಮೆ ಇರುತ್ತದೆ.
ಬುಕ್ಕಿಂಗ್ ಹೇಗೆ?
ಹೆಚ್ಚಿನ ಮಾಹಿತಿ ಮತ್ತು ಕಾಯ್ದಿರಿಸುವಿಕೆಗಾಗಿ, ಯಾತ್ರಿಕರು ಐಆರ್‌ಸಿಟಿಸಿ ಕಚೇರಿಗಳನ್ನು ಸಂಪರ್ಕಿಸಬಹುದು.
ಬೆಂಗಳೂರು: 9003140710 / 8595931290 / 8595931291 / 8595931292,
ಮೈಸೂರು: 8595931294 & ಹುಬ್ಬಳ್ಳಿ: 8595931293
ವೆಬ್ ಸೈಟ್: www.irctctourism.comಗೆ ಭೇಟಿ ನೀಡಬಹುದು.