71st National Film Awards: 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆ ಆಗಿದೆ. ಈ ಬಾರಿ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಒಟ್ಟು 13 ಭಾಷೆಗಳ ತಲಾ ಒಂದೊಂದು ಸಿನಿಮಾಗಳಿಗೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ನೀಡಲಾಗಿದೆ.
ರಾಷ್ಟ್ರಪ್ರಶಸ್ತಿ ಪಡೆದ ಪ್ರಾದೇಶಿಕ ಸಿನಿಮಾಗಳು, ಕನ್ನಡದ ಯಾವ ಸಿನಿಮಾಕ್ಕೆ ಪ್ರಶಸ್ತಿ
ಇಂದು (ಆಗಸ್ಟ್ 01) 71 ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯ್ತು. ಫೀಚರ್ ಫಿಲಂ ವಿಭಾಗದಲ್ಲಿ ಆಶುತೋಷ್ ಗೋವರಿಕರ್, ನಾನ್ ಫೀಚರ್ ಫಿಲಂ ವಿಭಾಗದ ಮುಖ್ಯ ತೀರ್ಪುಗಾರರಾಗಿ ಪಿ ಶೇಷಾದ್ರಿ ಅವರುಗಳು ನೂರಾರು ಸಿನಿಮಾಗಳನ್ನು ವೀಕ್ಷಿಸಿ ಅವುಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ವಿಭಾಗಾನುಸಾರ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ. ಪ್ರತಿ ಪ್ರಾದೇಶಿಕ ಭಾಷೆಯಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳ 13 ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಘೋಷಿಸಲಾಗಿದೆ.
ಅತ್ಯುತ್ತಮ ಕನ್ನಡ ಭಾಷಾ ಸಿನಿಮಾ ‘ಕಂದೀಲು’ ಪಾಲಾಗಿದೆ. ಈ ಸಿನಿಮಾವನ್ನು ಕೆ ಯಶೋಧಾ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ತಮಿಳಿನ ಅತ್ಯುತ್ತಮ ಸಿನಿಮಾ ‘ಪಾರ್ಕಿಂಗ್’, ನಂದಮೂರಿ ಬಾಲಕೃಷ್ಣ ಮತ್ತು ಶ್ರೀಲೀಲಾ ನಟಿಸಿರುವ ‘ಭಗವಂತ ಕೇಸರಿ’ ಅತ್ಯುತ್ತಮ ತೆಲುಗು ಸಿನಿಮಾ ಆಗಿ ಆಯ್ಕೆ ಆಗಿದೆ. ಊರ್ವಶಿ ಮತ್ತು ಪಾರ್ವತಿ ಮೆನನ್ ನಟಿಸಿರುವ ‘ಉಳುಲ್ಲುಕ್ಕು’ ಅತ್ಯುತ್ತಮ ಮಲಯಾಳಂ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.
ನಾನ್ ಫೀಚರ್ ವಿಭಾಗದಲ್ಲಿ ಕನ್ನಡದ ‘ಸನ್ ಫ್ರವರ್ಸ್ ವರ್ ದಿ ಫಸ್ಟ್ ಟು ನೋ’ ಹೆಸರಿನ ಕಿರು ಚಿತ್ರಕ್ಕೆ ಅತ್ಯುತ್ತಮ ಚಿತ್ರಕತೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ಸಿನಿಮಾವನ್ನು ಚಿದಾನಂದ ಎಸ್ ನಾಯಕ್ ನಿರ್ದೇಶನ ಮಾಡಿದ್ದಾರೆ.
ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ
ಅತ್ಯುತ್ತಮ ಥಾಯ್ ಪಾಕೆ ಸಿನಿಮಾ- ಪಾಯ್ ಥಾಂಗ್
ಅತ್ಯುತ್ತಮ ಗಾರೊ ಫಿಲಂ-ರಿಂದೋಗಿತಾಂಗ್
ಅತ್ಯುತ್ತಮ ತೆಲುಗು ಸಿನಿಮಾ- ಭಗವಂತ್ ಕೇಸರಿ
ಅತ್ಯುತ್ತಮ ತಮಿಳು ಸಿನಿಮಾ- ಪಾರ್ಕಿಂಗ್
ಅತ್ಯುತ್ತಮ ಪಂಜಾಬಿ- ಗುಡ್ಡೆ ಗುಡ್ಡೆ ಚಾ
ಅತ್ಯುತ್ತಮ ಒಡಿಯಾ ಸಿನಿಮಾ-ಪುಷ್ಕರ
ಅತ್ಯುತ್ತಮ ಮರಾಠಿ ಸಿನಿಮಾ- ಶಾಮಾಚಿ ಆಯಿ
ಅತ್ಯುತ್ತಮ ಮಲಯಾಳಂ ಸಿನಿಮಾ- ಉಳುಲುಕ್ಕು
ಅತ್ಯುತ್ತಮ ಕನ್ನಡ ಸಿನಿಮಾ- ಕಂದೀಲು
ಅತ್ಯುತ್ತಮ ಹಿಂದಿ ಸಿನಿಮಾ-ಕಠಲ್
ಅತ್ಯುತ್ತಮ ಗುಜರಾತಿ ಸಿನಿಮಾ-ವಶ್
ಅತ್ಯುತ್ತಮ ಬೆಂಗಾಲಿ ಸಿನಿಮಾ- ಡೀಪ್ ಫ್ರಿಡ್ಜ್
ಅತ್ಯುತ್ತಮ ಅಸ್ಸಾಮಿಸಿನಿಮಾ – ರೊಂಗತಪು 1982