ಉದ್ಯಮಶೀಲತಾ ಅಭಿವೃದ್ದಿ ಯೋಜನೆ: ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ ಇಷ್ಟು ಲಕ್ಷ ಸಹಾಯಧನ

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ :ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಯುವಕರಿಗೆ ಸ್ವಯಂ ಉದ್ಯೋಗದತ್ತ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉದ್ಯಮಶೀಲತಾ ಅಭಿವೃದ್ದಿ ಯೋಜನೆ ಅಡಿಯಲ್ಲಿ ಮೊಬೈಲ್‌ ಕ್ಯಾಂಟೀನ್‌ (ಫುಡ್‌ ಟ್ರಕ್‌/ಮೊಬೈಲ್‌ ಕಿಚನ್‌) ಆರಂಭಿಸಲು ಗರಿಷ್ಠ ₹4 ಲಕ್ಷ ರೂ. ಸಹಾಯಧನ ಒದಗಿಸಲು ಘೋಷಿಸಿದೆ.

ಏನಿದು ಉದ್ಯಮಶೀಲತಾ ಅಭಿವೃದ್ದಿ ಯೋಜನೆ?

ಹೊಸ ಉದ್ಯಮ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಆರ್ಥಿಕ ಹಿಂದುಳಿದ ವರ್ಗದವರಿಗೆ ಆರ್ಥಿಕ ನೆರವು, ತರಬೇತಿ ಮತ್ತು ಮಾರುಕಟ್ಟೆ ಮಾರ್ಗದರ್ಶನ ನೀಡುವದು ಈ ಯೋಜನೆಯ ಉದ್ದೇಶ.

ಸಹಾಯಧನ + ಸಾಲ ಸೌಲಭ್ಯ

ಉದ್ಯಮಶೀಲತೆ ತರಬೇತಿ

ಉತ್ಪನ್ನ ಮಾರುಕಟ್ಟೆ ಬೆಂಬಲ

ಮೊಬೈಲ್‌ ಕ್ಯಾಂಟೀನ್‌ಗೆ ಸಿಗುವ ನೆರವು

ಮೊಬೈಲ್‌ ಕ್ಯಾಂಟೀನ್‌ / ಫುಡ್‌ ಟ್ರಕ್‌ ಖರೀದಿಗೆ ಸಹಾಯಧನ

ಘಟಕ ವೆಚ್ಚದ 75% ಅಥವಾ ಗರಿಷ್ಠ ₹4 ಲಕ್ಷ ರೂ.ವರೆಗೆ ಸರ್ಕಾರದಿಂದ ನೆರವು

ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ವ್ಯವಸ್ಥೆ

ಅರ್ಹತೆ

ಅಭ್ಯರ್ಥಿ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು

ಕರ್ನಾಟಕದ ನಿವಾಸಿ ಆಗಿರಬೇಕು

21 ರಿಂದ 50 ವರ್ಷ ವಯಸ್ಸಿನವರು

ವಾರ್ಷಿಕ ಕುಟುಂಬದ ಆದಾಯ: ಗ್ರಾಮೀಣ ಪ್ರದೇಶದಲ್ಲಿ ಗರಿಷ್ಠ ₹1.5 ಲಕ್ಷ, ನಗರ ಪ್ರದೇಶದಲ್ಲಿ ಗರಿಷ್ಠ ₹2 ಲಕ್ಷ

ಈ ಹಿಂದೆ ಸರ್ಕಾರ/ನಿಗಮದಿಂದ ₹1 ಲಕ್ಷಕ್ಕಿಂತ ಹೆಚ್ಚು ನೆರವು ಪಡೆದಿರಬಾರದು

ಘಟಕ ಆರಂಭಿಸಲು ಅಗತ್ಯ ಸ್ಥಳಾವಕಾಶ ಇರಬೇಕು

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ

ಸೆಪ್ಟೆಂಬರ್ 10, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  swdcorp.karnataka.gov.in

“ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆ ಮಾಡಿ

ಮೊಬೈಲ್‌ ನಂಬರ್ + OTP ಬಳಸಿ ಲಾಗಿನ್ ಆಗಿ

ಅಗತ್ಯ ವಿವರಗಳನ್ನು ತುಂಬಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ

Submit ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ಅಗತ್ಯ ದಾಖಲೆಗಳು

ಆಧಾರ್ ಕಾರ್ಡ್

ಚಾಲನಾ ಪರವಾನಗಿ

ಭಾವಚಿತ್ರ

ಬ್ಯಾಂಕ್ ಪಾಸ್‌ಬುಕ್‌

ಜಾತಿ & ಆದಾಯ ಪ್ರಮಾಣ ಪತ್ರ

ರೇಶನ್ ಕಾರ್ಡ್

ಮೊಬೈಲ್ ನಂಬರ್

ಹೆಚ್ಚಿನ ಮಾಹಿತಿಗಾಗಿ

ಸಹಾಯವಾಣಿ: 94823 00400 (24×7 ಲಭ್ಯ)

ವಿಶೇಷವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕರು ಈ ಯೋಜನೆಯಡಿ ತಮ್ಮ ಸ್ವಂತ ಮೊಬೈಲ್‌ ಕ್ಯಾಂಟೀನ್‌ ಪ್ರಾರಂಭಿಸಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಇದು ಉತ್ತಮ ಅವಕಾಶ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

Previous Post Next Post