ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಯುವಕ-ಯುವತಿಯರು ಸ್ವಯಂ ಉದ್ಯೋಗಿ ಆಗಲು ಬಯಸಿದರೆ ಇದು ಒಂದು ಉತ್ತಮ ಅವಕಾಶವಾಗಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ‘ಉದ್ಯಮಶೀಲತಾ ಅಭಿವೃದ್ಧಿ ಯೋಜನೆ’ (ISB Scheme) ಅಡಿಯಲ್ಲಿ ₹2 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ನೀಡಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಮುಖ್ಯ ಅಂಶಗಳು:
ಫಲಾನುಭವಿಗಳು : ಪರಿಶಿಷ್ಟ ಜಾತಿ ಸಮುದಾಯದ ನಿರುದ್ಯೋಗ ಯುವಕ-ಯುವತಿಯರು.
ಉದ್ದೇಶ: ವ್ಯಾಪಾರ ಮತ್ತು ಇತರೆ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು.
ಸಹಾಯಧನ: ಘಟಕದ ಒಟ್ಟು ವೆಚ್ಚದ 70% ಅಥವಾ ಗರಿಷ್ಠ ₹2 ಲಕ್ಷ ರೂಪಾಯಿಗಳು (ಎ ಇದರಲ್ಲಿ ಯಾವುದು ಕಡಿಮೆಯೋ ಅದು).
ಬ್ಯಾಂಕ್ ಸಹಭಾಗಿತ್ವ: ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಲು ಸಹಾಯ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರಾದ ಯುವಕ-ಯುವತಿಯರು ಸೆಪ್ಟೆಂಬರ್ 10, 2025 ರೊಳಗೆ ಕೆಳಗಿನ ವಿಧಾನಗಳಲ್ಲಿ ಒಂದರ ಮೂಲಕ ಅರ್ಜಿ ಸಲ್ಲಿಸಬಹುದು:
ಆನ್‌ಲೈನ್: ಸೇವಾ ಸಿಂಧು ಪೋರ್ಟಲ್‌ನಲ್ಲಿ https://sevasindhu.karnataka.gov.in ಈ ಲಿಂಕ್‌ನಲ್ಲಿ ಅರ್ಜಿ ಪೂರೈಸಬಹುದು.
ಆಫ್‌ಲೈನ್: ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು.
ಈ ಯೋಜನೆಯು ಯುವಜನರನ್ನು ಉದ್ಯಮಿಗಳಾಗಿ ರೂಪಿಸುವ ಮತ್ತು ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡುವ ಒಂದು ಉತ್ತಮ ಪ್ರಯತ್ನವಾಗಿದೆ. ಅರ್ಹತೆ ಹೊಂದಿರುವ ಎಲ್ಲಾ ಯುವಕ ಯುವತಿಯರು ಈ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆಯು ಅಪೇಕ್ಷಿಸಿದೆ.