Atal Pension Scheme-ಕೇಂದ್ರ ಸರ್ಕಾರದಿಂದ ವೃದ್ಧರಿಗೆ ತಿಂಗಳಿಗೆ 5000 ಪೆನ್ಷನ್! ನೀವು ಕೂಡ ಅಪ್ಲೈ ಮಾಡಿ

Atal Pension Scheme-ಕೇಂದ್ರ ಸರ್ಕಾರದಿಂದ ವೃದ್ಧರಿಗೆ ತಿಂಗಳಿಗೆ 5000 ಪೆನ್ಷನ್! ನೀವು ಕೂಡ ಅಪ್ಲೈ ಮಾಡಿ

ಸ್ನೇಹಿತರೆ ನೀವು ವೃದ್ಧರಾದ ಮೇಲೆ ಯಾವುದಾದರೂ ಪೆನ್ಷನ್ ಯೋಜನೆಗೆ(Atal pension scheme) ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ ಹಾಗಾದರೆ ಇಲ್ಲಿ ನೋಡಿ (Atal pension scheme) ಕೇಂದ್ರ ಸರ್ಕಾರ ನಿಮಗೆ ಅಂತಾನೆ ಜಾರಿ ತಂದಿದ್ದಾರೆ “ಅಟಲ್ ಪೆನ್ಷನ್ ಯೋಜನೆ” ನೀವು ಈ ಸ್ಕೀಮ್ ಗೆ ಈಗಲಿಂದಲೇ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ 60 ವರ್ಷ ದಾಟಿದ ವೇಳೆಗೆ ಪ್ರತಿ ತಿಂಗಳು 1000 ರಿಂದ 5000 ರೂಪಾಯಿವರೆಗೆ ಪೆನ್ಷನ್ ಪಡೆಯಬಹುದು.

ನೀವೇನಾದ್ರೂ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ಅಂಕಣದಲ್ಲಿ ಅಟಲ್ ಪೆನ್ಷನ್ ಯೋಜನೆ(Pension Scheme) ಎಂದರೇನು? ಅಟಲ್ ಪೆನ್ಷನ್ ಯೋಜನೆಯಡಿಯಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಮತ್ತು ಹಣ ಪಾವತಿ ಸೇರಿದಂತೆ ಸಂಪೂರ್ಣ ಅಗತ್ಯ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.

What is Atal pension scheme-ಅಟಲ್ ಪೆನ್ಷನ್ ಯೋಜನೆ ಎಂದರೇನು?

ಅಟಲ್ ಪಿಂಚಣಿ ಸ್ಕೀಮ್ ಈ ಯೋಜನೆಯು ಕೇಂದ್ರ ಸರ್ಕಾರದಾಗಿದ್ದು. ಈ ಮಹತ್ಕಾರಿ ಯೋಜನೆಯ ಮೂಲಕ ಹೂಡಿಕೆ ಮಾಡಿದ ಸದಸ್ಯರು ನಿವೃತ್ತಿ ಹೊಂದಿದ ನಂತರ ತಿಂಗಳಿಗೆ 1000 ಇಂದ 5000 ವರೆಗೆ ನಿರಂತರವಾಗಿ ಪೆನ್ಷನ್ ಪಡೆಯಬಹುದಾಗಿದೆ.

Atal Pension scheme useful for-ಈ ಯೋಜನೆ ಯಾರಿಗೆ ಉಪಯುಕ್ತ?

ಅಟಲ್ ಪೆನ್ಷನ್ ಸ್ಕೀಮ್ ಈ ಯೋಜನೆಯ ಅಸಂಘಟಿತ ವಲಯದ ಕಾರ್ಮಿಕರು ಅಂದರೆ ದಿನಗೂಲಿ ಕೆಲಸ ಮಾಡುವವರು ಆಟೋ ಚಾಲಕರು, ಕೂಲಿ ಕಾರ್ಮಿಕರು, ಸಣ್ಣಪುಟ್ಟ ಬೀದಿ ವ್ಯಾಪಾರಿಗಳು, ಟ್ಯಾಕ್ಸಿ ಡ್ರೈವರ್, ಇತ್ಯಾದಿ… ಇಂಥವರಿಗೆ ಈ ಯೋಜನೆ ಬಹಳ ಉಪಯುಕ್ತವಾಗಿದೆ. ಏಕೆಂದರೆ ಇವರು ಕೇವಲ ತಿಂಗಳಿಗೆ 210 ಪಾವತಿಸಿದರೆ ಸಾಕು.

ನೆನಪಿರಲಿ 18 ವರ್ಷದವರೆಗೆ ಈ ಯೋಜನೆಗೆ ನಿರಂತರವಾಗಿ ಪ್ರೀಮಿಯಂ ಕಟ್ಟಿದರೆ ನಿಮಗೆ 60 ವಯಸು ದಾಟಿದ ವೇಳೆ ತಿಂಗಳ 5000 ವರೆಗೆ ಪೆನ್ಷನ್ ಬರುವುದು. ಈ ಹಣವನ್ನು ನಿಮ್ಮ ಜೀವನವನ್ನು ಸುಗಮವಾಗಿ ಸಾಗಿಸಲು ಬಹಳ ಉಪಯೋಗವಾಗುತ್ತದೆ.

Atal Pension scheme Eligibility-ಯಾರು ಅರ್ಜಿಯನ್ನು ಸಲ್ಲಿಸಬಹುದು ?

ಈ ಅಟಲ್ ಪಿಂಚನ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಕನಿಷ್ಠ ವಯಸ್ಸು 18 ವರ್ಷದಿಂದ ಗರಿಷ್ಠ 40 ವಯಸ್ಸಿನ ಒಳಗಿರಬೇಕು. ಹಾಗೂ ಬಹಳ ಮುಖ್ಯವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವವರು ದಿನಗೂಲಿ ಕೆಲಸ ಮಾಡುವವರು, ಆಟೋ ಚಾಲಕರು, ಕೂಲಿ ಕಾರ್ಮಿಕರು, ಟ್ಯಾಕ್ಸಿ ಡ್ರೈವರ್, ಹಾಗೂ ಬೀದಿ ವ್ಯಾಪಾರಿಗಳು, ಮತ್ತು ಸಣ್ಣಪುಟ್ಟ ವ್ಯವಹಾರ ನಡೆಸುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಬಹಳ ಮುಖ್ಯವಾಗಿ ಅವರು ಭಾರತದ ನಾಗರಿಕರಾಗಿರಬೇಕು.

Atal Pension scheme Payment methods-ಪಾವತಿಯ ವಿಧಾನಗಳು ?

ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಮೂರು ರೀತಿಯ ಆಪ್ಷನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮೊದಲನೆಯದು ಮಾಸಿಕ ಅಂದರೆ ತಿಂಗಳು ತಿಂಗಳು ನೀವು ಪ್ರೀಮಿಯಂ ಕಟ್ಟಬೇಕು. ಎರಡನೆಯದು ಅರ್ಧ ವಾರ್ಷಿಕ ಅಂದರೆ ನೀವು 6 ತಿಂಗಳಿಗೊಮ್ಮೆ ಪ್ರೀಮಿಯಂ ಕಟ್ಟಬೇಕು. ಮೂರನೆಯದು ವಾರ್ಷಿಕ ಅಂದರೆ ವರ್ಷಕ್ಕೊಮ್ಮೆ ಪ್ರೀಮಿಯಂ ಕಟ್ಟಿದರೆ ಸಾಕು.

How To Apply Atal Pension scheme- ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಅಟಲ್ ಪೆನ್ಷನ್ ಯೋಜನೆಗೆ ನೀವು ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮೊದಲನೇದು ಆನ್ಲೈನ್ ಮೂಲಕ ಎರಡನೆಯದು ಆಫ್ಲೈನ್ ಮೂಲಕ.

Online method - ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ?

ಆಸಕ್ತ ಅರ್ಜಿದಾರರ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲು ಸರ್ಕಾರದ ಅಧಿಕೃತ "Apply Now" ವೆಬ್ಸೈಟ್ಗೆ ಭೇಟಿ ನೀಡಿ.

Step-2: ನಂತರ ಈ ಪೇಜ್ ನಲ್ಲಿ ಮೇಲೆ ಕಾಣುವ "Atal Pension Scheme" ಬಟನ್ ಮೇಲೆ ಕ್ಲಿಕ್ ಮಾಡಿ "APY Registration" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ಅರ್ಜಿ ನಮೂನೆ ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣುವ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

Offline method -ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ?

ಮೊದಲು ನಿಮ್ಮ ಹತ್ತಿರದ ನಿಕಟ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಟಲ್ ಪೆನ್ಷನ್ ಯೋಜನೆಯ ಅರ್ಜಿ ಫಾರ್ಮ್ ಪಡೆದುಕೊಳ್ಳಿ. ನಂತರ ಅರ್ಜಿ ಫಾರಂ ಭರ್ತಿ ಮಾಡಿ ಹಾಗೂ ಅಗತ್ಯವಿರುವ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಿ.

Documents For Atal Pension - ಯೋಜನೆಗೆ ಬೇಕಾಗುವಂತಹ ಅಗತ್ಯ ದಾಖಲೆಗಳು?

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ಕೆಳಗೆ ನೀಡಿರುವ ದಾಖಲೆಗಳು ಅಗತ್ಯವಾಗಿ ಕೇಳಲಾಗುವುದು. ನಿಮ್ಮ ಆಧಾರ್ ಕಾರ್ಡ್, ಜನ್ಮ ಪ್ರಮಾಣ ಪತ್ರ ಅಥವಾ ನಿಮ್ಮ ಹತ್ತನೇ ತರಗತಿಯ ಅಂಕಪಟ್ಟಿ, ನಿಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ, ನಾಮಿನಿ ವಿವರಗಳು, ನಿಮ್ಮ ಪಾನ್ ಕಾರ್ಡ್, ಇತ್ಯಾದಿ.. ಇದಿಷ್ಟು ದಾಖಲೆಗಳು ಅಗತ್ಯವಾಗಿ ಕೇಳಲಾಗುವುದು.

ಅಟಲ್ ಪೆಂಚನ್ ಯೋಜನೆಯು ನಿಮ್ಮ ಹಾಗೂ ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಇದು ಅತ್ಯುತ್ತಮ ಆಯ್ಕೆಯಾಗಿದೆ. ನೀವು ನಿಮ್ಮ ವಯಸ್ಸಾದ ಕಾಲದಲ್ಲಿ ನೆಮ್ಮದಿಯಿಂದ ಜೀವನವನ್ನು ಸಾಗಿಸಲು ತಿಂಗಳಿಗೆ ಕೇವಲ 210 ಇಂದ ಈ ಯೋಜನೆಗೆ ಹೂಡಿಕೆ ಮಾಡಿ. ನಿಮಗೆ 60 ವಯಸು ದಾಟಿದ ವೇಳೆ ನಿಮ್ಮ ಖಾತೆಗೆ ತಿಂಗಳ ತಿಂಗಳ 5000 ವರೆಗೆ ಸಿಗುವುದು. ಈ ಹಣವು ಜೀವನವನ್ನು ನೆಮ್ಮದಿಯಿಂದ ಸಾಗಿಸಲು ಬಹಳ ಉಪಯುಕ್ತ ದಯವಿಟ್ಟು ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

ಅಟಲ್ ಪೆನ್ಷನ್ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಮಾತ್ರ ಭೇಟಿ ನೀಡಿ ಲಿಂಕ್ ಕೆಳಗೆ ನೀಡಲಾಗಿದೆ.

Atal Pension Yojana Website- Click Here

Post a Comment

Previous Post Next Post

Top Post Ad

CLOSE ADS
CLOSE ADS
×