Free Mobile Repair Training : ಹೊಸ ಕೌಶಲ್ಯವನ್ನು ಕಲಿತು ಸ್ವಯಂ ಉದ್ಯೋಗ ಮಾಡಬಯಸುವಂತಹ ಯುವಕರಿಗೆ ರುಡ್ ಸೆಟ್ ಸಂಸ್ಥೆಯ ವತಿಯಿಂದ ಉಚಿತ ಮೊಬೈಲ್ ರಿಪೇರಿ ಹಾಗೂ ಸೇವೆಯ ಕುರಿತು 30 ದಿನಗಳ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಒಂದು ತಿಂಗಳ ಅವಧಿಗೆ ಸಂಪೂರ್ಣ ಮೊಬೈಲ್ ರಿಪೇರಿ ಹಾಗೂ ಸೇವೆಯ ಕುರಿತು ತರಬೇತಿ ನೀಡಲಿದ್ದು ಇದಕ್ಕಾಗಿ ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಅವಕಾಶ ಸದುಪಯೋಗ ಪಡೆಸಿಕೊಳ್ಳಿ.
ಅರ್ಹತೆಗಳು :
ಇದಕ್ಕಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 18 ರಿಂದ 45 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು, ಕನ್ನಡ ಭಾಷೆ ಮಾತನಾಡಲು, ಓದಲು ಹಾಗೂ ಬರೆಯಲು ಬಲ್ಲವರಾಗಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರಬೇಕು.
ತರಬೇತಿಯ ವಿವರ : ಇದು ಸೆಪ್ಟೆಂಬರ್ 01, 2025ರಿಂದ ಆರಂಭವಾಗಲಿದೆ.
ಅರ್ಜಿ ಸಲ್ಲಿಸುವ ವಿಳಾಸ :
ರುಡ್ ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ – 9481506564, 9380162042
Tags:
News special