Credit Card : ಒಂದು ವರ್ಷ ಬಳಸದಿದ್ದರೆ ಕಾರ್ಡ್ ಮುಚ್ಚುವ ಪ್ರಕ್ರಿಯೆ ಆರಂಭ.ಬಳಸದಿದ್ದರೂ ಸಿಬಿಲ್ ಸ್ಕೋರ್ ಮೇಲೆ ನೇರ ಪ್ರಭಾವವಿಲ್ಲ,ವರ್ಷಕ್ಕೆ ಕನಿಷ್ಠ ಒಂದು ವ್ಯವಹಾರ ಮಾಡುವುದರಿಂದ ಕಾರ್ಡ್ ಸಕ್ರಿಯ
ಇತ್ತೀಚೆಗಿನ ಆರ್ಥಿಕ ನಿಯಮಾವಳಿಗಳ ಪ್ರಕಾರ, ಕ್ರೆಡಿಟ್ ಕಾರ್ಡ್ (credit card) ಒಂದನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಬಳಸದೆ ಬಿಟ್ಟರೆ, ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ನಿರ್ದೇಶನದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ, ಇಂತಹ ಸಂದರ್ಭಗಳಲ್ಲಿ 30 ದಿನಗಳ ಮೊದಲು ನೋಟಿಸ್ ನೀಡಲಾಗುತ್ತದೆ. ಕಾರ್ಡ್ ಗೆ ಸಂಬಂಧಿಸಿದಂತೆ ಬಾಕಿ ಇದ್ದರೆ, ಕಾರ್ಡ್ ಗೆ ಸಂಬಂದಿಸಿದ ಖಾತೆಯಿಂದ ಪಡೆದ ನಂತರವೇ ಕಾರ್ಡ್ ಖಾತೆ ಮುಚ್ಚಲ್ಪಡುತ್ತದೆ.
ಕ್ರೆಡಿಟ್ ಕಾರ್ಡ್ ಇದ್ರೂ ಬಳಸದೇ ಇದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಮಾಹಿತಿ
ಆದರೆ ಇದರಿಂದ ನಿಮ್ಮ ಸಿಬಿಲ್ ಸ್ಕೋರ್ (CIBIL score) ನೇರವಾಗಿ ಕಡಿಮೆ ಆಗುತ್ತಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಬಳಸದ ಕಾರ್ಡ್ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೇರ ನಕಾರಾತ್ಮಕ ಪರಿಣಾಮ ಬೀರದು. ಆದರೆ, ಕಾರ್ಡ್ ಮುಚ್ಚದೆ ಕನಿಷ್ಠ ವರ್ಷಕ್ಕೆ ಒಂದು ಸಣ್ಣ ವ್ಯವಹಾರ ಮಾಡುವುದು ಸಹ ಉತ್ತಮ.
ಇನ್ನು ಬಳಕೆಯಿಲ್ಲದ ಕ್ರೆಡಿಟ್ ಕಾರ್ಡ್‌ಗಾಗಿ ಕೆಲವೊಮ್ಮೆ ಬ್ಯಾಂಕುಗಳು ನಿರ್ವಹಣಾ ಶುಲ್ಕವನ್ನೂ (annual maintenance fee) ವಿಧಿಸಬಹುದು. ಇದು ನಿಮ್ಮ ಸೇವಿಂಗ್ ಖಾತೆ (savings account) ಗೆ ಲಿಂಕ್ ಆಗಿದ್ದರೆ, ಆ ಹಣ ಕಡಿತಗೊಳ್ಳಬಹುದು.
ಒಬ್ಬ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಬೇಕೆಂದರೆ, RBI ಸೂಚಿಸಿದಂತೆ ವಿವಿಧ ಮಾರ್ಗಗಳನ್ನು ಬಳಸಬಹುದು. ಮೊಬೈಲ್ ಅಪ್ಲಿಕೇಶನ್ (mobile app), ವೆಬ್‌ಸೈಟ್ (website), ಹೆಲ್ಪ್‌ಲೈನ್ ನಂಬರ್ ಅಥವಾ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಕಸ್ಮಾತ್ ಕಾರ್ಡ್ ಮುಚ್ಚುವಾಗ, ಕಾರ್ಡ್ ಬಾಕಿ ಇದ್ದರೆ, ಖಾತೆಯಲ್ಲಿ ಹಣ ಇಲ್ಲದಿದ್ದರೆ, ಪ್ರತಿದಿನಕ್ಕೆ ₹500 ಪೆನಾಲ್ಟಿ ವಿಧಿಸುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆ, ನಿರ್ವಹಣೆ ಮತ್ತು ಮುಚ್ಚುವಿಕೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕ್ರೆಡಿಟ್ ಕಾರ್ಡ್ ಬಳಸದಿದ್ದರೆ, ಬ್ಯಾಂಕ್ ಅದನ್ನು ಮುಚ್ಚುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. “ಕ್ರೆಡಿಟ್ ಕಾರ್ಡ್ ಅನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಸದಿದ್ದರೆ, ಕಾರ್ಡ್ ಹೋಲ್ಡರ್‌ಗೆ ತಿಳಿಸಿದ ನಂತರ ಕಾರ್ಡ್ ಅನ್ನು ಮುಚ್ಚುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ.
30 ದಿನಗಳ ಅವಧಿಯಲ್ಲಿ ಕಾರ್ಡ್ ಹೋಲ್ಡರ್‌ನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಕಾರ್ಡ್ ನೀಡುವ ಬ್ಯಾಂಕ್ ಕಾರ್ಡ್ ಹೋಲ್ಡರ್ ಎಲ್ಲಾ ಬಾಕಿಗಳನ್ನು ಪಾವತಿಸಿದ ನಂತರ ಕಾರ್ಡ್ ಖಾತೆಯನ್ನು ಮುಚ್ಚುತ್ತದೆ