ಬರಿ ₹500ಕ್ಕೆ ಲಕ್ಷಗಳ ಲಾಭ ಪಡೆಯಿರಿ! ಟಾಪ್ 10 ಪೋಸ್ಟ್ ಆಫೀಸ್ ಪ್ಲಾನ್‌ಗಳು

ಕಡಿಮೆ ಅಪಾಯ ಮತ್ತು ನಿಶ್ಚಿತ ಆದಾಯ ನೀಡುವ ಯೋಜನೆಗಳು.ಮಕ್ಕಳಿಂದ ವೃದ್ಧರ ವರೆಗೆ ಎಲ್ಲಾ ವಯಸ್ಸಿನವರಿಗೂ ಯೋಗ್ಯ.ವರ್ಷಕ್ಕೆ ₹250 ರಿಂದ ₹1.5 ಲಕ್ಷವರೆಗೆ ಹೂಡಿಕೆ ಸಾಧ್ಯ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಣ ಹೂಡಿಕೆ ಮಾಡಲು ಅಪಾಯವಿಲ್ಲದ ಮತ್ತು ಸರ್ಕಾರದಿಂದ ಭದ್ರತೆ ಇರುವ ಯೋಜನೆಗಳನ್ನು ಹುಡುಕುತ್ತಿರುವವರಿಗಾಗಿ ಭಾರತೀಯ ಅಂಚೆ ಇಲಾಖೆ (Post Office) ವಿವಿಧ ಉಳಿತಾಯ ಯೋಜನೆಗಳನ್ನು ಒದಗಿಸುತ್ತಿದೆ. ಈ ಯೋಜನೆಗಳು ಕಡಿಮೆ ಮೊತ್ತದಿಂದ ಪ್ರಾರಂಭಿಸಬಹುದಾದಂತಹವುಗಳು.

ಕೃಷಿಕರು ಅಥವಾ ಹಣವನ್ನು ನಿಶ್ಚಿತ ಆದಾಯಕ್ಕೆ ಹೂಡಲು ಇಚ್ಛಿಸುವವರು ತಿಂಗಳಿಗೆ ಸಣ್ಣ ಪ್ರಮಾಣದ ಹಣ ಹೂಡಲು ಬಯಸುವವರು ರಾಷ್ಟ್ರೀಯ ಮರುಕಳಿಸುವ ಠೇವಣಿ ಯೋಜನೆ (Recurring Deposit – RD) ಬಳಸಬಹುದು. ಕನಿಷ್ಠ ₹100 ರೂಪಾಯಿ ಮಾತ್ರ ಹೂಡಿಕೆ ಮಾಡಬಹುದು.

ಬರಿ ₹500ಕ್ಕೆ ಲಕ್ಷಗಳ ಲಾಭ ಪಡೆಯಿರಿ! ಟಾಪ್ 10 ಪೋಸ್ಟ್ ಆಫೀಸ್ ಪ್ಲಾನ್‌ಗಳು

ಮಕ್ಕಳ ಭವಿಷ್ಯವನ್ನು ಭದ್ರ ಪಡಿಸಲು ಸಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme) ಒಳ್ಳೆಯ ಆಯ್ಕೆ. ಒಂದು ಹಣಕಾಸು ವರ್ಷದಲ್ಲಿ ₹250 ರಿಂದ ₹1.5 ಲಕ್ಷವರೆಗೆ ಹೂಡಿಕೆಗೆ ಅವಕಾಶವಿದೆ. ಈ ಯೋಜನೆ ಮುಖ್ಯವಾಗಿ ಬಾಲಕಿಯರಿಗಾಗಿ ರೂಪಿಸಲಾಗಿದೆ.

ಹಿರಿಯ ನಾಗರೀಕರಿಗಾಗಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS) ಗೆ ₹1,000 ದಿಂದ ಹಣ ಹೂಡಿಕೆ ಮಾಡಬಹುದು. ಇದರ ಗರಿಷ್ಟ ಮಿತಿ ₹30 ಲಕ್ಷ. ಉತ್ತಮ ಬಡ್ಡಿದರ ಸಿಗುತ್ತದೆ.

ಸ್ಥಿರ ಆದಾಯ ಬೇಕಾದವರಿಗೆ ಮಾಸಿಕ ಆದಾಯ ಯೋಜನೆ (Monthly Income Scheme – MIS) ಶ್ರೇಷ್ಠ ಆಯ್ಕೆ. ಪ್ರತಿ ತಿಂಗಳಿಗೂ ನಿರ್ದಿಷ್ಟ ಮೊತ್ತದ ಬಡ್ಡಿ ಸಿಗುತ್ತದೆ. ₹1,000 ಹೂಡಿಕೆಯು ಸಾಕಾಗುತ್ತದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund – PPF) ಎಂದರೆ ಹೆಚ್ಚು ಜನಪ್ರೀಯವಾದ ಯೋಜನೆ. ವರ್ಷಕ್ಕೆ ₹500 ರಿಂದ ₹1.5 ಲಕ್ಷವರೆಗೆ ಹೂಡಿಕೆಗೆ ಅವಕಾಶವಿದೆ. ಈ ಹಣವನ್ನು 15 ವರ್ಷಗಳವರೆಗೆ ಬಡ್ಡಿ ಸಹಿತ ಸಂಗ್ರಹಿಸಬಹುದು.

ಕಿಸಾನ್ ವಿಕಾಸ್ ಪತ್ರ (Kisan Vikas Patra – KVP) ಮೂಲಕ ನಿಮ್ಮ ಹಣವನ್ನು ಒಂದು ನಿಗದಿತ ಅವಧಿಯಲ್ಲಿ ದ್ವಿಗುಣಗೊಳಿಸಬಹುದು. ₹1,000 ದಿಂದ ಪ್ರಾರಂಭಿಸುವ ಈ ಯೋಜನೆ ಯಾವುದೇ ಗರಿಷ್ಟ ಮಿತಿಯಿಲ್ಲದೆ ಲಭ್ಯವಿದೆ.

ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (Mahila Samman Savings Certificate) ಎಂಬ ಹೊಸ ಯೋಜನೆ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ₹1,000 ದಿಂದ ₹2 ಲಕ್ಷವರೆಗೆ ಹಣ ಹೂಡಿಕೆ ಮಾಡಬಹುದು. ಈ ಯೋಜನೆಗೆ ನಿಶ್ಚಿತ ಬಡ್ಡಿದರ ಸಿಗುತ್ತದೆ.

ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ (Time Deposit – TD) ಒಂದು ವರ್ಷದವರೆಗೆ ಅಥವಾ ಐದು ವರ್ಷದವರೆಗೆ ಹಣ ಹೂಡಿಕೆ ಮಾಡಬಹುದಾದ ಯೋಜನೆ. ₹1,000 ದಿಂದ ಆರಂಭಿಸಲು ಸಾಧ್ಯವಿದೆ. ಬ್ಯಾಂಕ್ FD (Fixed Deposit) ರೀತಿಯ ಯೋಜನೆಯಿದು.

ಪೋಸ್ಟ್ ಆಫೀಸ್ ಉಳಿತಾಯ ಖಾತೆ ಒಂದು ಸಾಮಾನ್ಯ ಸೆವಿಂಗ್ಸ್ ಖಾತೆಯಂತಿದೆ. ₹500 ದಿಂದ ಆರಂಭಿಸಬಹುದಾಗಿದೆ. ಇದರಲ್ಲೂ ಉತ್ತಮ ಬಡ್ಡಿದರ ಲಭ್ಯವಿದೆ.

ಇದಲ್ಲದೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (National Savings Certificate – NSC) ಯನ್ನು ₹1,000 ದಿಂದ ಆರಂಭಿಸಬಹುದಾಗಿದೆ. ಇದನ್ನು ಇನ್ಕಮ್ ಟ್ಯಾಕ್ಸ್ ವಿನಾಯಿತಿಗಾಗಿ ಬಳಸಬಹುದು.

ಹೀಗೆ ಕೇಂದ್ರ ಸರ್ಕಾರದ ಮೇಲ್ವಿಚಾರಣೆಯಲ್ಲಿರುವ ಈ ಪೋಸ್ಟ್ ಆಫೀಸ್ ಯೋಜನೆಗಳು (Post Office Schemes) ಬೆಂಗಳೂರು (Bengaluru), ಹೈದರಾಬಾದ್ (Hyderabad), ಚೆನ್ನೈ (Chennai), ಕೊಲ್ಕತ್ತಾ (Kolkata), ಮುಂಬೈ (Mumbai) ಸೇರಿದಂತೆ ದೇಶದಾದ್ಯಂತ ಲಭ್ಯವಿದ್ದು, ಜನರಿಗೆ ಸುರಕ್ಷಿತ ಹೂಡಿಕೆಯ ಆಯ್ಕೆಗಳನ್ನು ನೀಡುತ್ತಿವೆ.


Previous Post Next Post