ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY-U 2.0) ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ವಸತಿ ರಹಿತ ಕುಟುಂಬಗಳಿಗೆ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಜಮೀನು/ಪ್ಲಾಟ್ ಇಲ್ಲದವರು, ಬಾಡಿಗೆ ಮನೆಯಲ್ಲಿ ಇರುವವರು ಮತ್ತು ಸ್ವಂತ ಮನೆ ನಿರ್ಮಿಸಲು ಆರ್ಥಿಕ ಸಹಾಯ ಬಯಸುವವರು ಅರ್ಜಿ ಸಲ್ಲಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾರು ಅರ್ಜಿ ಸಲ್ಲಿಸಬಹುದು?
1. ಫಲಾನುಭವಿಯು ವಿವಾಹಿತ ಮಹಿಳೆ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಇವರನ್ನು ಹೊರತುಪಡಿಸಿ ಪುರುಷರಾಗಿದ್ದಲ್ಲಿ ಮಾಜಿ ಯೋದರು, ವಿಧುರರು, ಅಂಗವಿಕಲರು, ಹಿರಿಯ ನಾಗರೀಕರು ಹಾಗೂ ವಿಚ್ಛೇದಿತರು ಅರ್ಹರಾಗಿರುತ್ತಾರೆ.
2.ವಾರ್ಷಿಕ ಆದಾಯ 2 ಲಕ್ಷದೊಳಗಿರಬೇಕು.
3. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇರೆ ಯಾವುದೇ ಯೋಜನೆ / ಇಲಾಖೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಯ್ಕೆಯಾಗಿ 20 ವರ್ಷದಿಂದ ವಸತಿ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಗೃಹ ನಿರ್ಮಾಣ ಮಾಡಿಕೊಂಡಿರಬಾರದು.
4. ಸಂಬಂಧಪಟ್ಟ ನಗರ / ಪಟ್ಟಣದ ದಿನಾಂಕ 01-09-2024ರೊಳಗೆ ವಾಸವಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
5. ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಅಥವಾ ವಸತಿ ಹೊಂದಿರದ ಕುಟುಂಬವನ್ನು ನಿವೇಶನ ರಹಿತರು(ಜಮೀನು/ಪ್ಲಾಟ್ ಇಲ್ಲದವರು) ಎಂದು ಪರಿಗಣಿಸಲಾಗುವುದು.
6.ರಾಜ್ಯದ ಯಾವುದೇ ಭಾಗದಲ್ಲಿ ತಮ್ಮ ಸ್ವಂತ ನಿವೇಶನದಲ್ಲಿ ಪಕ್ಕಾ ಮನೆಯನ್ನು ಹೊಂದಿರದ ಹಾಗೂ ಕಚ್ಚಾ ಮನೆಯನ್ನು ಹೊಂದಿರುವ ಕುಟುಂಬವನ್ನು ವಸತಿ ರಹಿತ ಕುಟುಂಬವೆಂದು ಪರಿಗಣಿಸಲಾಗುವುದು.
7. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದಂತೆ ಹಕ್ಕುಪತ್ರ / ಕ್ರಯ ಪತ್ರ / ದಾನ ಪತ್ರ / ಉಡುಗೊರೆ ಪತ್ರ / ಖಾತಾ ಪತ್ರಗಳನ್ನು ಹೊಂದಿರಬೇಕು.
8. ಈ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಯಾಗಿ ಮನೆ ನಿರ್ಮಿಸದೇ ದಿನಾಂಕ 31-12-2023ರ ನಂತರ ಕೇಂದ್ರ ಸರ್ಕಾರದಿಂದ ಮನೆ ರದ್ದಾದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್ (ಮನೆಯ ಯಜಮಾನ/ನಿ ಹಾಗೂ ತಂದೆ / ತಾಯಿ ಮತ್ತು ಪಡಿತರ ಚೀಟಿಯಲ್ಲಿ ಇರುವಂತಹ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ಗಳು)
ವಸತಿ ರಹಿತರಾದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು (ಹಕ್ಕುಪತ್ರ / ಕ್ರಯ ಪತ್ರ / ದಾನ ಪತ್ರ / ಉಡುಗೊರೆ ಪತ್ರ / ಖಾತಾ ಪತ್ರ)
ಆದಾಯ ಮತ್ತು ಜಾತಿ ಪ್ರಮಾಣ ಪತ್ರ.
ಪಡಿತರ ಚೀಟಿ
ಬ್ಯಾಂಕ್ ಖಾತೆಯ ವಿವರ.
ನಿಗದಿತ ನಮೂನೆ (Annexure-2A/2B/2C) ಯಲ್ಲಿ “Self Undertaking” ಸಲ್ಲಿಸುವುದು.
ಮೊಬೈಲ್ ಸಂಖ್ಯೆ
ಪಾನ್ ಕಾರ್ಡ್ (ಲಭ್ಯವಿದ್ದಲ್ಲಿ ಮಾತ್ರ)
ಹಂತ-ಹಂತದ ಅರ್ಜಿ ಪ್ರಕ್ರಿಯೆ:
ಅಧಿಕೃತ ವೆಬ್ಸೈಟ್: https://pmay-urban.gov.in ಗೆ ಭೇಟಿ ನೀಡಿ.
“Apply Online” ಆಯ್ಕೆಯನ್ನು ಆರಿಸಿ.
Aadhaar-linked Mobile OTP ನೊಂದಿಗೆ ಲಾಗಿನ್ ಮಾಡಿ.
ಫಾರ್ಮ್ ನಿಭರ್ತಿಸಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.
ಸಬ್ಮಿಟ್ ಬಟನ್ ಒತ್ತಿ ಮತ್ತು ಅರ್ಜಿ ಸಂಖ್ಯೆ ಸೇವ್ ಮಾಡಿ.
ಕೊನೆಯ ದಿನಾಂಕ:
15 ಜುಲೈ 2025 ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ:
ಸ್ಥಳೀಯ ನಗರಸಭೆ/ಪುರಸಭೆ ವಸತಿ ಶಾಖೆಯನ್ನು ಸಂಪರ್ಕಿಸಿ.
ಟೋಲ್-ಫ್ರೀ ನಂಬರ್: 1800-11-6163 (PMAY ಹೆಲ್ಪ್ಲೈನ್).
ಇಮೇಲ್: pmayhelpdesk@gov.in
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15-07-2025 ಆಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಸಂಸ್ಥೆಗಳಾದಂತ ನಗರಸಭೆ, ಪುರಸಭೆಗಳ ವಸತಿ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.
