ಷೇರು ಮಾರುಕಟ್ಟೆ ಕುಸಿದಾಗ ಪಾಲಿಸಬೇಕಾದ 7 ಸ್ಮಾರ್ಟ್ ತಂತ್ರಗಳು ಇಲ್ಲಿವೆ

ಷೇರು ಮಾರುಕಟ್ಟೆ ಕುಸಿದಾಗ ಪಾಲಿಸಬೇಕಾದ 7 ಸ್ಮಾರ್ಟ್ ತಂತ್ರಗಳು ಇಲ್ಲಿವೆ

ಷೇರು ಮಾರುಕಟ್ಟೆ ಕುಸಿತದ ಸಮಯದಲ್ಲಿ ಆತಂಕ ನಿರ್ವಹಣೆ ಮತ್ತು ಸ್ಮಾರ್ಟ್ ಹೂಡಿಕೆ ತಂತ್ರಗಳನ್ನು ಈ ಲೇಖನ ಒಳಗೊಂಡಿದೆ. ರಿಸ್ಕ್ ಅಂಶಗಳನ್ನು ಅರ್ಥಮಾಡಿಕೊಳ್ಳುವುದು, ವೈವಿಧ್ಯಮಯ ಹೂಡಿಕೆ, ಮತ್ತು ದೀರ್ಘಾವಧಿಯ ಹೂಡಿಕೆಯ ಮಹತ್ವದ ಬಗ್ಗೆ ಒಳನೋಟಗಳನ್ನು ನೀಡುತ್ತದೆ.

ಷೇರು ಮಾರುಕಟ್ಟೆ ಕುಸಿದಾಗ ಆತಂಕ ಅನುಭವಿಸುವುದು ಸಹಜ. ಆದರೆ ಒಂಚೂರು ಅಧ್ಯಯನ, ಇನ್ನೊಂಚೂರು ಜಾಣ್ಮೆ, ಸ್ಮಾರ್ಟ್‌ನೆಸ್‌ ಇದ್ದರೆ ಈ ಪರಿಸ್ಥಿತಿಯನ್ನು ಲೀಲಾಜಾಲವಾಗಿ ನಿಭಾಯಿಸಬಹುದು. ಷೇರು ಮಾರುಕಟ್ಟೆ ಕುಸಿದಾಗ ಏನೇನು ಮಾಡಬಹುದು ಎಂಬ ಏಳು ವಿಚಾರಗಳು ಇಲ್ಲಿವೆ.

1. ಉದ್ವಿಗ್ನತೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ

ಮಾರ್ಕೆಟ್‌ ಬೀಳುತ್ತಿದೆ ಅನ್ನುವಾಗ ಸಿಕ್ಕಿದ ಬೆಲೆಗೆ ಷೇರುಗಳನ್ನು ಮಾರಾಟ ಮಾಡಿ ಹ್ಯಾಪ್‌ ಮೋರೆ ಹಾಕಿ ಕೂರುವುದು ಜಾಣತನ ಅಲ್ಲ. ಬೆಲೆ ಬಿದ್ದಾಗ ಷೇರು ಮಾರಾಟ ಮಾಡುವುದರಿಂದ ನಷ್ಟವಾಗುತ್ತದೆ. ಈಗ ಬಿದ್ದ ಷೇರು ಬೆಲೆ ನಾಳೆ ಮೇಲೇಳಲೇ ಬೇಕು ಅನ್ನುವ ವಿಶ್ವಾಸ ಇರಲಿ.

2. ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ

ಷೇರು ಬೆಲೆ ಇಳಿಕೆಯಾದಾಗ ಯಾವ ಲೆವೆಲ್‌ವರೆಗೆ ತಡೆದುಕೊಳ್ಳುವ ಚೈತನ್ಯವಿದೆ ಅನ್ನೋದನ್ನು ಕಂಡುಕೊಳ್ಳಿ. ರಿಸ್ಕ್‌ ತಡೆದುಕೊಳ್ಳುವ ತಾಕತ್ತು ಕಡಿಮೆ ಇದ್ದಾಗ ರಿಸ್ಕ್‌ ಹೆಚ್ಚಿರುವ ಡೇ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಲ್ಲ.

3. ಹೂಡಿಕೆಯ ಗುಟ್ಟು

ಒಂದೇ ಕಡೆ ದೊಡ್ಡ ಮೊತ್ತದ ಹೂಡಿಕೆ ಮಾಡುವುದಕ್ಕಿಂತ ಹತ್ತು ಕಡೆ ಇನ್‌ವೆಸ್ಟ್‌ಮೆಂಟ್‌ ಮಾಡುವುದರಿಂದ ರಿಸ್ಕ್‌ನಿಂದ ಪಾರಾಗಬಹುದು. ಷೇರಿನಲ್ಲಿ ಹೂಡಿಕೆ ಮಾಡುವ ಜೊತೆ ಜೊತೆಗೇ ಚಿನ್ನದಲ್ಲಿ, ರಿಯಲ್‌ ಎಸ್ಟೇಟ್‌ ಇತ್ಯಾದಿಗಳಲ್ಲಿ ಹಣ ಹಾಕಿದರೆ ಷೇರು ದರ ಕುಸಿದರೂ ಚಿನ್ನದ ದರ ಹೆಚ್ಚಿರುವ ಕಾರಣ ಆರ್ಥಿಕ ಕುಸಿತ ತಪ್ಪಿಸಬಹುದು. ಸಮತೋಲನ ಸಾಧ್ಯವಾಗುತ್ತದೆ.

4. ಯಾವಾಗ ಷೇರು ಖರೀದಿಸಬೇಕು

ಷೇರು ಮಾರುಕಟ್ಟೆಯಲ್ಲಿ ಏಳು ಬೀಳು ಸರ್ವೇ ಸಾಮಾನ್ಯ. ಷೇರಿನಲ್ಲಿ ಹೂಡಿಕೆ ಮಾಡಬೇಕು ಎಂದಾಗ ನೀವು ಹೂಡಿಕೆ ಮಾಡಬೇಕೆಂದಿರುವ ಕಂಪನಿಯ ಇತಿಹಾಸವನ್ನು ತಿಳಿದುಕೊಳ್ಳಿ. ಈ ಕಂಪನಿ ಶೇರು ಬೆಲೆ ಈಗ ಕುಸಿದಿದೆ, ಮುಂದೆ ಮೇಲೇಳುವ ಸಾಧ್ಯತೆ ಇದೆಯೇ ಅನ್ನೋದು ಗೊತ್ತಾಗುತ್ತದೆ. ಅಂಥಾ ಷೇರುಗಳನ್ನು ಬೆಲೆ ಕಡಿಮೆ ಇದ್ದಾಗಲೇ ಖರೀದಿಸಿ.

5. ಗುಣಮಟ್ಟದ ಹೂಡಿಕೆ

ಹೂಡಿಕೆ ಮಾಡುವಾಗ ಆ ಹೊತ್ತಿನ ಕಂಪನಿಯ ಸ್ಥಿತಿಯನ್ನಷ್ಟೇ ನೋಡುವುದಲ್ಲ. ಆ ಕಂಪನಿಯ ಹಿನ್ನೆಲೆ ಏನು, ಕಂಪನಿ ಮೌಲ್ಯ ಎಷ್ಟಿದೆ, ಅದರ ಮೇಲೆ ಎಷ್ಟು ಸಾಲದ ಮೊತ್ತ ಇದೆ, ಅದು ಈ ಹಿಂದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಹೇಗೆ ಮೇಲೆದ್ದು ಬಂದಿದೆ ಅನ್ನೋದನ್ನು ಗಮನಿಸಿ. ಗುಣಮಟ್ಟದ ಕಂಪನಿ ಷೇರುಗಳನ್ನು ಖರೀದಿಸಿ.

6. ಯಾವ ಕಂಪನಿಗಳು ಬೆಸ್ಟು

ಷೇರು ಮಾರುಕಟ್ಟೆಯಲ್ಲಿ ಅಸ್ಥಿರತೆ ಸರ್ವೇ ಸಾಮಾನ್ಯ. ಆದರೆ ಕಡಿಮೆ ಅಸ್ಥಿರತೆ ಇರುವ ಕಂಪನಿಯನ್ನು ಷೇರುಗಳನ್ನು ಕೊಂಡುಕೊಂಡರೆ ಉತ್ತಮ. ಏರಿಳಿತ ಇದ್ದರೂ ಒಂದು ಬ್ಯಾಲೆನ್ಸ್‌ ಇರುತ್ತದೆ. ನೀಡುವ ಹಣಕ್ಕೆ ಸುರಕ್ಷತೆ ಇರುತ್ತದೆ.

7. ಸುದೀರ್ಘ ಹೂಡಿಕೆ ಸುರಕ್ಷಿತ

ದೀರ್ಘ ಅವಧಿಗೆ ಹೂಡಿಕೆ ಮಾಡಿದರೆ ಸುರಕ್ಷಿತತೆ ಹೆಚ್ಚಿರುತ್ತದೆ. ಹಲವು ವರ್ಷಗಳ ಕೆಳಗೆ 1 ಡಾಲರ್‌ ಹೂಡಿಕೆ ಮಾಡಿದವನೊಬ್ಬ 2025ರಲ್ಲಿ 31,805 ಡಾಲರ್‌ಗಳಷ್ಟು ಆದಾಯ ಪಡೆದಿದ್ದಾನೆ. ಹೂಡಿಕೆಯ ಅವಧಿ ಹೆಚ್ಚಾದಷ್ಟು ರಿಸ್ಕ್‌ ಕಡಿಮೆ ಅನ್ನುವುದು ತಜ್ಞರ ಮಾತು. ಆದರೆ ಬದುಕಿನಲ್ಲಿ ಏರಿಳಿತಗಳ ನಡುವೆ ದೀರ್ಘ ಹೂಡಿಕೆಯ ಹಣವನ್ನು, ಮಧ್ಯದಲ್ಲೇ ವಾಪಾಸ್‌ ಪಡೆದರೆ ಎಷ್ಟೋ ಸಲ ನಿಮಗೆ ಹಾಕಿದಷ್ಟು ಹಣವೂ ವಾಪಾಸ್‌ ಬರೆದೇ ಇರುವ ಅಪಾಯವಿದೆ. ಹಾಗಾಗಿ ಎಚ್ಚರಿಕೆಯಿಂದ ಮುಂದಡಿ ಇಡಿ.


Post a Comment

Previous Post Next Post

Top Post Ad

CLOSE ADS
CLOSE ADS
×