ವೃದ್ಧರು, ಬ್ಯುಸಿನೆಸ್ ಮ್ಯಾನ್ಗಳ ಕಿಸೆಗೆ ಕನ್ನ ಹಾಕುತ್ತಿದ್ದ ಸೈಬರ್ ಕಳ್ಳರು ಇದೀಗ ರೈತರನ್ನು ಗುರಿಯಾಗಿಸಿಕೊಂಡು ಹಣ ದೋಚಲು ಪ್ರಾರಂಭಿಸಿದ್ದಾರೆ. ವಾಟ್ಸ್ಆ್ಯಪ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಸರ್ಕಾರಿ ಪ್ರಯೋಜನಗಳ ಕುರಿತು ನಕಲಿ ಭರವಸೆಗಳನ್ನು ನೀಡಿ ರೈತರ ಖಾತೆಗೆ ಕನ್ನ ಹಾಕಲು ಶುರು ಮಾಡಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಕಿಸಾನ್ ಅಪ್ಲಿಕೇಶನ್ ಹಾಗೂ ಬ್ಯಾಂಕಿಂಗ್ ಸೇವೆಗಳ ಕುರಿತು ಅಪ್ಡೇಟ್ ಎಂದು ನಕಲಿ ಲಿಂಕ್ಗಳನ್ನು ಕಳುಹಿಸಿ, ಅದರ ಮೂಲಕ ರೈತರ ಖಾತೆಯಲ್ಲಿದ್ದ ಹಣವನ್ನು ಸೈಬರ್ ಕಳ್ಳರು ಎಗರಿಸುತ್ತಿದ್ದಾರೆ.
ನಕಲಿ ಲಿಂಕ್ ಮೂಲಕ ವಂಚನೆ:ನೇರವಾಗಿ ವಾಟ್ಸ್ಆ್ಯಪ್ನಲ್ಲಿ ಪಿಎಂ ಕಿಸಾನ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದರಿಂದ ಕೇಂದ್ರ ಸರ್ಕಾರ 6000 ರೂ. ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡುತ್ತದೆ ಎಂದು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಈ ಸಂದೇಶಗಳನ್ನು ಅಧಿಕೃತ ಯೋಜನೆಗಳು ಹಾಗೂ ಬ್ಯಾಂಕ್ಗಳ ಲೋಗೋಗಳನ್ನು, ರೈತರು ಸುಲಭವಾಗಿ ನಂಬುವಂತೆ ರಚಿಸಲಾಗಿರುತ್ತದೆ.
ಗಟ್ಟು ಮಂಡಲದಲ್ಲಿ ಇಂತಹ ಲಿಂಕ್ ಒಂದನ್ನು ಕ್ಲಿಕ್ ಮಾಡಿದ ರೈತ ಕೆಲವೇ ನಿಮಿಷಗಳಲ್ಲಿ ತಮ್ಮ ಖಾತೆಯಲ್ಲಿದ್ದ 64,500 ರೂ. ಕಳೆದುಕೊಂಡಿರುವ ಪ್ರಕರಣವೊಂದು ವರದಿಯಾಗಿದೆ. ತಾವು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ, ಆ ರೈತ ತಕ್ಷಣವೇ ಗುಟ್ಟು ಠಾಣೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಸಂಕಷ್ಟದಲ್ಲಿ ರೈತರು:
ಸರ್ಕಾರ ಇತ್ತೀಚೆಗೆ ವಿವಿಧ ಯೋಜನೆಗಳ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವು ನೀಡುತ್ತಿರುವುದನ್ನು ಸೈಬರ್ ವಂಚಕರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಡಿಜಿಟಲ್ ಜಗತ್ತಿನ ಬಗ್ಗೆ ಹೆಚ್ಚು ತಿಳಿದಿರದ ರೈತರಿಗೆ ನಿಜವಾದ ಮತ್ತು ನಕಲಿ ಅಪ್ಲಿಕೇಶನ್‌ಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಸಾಧ್ಯವಾಗುತ್ತಿಲ್ಲ. ಎಸ್‌ಬಿಐ, ಪಿಎಂ ಕಿಸಾನ್ ಮತ್ತು ಇತರ ಬ್ಯಾಂಕ್‌ಗಳಿಂದ ಬಂದಿವೆ ಎಂದು ಹೇಳಿಕೊಳ್ಳುವ ನಕಲಿ ಅಪ್ಲಿಕೇಶನ್‌ಗಳು ಮೆಹಬೂಬ್‌ನಗರ ಜಿಲ್ಲೆಯಲ್ಲಿ, ವಿಶೇಷವಾಗಿ ರೈತ ಸಮುದಾಯಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇತ್ತೀಚಿನ ವಂಚನೆ ಪ್ರಕರಣಗಳು:
ಧಾರೂರು ತಾಲೂಕಿನಲ್ಲಿ ಯುವಕನೊಬ್ಬನಿಗೆ ತನ್ನ ಎಸ್ಬಿಐ ಖಾತೆಯನ್ನು ಅಪ್ಡೇಟ್ ಮಾಡುವಂತೆ ವಾಟ್ಸ್ ಆ್ಯಪ್ನಲ್ಲಿ ಸಂದೇಶ ಬಂದಿದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ, ಅದರಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿದ ಯುವಕ 20 ಸಾವಿರ ರೂ. ಕಳೆದುಕೊಂಡಿದ್ದಾನೆ.
ಗಡ್ವಾಲ್ ಮಂಡಲದ ವ್ಯಕ್ತಿಯೊಬ್ಬರು ಮದುವೆ ಹಾಲ್ಗಳನ್ನು ಹುಡುಕಲು ಸಹಾಯ ಮಾಡುವ ಭರವಸೆ ನೀಡುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದರು. ಅದರಲ್ಲಿ ಅವರ ವೈಯಕ್ತಿಕ ವಿವರಗಳನ್ನು ನಮೂದಿಸಿದ್ದು, ತಕ್ಷಣವೇ ಖಾತೆಯಲ್ಲಿದ್ದ ಹಣವೆಲ್ಲ ಮಾಯವಾಗಿದೆ. ನಂತರ ಅವರಿಗೆ ಅದು ಸ್ಕ್ಯಾಮ್ ಆ್ಯಪ್ ಎಂಬುದು ಗೊತ್ತಾಗಿದೆ.
ವಾಟ್ಸಾಪ್ ಗುಂಪುಗಳ ದುರುಪಯೋಗ:
ಸೈಬರ್ ವಂಚಕರು, ಗೊತ್ತಿಲ್ಲದೆ ಅಪರಿಚಿತ ಸದಸ್ಯರು ಗುಂಪಿಗೆ ಸೇರಲು ಅವಕಾಶ ನೀಡುವ ವಾಟ್ಸ್ ಆ್ಯಪ್ ಗ್ರೂಪ್ ಅಡ್ಮಿನ್ಗಳನ್ನು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರೂಪ್ಗಳಿಗೆ ಜಾಯಿನ್ ಆಗುವ ಸೈಬರ್ ವಂಚಕರು, ಸರ್ಕಾರಿ ಯೋಜನೆಗಳ ಅಧಿಕಾರಿಗಳು ಅಥವಾ ಪ್ರತಿನಿಧಿಗಳಂತೆ ನಟಿಸಿ ನಕಲಿ ಅಪ್ಲಿಕೇಶನ್ಗಳ ಲಿಂಕ್ಗಳನ್ನು ಶೇರ್ ಮಾಡುತ್ತಾರೆ.
ಸೈಬರ್ ವಂಚನೆ ಕುರಿತು ಜಾಗೃತರಾಗುವಂತೆ ಪೊಲೀಸ್ ಮನವಿ:ಜೋಗುಲಾಂಬ ಜಿಲ್ಲಾ ಎಸ್ಪಿ ಶ್ರೀನಿವಾಸ್ ರಾವ್, "ನಮ್ಮ ಪೊಲೀಸ್ ತಂಡಗಳು ನಿರಂತರವಾಗಿ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಜನರು ಜಾಗರೂಕರಾಗಿರಬೇಕು. ಮತ್ತು ಅಂತಹ ಘಟನೆಗಳನ್ನು ತಕ್ಷಣ ವರದಿ ಮಾಡಬೇಕು. ರೈತರು ಮತ್ತು ವಾಟ್ಸಾಪ್ ಗ್ರೂಪ್ ಅಡ್ಮಿನ್ಗಳು ಮೂಲಗಳ ಪರಿಶೀಲಿಸಬೇಕು. ಜೊತೆಗೆ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಜೊತೆಗೆ ಕ್ಲಿಕ್ ಮಾಡಿದರೂ ಅವುಗಳಿಗೆ ನಿಮ್ಮ ಬ್ಯಾಂಕ್ ವಿವರಗಳು ಹಾಕುವುದು ಅಥವಾ ಒಟಿಪಿ ಹಂಚಿಕೊಳ್ಳುವುದನ್ನು ಎಂದಿಗೂ ಮಾಡಬೇಡಿ" ಎಂದು ಸಲಹೆ ನೀಡಿದರು.
ವಂಚೆನಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ಪರಿಶೀಲಿಸಿದ ಲಿಂಕ್ಗಳು ಅಥವಾ ಫಾರ್ವರ್ಡ್ಗಳಿಂದ ಬಂದ ಅಪ್ಲಿಕೇಶನ್ಗಳನ್ನು ಯಾವತ್ತೂ ಇನ್ಸ್ಟಾಲ್ ಮಾಡಬೇಡಿ.
ಸರ್ಕಾರಿ ಯೋಜನೆಗಳು ಅಥವಾ ಬ್ಯಾಂಕಿಂಗ್ ಅಪ್ಡೇಟ್ಗಳನ್ನು ಅಧಿಕೃತ ವೆಬ್ಸೈಟ್ ಗಳ ಮೂಲಕವೇ ಮಾಡಿ.
ಅಪರಿಚಿತ ಸದಸ್ಯರನ್ನು ಗ್ರೂಪ್ಗಳಿಗೆ ಸೇರಿಸುವ ಮೊದಲು ಅಡ್ಮಿನ್ಗಳು ಜಾಗರೂಕರಾಗಿರಬೇಕು.
ವಂಚನೆ ನಡೆದಲ್ಲಿ, ತಕ್ಷಣ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಅಪರಾಧ ಸೆಲ್ಗೆ ವರದಿ ಮಾಡಿ.