ಉಚಿತ ಮೊಬೈಲ್ ರಿಪೇರಿ ತರಬೇತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (ತಾ) ಹಸಿಗಾಳ (ಅಂ) ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗೆ 31 ದಿನಗಳ ಕಾಲಾವಧಿಯ ಉಚಿತ ಮೊಬೈಲ್ ರಿಪೇರಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ      

                                                                

ಆಸಕ್ತಕರು 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನವರು 15-07-2025 ಮಂಗಳವಾರ ಸಂಸ್ಥೆಯಲ್ಲಿ ನಡೆಯುವ ಸಂದರ್ಶನದಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್, 4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಭಾಗವಹಿಸಬಹುದು. 

ಶಿಬಿರಾರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

ಗ್ರಾಮೀಣ ಭಾಗದ ಬಿ.ಪಿ.ಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಕೇವಲ 35 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊ. 9591514154, 8970476050, 8970446644.ಸಂಪರ್ಕಿಸಬಹುದಾಗಿದೆ.  

ಆಸಕ್ತರು ಗೂಗಲ್ ಫಾರ್ಮ್ ಮೂಲಕ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಅದರ ಲಿಂಕ್

👇👇👇 https://docs.google.com/forms/d/e/1FAIpQLScttLp4qkdzhidYKn71_YjlyizVQP3nUUx-388akDMpZFzrOA/viewform?usp=sharing&ouid=116915943280505042190

ನಮ್ಮ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಬಗ್ಗೆ ಕಿರು ಪರಿಚಯ

👇👇👇

https://youtu.be/Q435wtXRttk?si=Y04xWBQcDuj2qHYT

ಸಂಸ್ಥೆಯ ಲೊಕೇಶನ್ ಲಿಂಕ್

👇👇👇

https://maps.app.goo.gl/BpH44CwHmZaXSd9j6

 ವಿಶೇಷ ಸೂಚನೆ:- 

ಹೊಸಕೋಟೆಯಿಂದ ತರಬೇತಿ ಸಂಸ್ಥೆಗೆ, ತರಬೇತಿಗೆ ಬರಲು BMTC ಬಸ್ ವ್ಯವಸ್ಥೆ ಇದೆ.

ಆದಷ್ಟು ಈ ಮಾಹಿತಿಯನ್ನು ಶೇರ್ ಮಾಡಿ, ಅಗತ್ಯ ಇರುವವರಿಗೆ ಅನುಕೂಲವಾಗಬಹುದು.

Previous Post Next Post