Scholarship-MBA ವ್ಯಾಸಂಗಕ್ಕೆ ₹2.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ

IDFC FIRST ಬ್ಯಾಂಕ್ ನಿಂದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಹಣದ ಸಹಾಯವನ್ನು(IDFC FIRST Bank Scholarship) ಒದಗಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಐಡಿಎಫ್‌ಸಿ ಬ್ಯಾಂಕ್(IDFC FIRST Bank) ಮತ್ತು ಕ್ಯಾಪಿಟಲ್ ಫಸ್ಟ್ ವಿಲೀನದ ನಂತರ ಡಿಸೆಂಬರ್ 2018 ರಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಈ ಬ್ಯಾಂಕ್ ವ್ಯಕ್ತಿಗಳು, ಸಣ್ಣ ವ್ಯವಹಾರಗಳು ಮತ್ತು ಕಾರ್ಪೊರೇಟ್‌ಗಳಿಗೆ ಹಲವಾರು ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ. ಇದು ರಾಷ್ಟ್ರವ್ಯಾಪಿ ಅಸ್ತಿತ್ವವನ್ನು ಹೊಂದಿದೆ ಮತ್ತು ಚಿಲ್ಲರೆ ವ್ಯಾಪಾರ, ಸಗಟು ಮತ್ತು ಇತರ ಬ್ಯಾಂಕಿಂಗ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿವೇತನ ಕಾರ್ಯಕ್ರಮವು 2025-27ರ ಅದರ ಸಿಎಸ್‌ಆರ್ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದೆ.

IDFC FIRST ಬ್ಯಾಂಕ್ ನಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ(IDFC FIRST Bank Scholarship Application) ಸಲ್ಲಿಸಬಹುದು? ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶವಿದ್ದು ಇದರ ಕುರಿತು ವಿವರಣೆ ಮತ್ತು ಅಗತ್ಯ ದಾಖಲಾತಿಗಳ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

IDFC FIRST Bank Scholarship Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಪ್ರಸ್ತುತ IDFC FIRST ಬ್ಯಾಂಕ್ ನಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 20 ಜುಲೈ 2025 ಕೊನೆಯ ದಿನಾಂಕವಾಗಿರುತ್ತದೆ.

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಯು ಭಾರತೀಯ ನಿವಾಸಿಯಾಗಿರಬೇಕು.

ವಿದ್ಯಾರ್ಥಿಗಳು 2 ವರ್ಷಗಳ ಪೂರ್ಣ ಸಮಯದ MBA ಕಾರ್ಯಕ್ರಮದ ಮೊದಲ ವರ್ಷ ಅಥವಾ 2027 ರ ತರಗತಿಗೆ ಸಮಾನವಾದ ಕೋರ್ಸ್‌ಗೆ ದಾಖಲಾಗಿರಬೇಕು.

ಅರ್ಜಿದಾರರು ಲಗತ್ತಿಸಲಾದ ದಾಖಲೆಯಲ್ಲಿ ಪಟ್ಟಿ ಮಾಡಲಾದ MBA ಕಾಲೇಜುಗಳಲ್ಲಿ ಒಂದಕ್ಕೆ ದಾಖಲಾಗಿರಬೇಕು.

ಎಲ್ಲಾ ಮೂಲಗಳಿಂದ ಕುಟುಂಬದ ಒಟ್ಟು ವಾರ್ಷಿಕ ಆದಾಯವು INR 6 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.

IDFC FIRST Bank Scholarship Amount-ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗೆ ಈ ಕಾರ್ಯಕ್ರಮದಡಿ ಒಂದು ವಾರ್ಷಿಕ ವರ್ಷಕ್ಕೆ ಶೈಕ್ಷಣಿಕ ವೆಚ್ಚವನ್ನು ಪಾವತಿಸಲು ವರ್ಷಕ್ಕೆ INR 1.0 ಲಕ್ಷ ದಂತೆ ಎರಡು ವರ್ಷದ ಎಂಬಿಎ ವ್ಯಾಸಂಗಕ್ಕೆ ಒಟ್ಟು INR 2.0 ಲಕ್ಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

How To Apply For IDFC FIRST Bank Scholarship-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

IDFC FIRST ಬ್ಯಾಂಕ್ ನ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ www.buddy4study.com ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಮನೆಯಲ್ಲೇ ಕುಳಿತು ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲ ಹಂತದಲ್ಲಿ ಈ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ www.buddy4study.com ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪುಟದಲ್ಲಿ ಬಲಬದಿಯಲ್ಲಿ ಗೋಚರಿಸುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ, ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿಗಳು “Create an Account” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ರಚಿಸಿಕೊಳ್ಳಬೇಕು ನಂತರ “Login” ಬಟನ್ ಕ್ಲಿಕ್ ಮಾಡಿ ಲಾಗಿನ್ ಮಾಡಿಕೊಳ್ಳಿ.

Step-3: ಮೇಲಿನ ಹಂತಗಳನ್ನು ಅನುಸರಿಸಿ ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ಮಾಹಿತಿ ಮತ್ತು ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Required Documents For IDFC FIRST Bank Scholarship-ಅರ್ಜಿ ಸಲ್ಲಿಸಲು ದಾಖಲೆಗಳು:

ಅಭ್ಯರ್ಥಿಯ ಅಧಾರ್ ಕಾರ್ಡ ಪ್ರತಿ/Aadhar Card

ಅಭ್ಯರ್ಥಿಯ ಪೋಟೋ/Photo

ಅಭ್ಯರ್ಥಿಯ ಬ್ಯಾಂಕ್ ಪಾಸ್ ಬುಕ್ /Bank passbook

ಅಭ್ಯರ್ಥಿಯ ಕಾಲೇಜು ಶುಲ್ಕ ಪಾವತಿ ವಿವರ/Fee structure

ಪ್ರಸ್ತುತ ಕಾಲೇಜು ಪ್ರವೇಶದ ಕುರಿತು ದೃಡೀಕರಣ ಪತ್ರ/College seat allocation document

12ನೇ ತರಗತಿ ಅಂಕಪಟ್ಟಿ/Marksheet

ಕುಟುಂಬದ ಆದಾಯ ತೆರಿಗೆ ಪ್ರಮಾಣ ಪತ್ರ/Income proof of parents

ಮೊಬೈಲ್ ನಂಬರ್/Mobile Number

ಇ-ಮೇಲ್ ವಿಳಾಸ/mail id

IDFC FIRST Bank Scholarship Guidelines-ವಿದ್ಯಾರ್ಥಿವೇತನ ವಿತರಣೆ ಕುರಿತು ಬ್ಯಾಂಕಿನಿಂದ ಹೊರಡಿಸಿರುವ ನಿಯಮಗಳು ಮತ್ತು ಷರತ್ತುಗಳ ಪಟ್ಟಿ ಹೀಗಿದೆ:

ಆಯ್ದ ಸಂಸ್ಥೆಗಳು/ಕಾಲೇಜುಗಳಲ್ಲಿ 2 ವರ್ಷಗಳ ಪೂರ್ಣಾವಧಿಯ MBA ಅಥವಾ ತತ್ಸಮಾನ ಕಾರ್ಯಕ್ರಮದ 1 ನೇ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ.

1 ವರ್ಷದ ಕಾರ್ಯನಿರ್ವಾಹಕ ಕಾರ್ಯಕ್ರಮ, ಸಂಯೋಜಿತ MBA ಕಾರ್ಯಕ್ರಮ ಅಥವಾ 2 ವರ್ಷಗಳ ಪೂರ್ಣ ಸಮಯದ MBA/PGDM ಕಾರ್ಯಕ್ರಮವನ್ನು ಹೊರತುಪಡಿಸಿ ಯಾವುದೇ MBA ಕಾರ್ಯಕ್ರಮವನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ.

ದಾಖಲೆಗಳನ್ನು ಪರಿಶೀಲಿಸಿದ ನಂತರ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅರ್ಜಿದಾರರನ್ನು ನೇರವಾಗಿ ಪರೀಕ್ಷಿಸಿದ ನಂತರವೇ ವಿದ್ಯಾರ್ಥಿವೇತನದ ಅಂತಿಮ ಅನುದಾನವನ್ನು ನೀಡಲಾಗುತ್ತದೆ. ಈ ಹಂತಗಳನ್ನು ಅನುಸರಿಸಲು ಅಥವಾ ನಿಗದಿತ ಸಮಯದೊಳಗೆ ಅವಶ್ಯಕತೆಗಳನ್ನು ಪೂರೈಸಲು ವಿಫಲವಾದರೆ ಉಮೇದುವಾರಿಕೆಯನ್ನು ತಿರಸ್ಕರಿಸಲಾಗುತ್ತದೆ.

ಅರ್ಜಿದಾರರು ಫಾರ್ಮ್‌ನಲ್ಲಿ ಉಲ್ಲೇಖಿಸಿರುವಂತೆ ಬ್ಯಾಂಕ್ ಪ್ರತಿನಿಧಿಗಳಿಗೆ ಆನ್-ಗ್ರೌಂಡ್ ಪರಿಶೀಲನೆಗಾಗಿ ಅಗತ್ಯ ವಿವರಗಳನ್ನು ಒದಗಿಸಬೇಕಾಗುತ್ತದೆ.

ವಿದ್ಯಾರ್ಥಿವೇತನದ ಮೊತ್ತವು ಬೋಧನಾ ಶುಲ್ಕವನ್ನು ಭರಿಸಲು ಉದ್ದೇಶಿಸಲಾಗಿದ್ದು, ಪ್ರವೇಶ ಪಡೆದ ಸಂಸ್ಥೆ/ಕಾಲೇಜಿನ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ವಿದ್ಯಾರ್ಥಿ ಶುಲ್ಕ ರಶೀದಿಯನ್ನು ಸಲ್ಲಿಸಿದ ನಂತರ ಅಂತಿಮ ವಿತರಣೆ ನಡೆಯುತ್ತದೆ.

IDFC FIRST ಬ್ಯಾಂಕ್ ತನ್ನ ಸಂಪೂರ್ಣ ಮತ್ತು ಸ್ವಂತ ವಿವೇಚನೆಯಿಂದ ಪ್ರಶಸ್ತಿ ಪುರಸ್ಕೃತರ ಅಂತಿಮ ಆಯ್ಕೆಯನ್ನು ಮಾಡುತ್ತದೆ. ಅರ್ಜಿಯನ್ನು ಸಲ್ಲಿಸುವುದರಿಂದ ವಿದ್ಯಾರ್ಥಿವೇತನ ಅನುದಾನವನ್ನು ಖಾತರಿಪಡಿಸುವುದಿಲ್ಲ.

ಪ್ರಶಸ್ತಿ ಪುರಸ್ಕೃತರು IDFC FIRST ಬ್ಯಾಂಕ್ MBA ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಎಲ್ಲಾ IDFC FIRST ಬ್ಯಾಂಕ್ ಕಾರ್ಯಕ್ರಮಗಳಿಗೆ ಹಾಜರಾಗಬೇಕು.

ಎರಡನೇ ವರ್ಷ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿ ಉಳಿಯಲು ವಿದ್ಯಾರ್ಥಿಗಳು ತಮ್ಮ ಮೊದಲ ವರ್ಷದಲ್ಲಿ ಉತ್ತೀರ್ಣರಾಗಿ ಎರಡನೇ ವರ್ಷಕ್ಕೆ ಬಡ್ತಿ ಪಡೆಯಬೇಕು.

IDFC FIRST ಬ್ಯಾಂಕ್ ಉದ್ಯೋಗಿಗಳ ಮಕ್ಕಳು ವಿದ್ಯಾರ್ಥಿವೇತನಕ್ಕೆ ಅರ್ಹರಲ್ಲ. ಕಂಡುಬಂದಲ್ಲಿ, ವಿದ್ಯಾರ್ಥಿವೇತನ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಲಾಗುತ್ತದೆ.

Scholarship Helpline-ಹೆಚ್ಚಿನ ಮಾಹಿತಿಗಾಗಿ:

ಈ ವಿದ್ಯಾರ್ಥಿವೇತನದ ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ ಈ ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು-mbascholarship@idfcfirstbank.com

Previous Post Next Post