ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಲು ಜುಲೈ 31 ಕೊನೆಯ ದಿನ.ಸಣ್ಣ ರೈತರಿಗೆ ₹2 ಲಕ್ಷ ಸಾಲ, ₹75 ಸಾವಿರ ಸಬ್ಸಿಡಿ.FRUITS ಐಡಿ ಮತ್ತು caste-income ದಾಖಲೆಗಳು ಕಡ್ಡಾಯ
ಕರ್ನಾಟಕ ಸರ್ಕಾರದ (Karnataka Government) ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು (Arya Vaishya Nigama) ಜಾರಿಗೊಳಿಸಿರುವ ಗಂಗಾ ಕಲ್ಯಾಣ ಯೋಜನೆಯ (Ganga Kalyana Yojana) ಉದ್ದೇಶ, ರಾಜ್ಯದ ಆರ್ಥಿಕವಾಗಿ ಹಿಂದುಳಿದ ಸಣ್ಣ ರೈತರಿಗೆ ನೀರಾವರಿ (irrigation) ಸೌಲಭ್ಯ ಒದಗಿಸುವುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
ಈ ಯೋಜನೆಯಡಿ ಫಲಾನುಭವಿಗಳಿಗೆ ₹2 ಲಕ್ಷದವರೆಗೆ ಸಾಲ (Subsidy Loan) ನೀಡಲಾಗುವುದು, ಮತ್ತು ₹75,000ರ ವರೆಗೆ ವಿದ್ಯುತ್ ಸಂಪರ್ಕಕ್ಕಾಗಿ ಸಬ್ಸಿಡಿ ನೀಡಲಾಗುತ್ತದೆ. ಇದಲ್ಲದೆ, ಕೊಳವೆ ಬಾವಿ ತೆಗೆಯಲು ಅಗತ್ಯವಿರುವ ಪಂಪ್ಸೆಟ್ ಹಾಗೂ ಇತರ ಉಪಕರಣಗಳ ನೆರವು ಸಿಗುತ್ತದೆ.
ರೈತರಿಗೆ ಉಚಿತ ಬೋರ್ ವೆಲ್, ಗಂಗಾ ಕಲ್ಯಾಣ ಯೋಜನೆಗೆ ಮತ್ತೆ ಅರ್ಜಿಗೆ ಅವಕಾಶ
ಅರ್ಜಿದಾರರು FRUITS (Farmers Registration and Unified Beneficiary Information System) ಐಡಿಯನ್ನು ಹೊಂದಿರಬೇಕು. ಈ ಐಡಿ ಇಲ್ಲದಿದ್ದರೆ ಅರ್ಜಿ ಸಲ್ಲಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನ್ನಡಿಗರಾಗಿದ್ದು, ಕರ್ನಾಟಕದಲ್ಲಿ (Karnataka) ಖಾಯಂ ವಿಳಾಸ ಹೊಂದಿರಬೇಕು.
ಒಂದು ಕುಟುಂಬದಿಂದ ಗರಿಷ್ಠ ಇಬ್ಬರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಯು 21ರಿಂದ 55 ವರ್ಷ ವಯೋಮಾನದೊಳಗಿರಬೇಕು. ನೀರಾವರಿ ಸೌಲಭ್ಯವಿಲ್ಲದ 2 ರಿಂದ 15 ಎಕರೆ ಜಮೀನು ಹೊಂದಿರುವ ಸಣ್ಣ ರೈತರಾಗಿರಬೇಕು.
ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್‌ಸೈಟ್ (official website) https://aryavysya.karnataka.gov.in/Vasavijalashakthi ಅಥವಾ ಗ್ರಾಮ ಒನ್/ಬೆಂಗಳೂರು ಒನ್ ಮೂಲಕ ಆನ್‌ಲೈನ್ (online) ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆ ಮೂರು ಹಂತಗಳಲ್ಲಿ ಮುಗಿಯುತ್ತದೆ: “Apply Now” ಕ್ಲಿಕ್ ಮಾಡುವುದು, ಆಧಾರ್ ಸಂಖ್ಯೆಯೊಂದಿಗೆ OTP ದೃಢೀಕರಣ, ನಂತರ ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು.
ಅರ್ಜಿ ಪರಿಶೀಲನೆಯ ನಂತರ ಜಿಲ್ಲಾ ಆಯ್ಕೆ ಸಮಿತಿಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಯೋಜನೆಯ ವಿಶೇಷತೆ ಏನೆಂದರೆ, ಸಾಲವನ್ನು (Loan) ಯಾವುದೇ ಅಡಮಾನವಿಲ್ಲದೆ ಇಲ್ಲದೇ ನೀಡಲಾಗುತ್ತದೆ. ಕೊಳವೆ ಬಾವಿ ತೆಗೆಯಲಾಗದ ಸ್ಥಿತಿಯಲ್ಲೂ ಸಹ 3 ವರ್ಷದಲ್ಲಿ ಅಸಲು ಹಣವನ್ನು ಕಂತುಗಳಲ್ಲಿ ಮರುಪಾವತಿಸಬಹುದಾಗಿದೆ.
Last Date to Apply for Ganga Kalyana Yojana is July 31