AI ಆಧಾರಿತ ಕೃಷಿ ಸೇವಾ ಕೇಂದ್ರ ಸ್ಥಾಪನೆ: ರೈತರಿಗೆ ಹೆಚ್ಚಿನ ಅದಾಯಕ್ಕೆ ಕರ್ನಾಟಕ ಸರ್ಕಾರ ಉತ್ತೇಜನ

AI Agri Service Center: ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ರೈತರ ಆದಾಯ ಹೆಚ್ಚಳಕ್ಕೆ, ಲಾಭದಾಯಕ ಕೃಷಿಗೆ ಉತ್ತೇಜನ ನೀಡಲು ಮುಂದಾಗಿದೆ. ಈ ಸಂಬಂಧ ಕೃತಕ ಬುದ್ಧಿಮತ್ತೆ (Artificial Intelligence-AI) ತಂತ್ರಜ್ಞಾವನ್ನು ಕೃಷಿಯ ಭಾಗವಾಗಿಸಲು ಮುಂದಾಗಿದೆ. ಎಐ ಆಧಾರಿತ ಕೃಷಿ ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಇದು ಬೆಳೆಗಳ ಇಳುವರಿ ಹೆಚ್ಚಳಕ್ಕೆ ಪೂರಕವಾಗಿರಲಿದೆ.

ಈ ಸೇವಾ ಕೇಂದ್ರಗಳನ್ನು ರಾಜ್ಯದ ವಿವಿಧ ಜಿಲ್ಲೆಗಳ ಆಯಾ ಭೂಮಿಯ ಫಲವತ್ತ, ಮಣ್ಣಿನ ಗುಣ, ಹವಾಮಾನ, ಭೂಮಿ ವೈವಿಧ್ಯತೆ, ಮಳೆ ದಾಖಲಾತಿ ಪ್ರಮಾಣ, ಹಾಲಿ ಬೆಳೆ ಪದ್ಧತಿ, ಹಾಲಿ ಇಳುವರಿ, ಭೂಮಿ ನಕ್ಷೆ ಸೇರಿದಂತೆ ಇತರ ಅಂಶಗಳ ಆಧಾರದಲ್ಲಿ ಎಐ ತಂತ್ರಜ್ಞಾನ ಒಳಗೊಂಡ ಸೇವಾ ಕೇಂದ್ರಗಳನ್ನು ಸ್ಥಾಪನೆಗೆ ನಿರ್ಧರಿಸಿದೆ. ಇದರಿಂದ ರೈತರಿಗೆ, ರಾಜ್ಯದ ವ್ಯವಸಾಯ ಪದ್ಧತಿಗೆ ಸಾಕಷ್ಟು ಅನುಕೂಲ ದೊರೆಯಲಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

ಎಐ ಕೃಷಿ ಸೇವಾ ಕೇಂದ್ರದ ಪ್ರಯೋಜನಗಳು?

ಒಂದೊಮ್ಮೆ ಈ ಕೃಷಿ ಸೇವಾ ಕೇಂದ್ರಗಳು ನಿರ್ಮಾಣವಾದರೆ, ರೈತರಿಗೆ ಕೃಷಿ ಸಂಬಂಧ ನಿಖರ ಮಾಹಿತಿ ಲಭ್ಯವಾಗಲಿದೆ. ಮಣ್ಣಿನ ಗುಣದ ಆಧಾರದಲ್ಲಿ ಈ ಭಾರಿಯಾವ ಬೆಳೆ ಬೆಳೆಯಬೇಕು. ಇಳುವರಿ ಹೇಗೆ ಬರುತ್ತದೆ. ಬೆಳೆಗಳಿಗೆ ಬೆಲೆ ಎಷ್ಟಿರುತ್ತದೆ. ಯಾವ ಯಾವ ಋತುಮಾನಗಳಲ್ಲಿ ಯಾವೆ ಬೆಳೆಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂಬೆಲ್ಲ ಮಾಹಿತಿ ಸಿಗುತ್ತದೆ.

ಅಷ್ಟೇ ಅಲ್ಲದೇ ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ವೇಳೆ ಋತುಮಾನ ಆಧಾರದಲ್ಲಿ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ಸ್ಥಿತಿಗತಿ ಹೇಗಿರುತ್ತದೆ. ಯಾವ ಬೆಳೆ ಬೆಳೆದರೆ ಉತ್ತಮ, ದಿಢೀರ್ ಬೇಡಿಕೆ ಪಡೆದುಕೊಳ್ಳುವ ಬೆಳೆಗಳು ಸೇರಿದಂತೆ ರೈತರಿಗೆ ಆಯಾ ಕಾಲಕ್ಕೆ ಮುಂಚಿತವಾಗಿ ಮಾಹಿತಿ ನೀಡಲಿದೆ.

ಸರ್ಕಾರದಿಂದ ತಜ್ಞರ ಸಮಿತಿ ರಚನೆ

ತಂತ್ರಜ್ಞಾನ ಬಳಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಲು, ಯಾವೆಲ್ಲ ಪ್ರದೇಶಗಳಲ್ಲಿ ಹೆಚ್ಚು ಲಾಭ ನೀಡುವ ಬೆಳೆ ಯಾವುದು ಎಂದು ಗುರುತಿಸಲು ಹಾಗೂ ಕೃಷಿಕರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರ ರಾಜ್ಯಮಟ್ಟದ ತಜ್ಞರ ಸಮಿತಿ ರಚಿಸಿದೆ. ಅವರು ಆಯಾ ಪ್ರದೇಶದ ಬೆಳೆಗಳನ್ನು ಆಯ್ಕೆ ಮಾಡಲಿದ್ದಾರೆ. ಇನ್ನು ಭತ್ತದ ಬೆಳೆಯಲ್ಲಿ ತಂತ್ರಜ್ಞಾನ ಅಳವಡಿಕೆಗಾಗಿ ಮೈಸೂರು, ರಾಯಚೂರು, ವಿಜಯನಗರ, ಯಾದಗಿರಿ, ಕೊಪ್ಪಳ, ದಾಣಗೆರೆ, ಬಳ್ಳಾರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಬೇರೆ ಬೇರೆ ದೇಶಗಳಲ್ಲಿ 'ಎಐ' ಕೃಷಿಯಲ್ಲಿ ಸ್ಥಾನ ಪಡೆದಿದೆ. ವಿವಿಧ ತಂತ್ರಜ್ಞಾನಗಳ ಸಹಾಯದಿಂದ ಕರ್ನಾಟಕ ಸೇರಿದಂತೆ ಭಾರತದಲ್ಲಿ ಕೃಷಿ ಮಾಡಲಾಗುತ್ತಿದೆ. ಅನೇಕ ತಂತ್ರಜ್ಞಾನಗಳು, ಹೊಸ ಹೊಸ ಉಪಕರಣಗಳು ರೈತರಿಗೆ ಚಿರಪರಿಚಿತವಾಗಿದೆ. ಇದೀಗ ಎಐ ಸರದಿ. ಎಐ ತಂತ್ರಜ್ಞಾನ ಭವಿಷ್ಯದಲ್ಲಿ ರಾಜ್ಯದ ಕೃಷಿಯಲ್ಲಿ ತನ್ನದೇ ಆದ ಛಾಪು ಮೂಡಿಸುವ ನಿರೀಕ್ಷೆ ಇದೆ. ಇದರ ಮೊದಲ ಹಂತವೇ ಎಐ ಆಧಾರಿತ ಕೃಷಿ ಸೇವಾ ಕೇಂದ್ರ ಎಂದು ಹೇಳಲಾಗುತ್ತಿದೆ.

Previous Post Next Post