ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ. ಭಾರತೀಯ ರೈಲ್ವೆ ಇಲಾಖೆ 'ರೈಲ್ ಒನ್' ಆ್ಯಪ್ ಬಿಡುಗಡೆ ಮಾಡಿದೆ. ಟಿಕೆಟ್ ಬುಕ್ಕಿಂಗ್, ರೈಲು ಎಲ್ಲಿದೆ ಎಂದು ತಿಳಿಯುವುದು ಸೇರಿದಂತೆ ಎಲ್ಲ ಮಾಹಿತಿಯೂ ಒಂದೇ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಈ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಐಆರ್‌ಸಿಟಿಸಿ ಆ್ಯಪ್‌ನಲ್ಲಿ ಇಲ್ಲದ ಹಲವು ವೈಶಿಷ್ಟ್ಯಗಳು ಇದರಲ್ಲಿವೆ. ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಸಹ ಬುಕ್ ಮಾಡಬಹುದು. ಅಲ್ಲದೆ, ರೈಲಿನ ವೇಳಾಪಟ್ಟಿ ಮತ್ತು ಕೋಚ್ ಸ್ಥಾನವನ್ನು ಸಹ ಪರಿಶೀಲಿಸಬಹುದು.
ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್. ರೈಲು ಟಿಕೆಟ್ ಬುಕ್ಕಿಂಗ್‌ಗೆ ಒಂದು, ರೈಲು ಎಲ್ಲಿದೆ ತಿಳಿಯಲು ಮತ್ತೊಂದು, ಊಟ ಉಪಚಾರಕ್ಕೊಂದು ಹೀಗೆ ನಾಲ್ಕೈದು ಆಪ್‌ಗಳನ್ನು ಬಳಸುವ ಅಗತ್ಯ ಇನ್ನು ಮುಂದೆ ಇಲ್ಲ! ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ರೈಲ್ ಒನ್ ಎಂಬ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್‌ನಲ್ಲಿ ರೈಲು ಬುಕ್ಕಿಂಗ್‌ನಿಂದ ಹಿಡಿದು ಪ್ರಯಾಣ ಮುಗಿಸುವವರೆಗೂ ಪ್ರಯಾಣಿಕರಿಗೆ ಬೇಕಾದ ಎಲ್ಲಾ ಮಾಹಿತಿ, ಸೌಲಭ್ಯ, ಸೇವೆಗಳು ಇಲ್ಲಿ ಸಿಗಲಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದು ರೈಲ್ವೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒಂದೇ ಕಡೆ ನೀಡುತ್ತದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಲ್ಲ ಸೇವೆಗಳನ್ನು ಒಂದೇ ಆ್ಯಪ್‌ನಲ್ಲಿ ಒದಗಿಸುವುದು ಭಾರತೀಯ ರೈಲ್ವೆ ಉದ್ದೇಶವಾಗಿತ್ತು. ಹೀಗಾಗಿಯೇ ಈ ಸೂಪರ್ ಆ್ಯಪ್ ಆರಂಭಿಸಿ ಅಂದರೆ, ಎಲ್ಲಾ ಸೌಲಭ್ಯ ಒಂದೇ ಕಡೆ ಸಿಗುವಂತೆ ಮಾಡಲಾಗಿದೆ. ಆಂಡ್‌ರಾಯ್ಡ್ ಮತ್ತು ಐಒಎಸ್ ಆ್ಯಪ್ ಸ್ಟೋರ್‌ಗಳಲ್ಲಿ ಈ ಆ್ಯಪ್ ಲಭ್ಯವಿದೆ.
ಆಪ್‌ನಲ್ಲಿ ಏನೆಲ್ಲಾ ಸೌಲಭ್ಯ ಸಿಗುತ್ತದೆ?
ರೈಲುಗಳ ಟಿಕೆಟ್ ಬುಕ್ಕಿಂಗ್
ಪಿಎನ್‌ಆರ್ ಸ್ಟೇಟಸ್ ಟ್ರ್ಯಾಕಿಂಗ್
ರೈಲು ಎಲ್ಲಿದೆ ಎಂದು ತಿಳಿಯಲು ಟ್ರೈನ್ ಟ್ರ್ಯಾಕಿಂಗ್.
ರೈಲಿನಲ್ಲಿ ಕೋಚ್ ಪೊಸಿಷನ್
ರೈಲಿನಲ್ಲಿ ಅಗತ್ಯ ಸಹಾಯ
ಪ್ರಯಾಣದ ಬಗ್ಗೆ ಫೀಡ್‌ಬ್ಯಾಕ್
ಜನರಲ್ ಟಿಕೆಟ್ ಪಡೆಯಬಹುದು.
ಪ್ಲಾಟ್ ಫಾರ್ಮ್ ಟಿಕೆಟ್ ಪಡೆಯಬಹುದು.
ರೈಲ್ ಒನ್ ಆಪ್‌ನ ವಿಶೇಷತೆ ಏನು?
ಐಆರ್‌ಸಿಟಿಸಿ - ರೈಲ್‌ಒನ್ ಆಪ್‌ಗೂ ಇರುವ ವ್ಯತ್ಯಾಸವೇನು?
ರೈಲ್ ಒನ್ ಆಪ್‌ನಲ್ಲಿ ಐಆರ್‌ಸಿಟಿಸಿ ಆಪ್‌ನ ಎಲ್ಲಾ ವೈಶಿಷ್ಟ್ಯಗಳಿವೆ. ಆದರೆ ಕೆಲವು ಹೆಚ್ಚುವರಿ ಸೌಲಭ್ಯ ನೀಡಲಾಗಿದೆ. ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡುವ ಅಪ್ಲಿಕೇಶನ್‌ನ ಸೌಲಭ್ಯ, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಐಆರ್‌ಸಿಟಿಸಿ ಅಪ್ಲಿಕೇಶನ್‌ನಲ್ಲಿ ಇಲ್ಲದ ಇತ್ತೀಚಿನ ಸೇರ್ಪಡೆಗಳಾಗಿವೆ. ಪ್ರಯಾಣಿಕರು ಅಪ್ಲಿಕೇಶನ್‌ನಲ್ಲಿ ತಮ್ಮ ರೈಲಿನ ಓಟದ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ತಮ್ಮ ರೈಲು ಕೋಚ್ ಸ್ಥಾನವನ್ನು ಪರಿಶೀಲಿಸಬಹುದು, ತಮ್ಮ ರೈಲಿನ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
ಮೊದಲಿಗೆ ಹೇಗಿತ್ತು?
ಈ ಮೊದಲು ಪ್ರಯಾಣಿಕರು ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಆ್ಯಪ್ ಬಳಸುತ್ತಿದ್ದರು. ಟಿಕೆಟ್ ಬುಕ್ ಮಾಡಲು ಐಆರ್‌ಸಿಟಿಸಿ ರೈಲ್ ಕನೆಕ್ಟ್ , ಊಟ ಆರ್ಡರ್ ಮಾಡಲು ಐಆರ್‌ಸಿಟಿಸಿ ಕ್ಯಾಟರಿಂಗ್, ಫೀಡ್‌ಬ್ಯಾಕ್ ನೀಡಲು ರೈಲ್ ಮದದ್, ಸಾಮಾನ್ಯ ಟಿಕೆಟ್ ಖರೀದಿಸಲು ಯುಟಿಎಸ್, ರೈಲಿನ ಸ್ಟೇಟಸ್ ತಿಳಿಯಲು ವೇರ್ ಇಸ್ ಮೈ ಟ್ರೈನ್ ಆ್ಯಪ್ಬಳಸುತ್ತಿದ್ದರು. ಆದರೆ, ಐಆರ್‌ಸಿಟಿಸಿ ಆ್ಯಪ್‌ನಲ್ಲಿ ಕೆಲವು ಸಮಸ್ಯೆಗಳಿವೆ. ಇತ್ತೀಚಿನ ದಿನಗಳಲ್ಲಿ ಈ ಆ್ಯಪ್ ಹಲವು ಬಾರಿ ಸರಿಯಾಗಿ ಕೆಲಸ ಮಾಡಿಲ್ಲ. ಇದರಿಂದ ಟಿಕೆಟ್ ಬುಕ್ ಮಾಡುವಾಗ ತೊಂದರೆಯಾಗಿದೆ. ಅದರಲ್ಲೂ ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.