ಮೂರು ತಿಂಗಳ ಗೃಹಲಕ್ಷ್ಮಿ ಹಣ ಜುಲೈ 20ರೊಳಗೆ ಬಿಡುಗಡೆ.DBT ಪ್ರಕ್ರಿಯೆಯಿಂದ ಕೆಲವೊಂದು ದಿನ ವಿಳಂಬ ಸಾಧ್ಯತೆ.ಯೋಜನೆಯಿಂದ 1.1 ಕೋಟಿ ಮಹಿಳೆಯರಿಗೆ ಲಾಭ
ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯದ ಮಹಿಳೆಯರು ಕಾಯುತ್ತಿರುವ ಸಮಯ ಮುಗಿಯುತ್ತಿರುವ ಲಕ್ಷಣಗಳಿವೆ.ರಾಜ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜುಲೈ 20ರೊಳಗೆ ಖಾತೆಗೆ (Bank Account) ಜಮೆಯಾಗಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ, ಈ ಮೂಲಕ ಮಹಿಳೆಯರ ಮುಖದಲ್ಲಿ ಕೊಂಚ ನೆಮ್ಮದಿ ಮೂಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಾಕಿ ಗೃಹಲಕ್ಷ್ಮಿ ಹಣ ಬಿಡುಗಡೆ, 3 ತಿಂಗಳ ಹಣ ಒಟ್ಟಿಗೆ ಜಮಾ! ಬಂಪರ್ ಸುದ್ದಿ
ಇದೀಗಲೂ ಕೆಲವೊಂದು ತಾಂತ್ರಿಕ ತೊಂದರೆಗಳು ಹಾಗೂ DBT (Direct Benefit Transfer) ಪ್ರಕ್ರಿಯೆಯ ವ್ಯತ್ಯಯಗಳಿಂದಾಗಿ ಹಣದ ಜಮಾ ಕೆಲವೊಮ್ಮೆ ವಿಳಂಬವಾಗಬಹುದು ಎಂಬುದನ್ನು ಅವರು ಎಚ್ಚರಿಸಿದ್ದಾರೆ. ಬಾಕಿ ಇದ್ದ ಮೂರು ತಿಂಗಳ ಹಣದ ಒಟ್ಟು ಮೊತ್ತ ₹6,000 (ತಿಂಗಳಿಗೆ ₹2,000) ಗೃಹಿಣಿಯರ ಖಾತೆಗೆ ಜಮೆಯಾಗಲಿದೆ.
ಆದರೆ ಈ ಯೋಜನೆ ಅಡಿ ಹಣ ಬಿಡುಗಡೆ ವಿಳಂಬವಾಗುವುದು ಇದೇ ಮೊದಲು ಅಲ್ಲ. ಫೆಬ್ರವರಿಯಲ್ಲಿ ಬಿಡುಗಡೆಯಾಗಬೇಕಾದ ಹಣ ಜೂನ್‌ನಲ್ಲಿ ಲಭ್ಯವಾಯಿತು. ಹೀಗಾಗಿ ಹಲವರು ನಿರೀಕ್ಷೆಯಲ್ಲಿಯೇ ಕಾದು ಕುಳಿತಿದ್ದರು. “ಈ ತಿಂಗಳು ಬರುತ್ತೋ ಏನೋ…” ಎಂಬ ನಿರೀಕ್ಷೆಯಲ್ಲಿ ಮಹಿಳೆಯರು ಕಾಯುವುದು ಸಾಮಾನ್ಯವಾಗಿತ್ತು.
ಈಗಾಗಲೇ ರಾಜ್ಯ ಸರ್ಕಾರ 25,000 ಕೋಟಿ ರೂಪಾಯಿಗಳನ್ನು ಗೃಹಲಕ್ಷ್ಮಿ ಯೋಜನೆಯಡಿ ವಿತರಿಸಿದ್ದು, ಸುಮಾರು 1.1 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ನಿರಂತರ ವಿಳಂಬದಿಂದಾಗಿ ಜನರಲ್ಲಿ ಅಸಮಾಧಾನವೂ ಇದೆ ಎಂಬುದನ್ನು ನಿರಾಕರಿಸಲಾಗದು.
ಈ ಸಂದರ್ಭದಲ್ಲಿ, “ಜುಲೈ 20ರೊಳಗೆ ಹಣ ಖಾತೆಗೆ ಸೇರುವಂತೆ ನೋಡಿಕೊಳ್ಳಲಾಗುತ್ತೆ. ದಿನಾಂಕ ನಿಗದಿಯಾಗಿದ್ದರೂ, ಬ್ಯಾಂಕ್ ಪ್ರಕ್ರಿಯೆಯಿಂದ 2-3 ದಿನ ಅಂತರವಿರುವುದು ಸಹಜ” ಎಂಬ ಸಂದೇಶ ನೀಡುವ ಮೂಲಕ ಮಹಿಳೆಯರ ಭರವಸೆ ಪುನರ್ ಸ್ಥಾಪಿಸಲು ಸಚಿವರು ಯತ್ನಿಸಿದ್ದಾರೆ.