ಅಗ್ಗದ ಹೊಸ ಸ್ಕೂಟರ್ ಬಿಡುಗಡೆ: ಖರ್ಚಿಲ್ಲದೆ 120 ಕಿ.ಮೀ ಓಡಿಸಿ... ಕೇವಲ 50 ಸಾವಿರ ಅಷ್ಟೆ

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಝೀಲಿಯೋ ಇ (ZELIO E) ಮೊಬಿಲಿಟಿ, ತನ್ನ ಜನಪ್ರಿಯ ಲೋ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಈವಾ (Eeva) ಫೇಸ್‌ಲಿಫ್ಟ್ ಮಾಡಲ್ ಅನ್ನು ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್ ಸುಧಾರಿತ ಪರ್ಫಾಮೆನ್ಸ್, ಹೆಚ್ಚಿನ ಸವಾರಿ ಸೌಕರ್ಯವನ್ನು ನೀಡಲಿದೆ. ಇದು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಣ್ಣ ಕೆಲಸಗಾರರಿಗೆ ಅನುಗುಣವಾಗಿ ಅಗತ್ಯ ಫೀಚರ್ಸ್ ಒಳಗೊಂಡಿದೆ. ಈ ಸ್ಕೂಟರ್ ಕಂಪನಿಯ ಕೈಗೆಟುಕುವ, ನಗರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಸ್ಮಾರ್ಟ್ ಮತ್ತು ಪ್ರಾಯೋಗಿಕವಾಗಿದೆ ಎಂದು ಕಂಪನಿ ಹೇಳಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ Eeva ಫೇಸ್‌ಲಿಫ್ಟ್ ಮಾಡಲ್ ವಿವಿಧ ಬ್ಯಾಟರಿ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ವೇರಿಯೆಂಟ್ 60V/30AH ಮಾಡಲ್ ಬೆಲೆಯು 64,000 ರೂ. ಇದೆ. ಇದು ಸಿಂಗಲ್ ಚಾರ್ಜ್ ನಲ್ಲಿ 90 ರಿಂದ 100 km ರೇಂಜ್ ನೀಡುತ್ತದೆ. ಮತ್ತೊಂದು ಲಿಥಿಯಂ-ಐಯಾನ್ ಬ್ಯಾಟರಿ ವೇರಿಯೆಂಟ್ ಆಗಿರುವ 74V/32AH ಬೆಲೆಯು 69,000 ರೂ. ಇದೆ. ಒಮ್ಮೆ ಚಾರ್ಜ್ ಮಾಡಿದರೆ 120 km ರೇಂಜ್ ನೀಡುತ್ತದೆ.

ಹೊಸ Eeva ಫೇಸ್‌ಲಿಫ್ಟ್ ಮಾಡಲ್ ಜೆಲ್ ಬ್ಯಾಟರಿಗಳಲ್ಲಿಯೂ ಲಭ್ಯವಿದ್ದು, ಇದರಲ್ಲಿ 60V/32AH ಜೆಲ್ ವೇರಿಯೆಂಟ್ ಬೆಲೆಯು 50,000 ರೂ. ಇದೆ. ಇದನ್ನು ಒಮ್ಮೆ ಸಂಪೂರ್ಣ ಜಾರ್ಜ್ ಮಾಡಿದರೆ 80 ಕಿ.ಮೀ ರೇಂಜ್ ನೀಡುತ್ತದೆ. ಮತ್ತೊಂದು 72V/42AH ಜೆಲ್ ವೇರಿಯೆಂಟ್ 54,000 ರೂ. ಬೆಲೆಯಿದ್ದು, ಒಮ್ಮೆ ಚಾರ್ಜ್ ಮಾಡಿದರೆ 100 ಕಿ.ಮೀ ರೇಂಜ್ ನೀಡುತ್ತದೆ.

25 ಕಿ.ಮೀ ಟಾಪ್‌ ಸ್ಪೀಡ್ ಹೊಂದಿರುವ ಫೇಸ್‌ಲಿಫ್ಟೆಡ್ ಈವಾವನ್ನು ವೆಚ್ಚ - ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ನಗರ ಚಾಲನೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಪೂರ್ಣ ಚಾರ್ಜ್‌ಗೆ ಕೇವಲ 1.5 ಯೂನಿಟ್ ಕರೆಂಟ್ ಬಳಸುವ ಹೈ - ಪರ್ಫಾಮೆನ್ಸ್ 60/72V BLDC ಮೋಟಾರ್‌ ಹೊಂದಿದೆ.

ಸ್ಕೂಟರ್ 150 ಮಿ.ಮೀ ವರ್ಧಿತ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ, ಜೊತೆಗೆ 85 ಕೆ.ಜಿ ಒಟ್ಟು ತೂಕ ಮತ್ತು 150 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿ ಪ್ರಕಾರವನ್ನು ಅವಲಂಬಿಸಿ ಚಾರ್ಜಿಂಗ್ ಅವಧಿಗಳು ಬದಲಾಗುತ್ತವೆ, ಲಿಥಿಯಂ-ಐಯಾನ್ ಮಾದರಿಗಳು 4 ಗಂಟೆಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಜೆಲ್ ಬ್ಯಾಟರಿ ವೇರಿಯೆಂಟ್‌ಗಳು 8 ರಿಂದ 10 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ.

ಫೇಸ್‌ಲಿಫ್ಟೆಡ್ ಈವಾ ಸ್ಕೂಟರ್ ಮುಂಭಾಗ ಮತ್ತು ಹಿಂಭಾಗದ ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. 12-ಇಂಚಿನ 90/90-12 ಟೈರ್‌ಗಳೊಂದಿಗೆ ಬರುತ್ತದೆ. ಇದರ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳು ಉಬ್ಬುಗಳು ಮತ್ತು ಗುಂಡಿಗಳ ಮೇಲೆ ಸುಗಮ ಸವಾರಿಯನ್ನು ಖಾತರಿಪಡಿಸುತ್ತದೆ, ಸವಾರರ ಸೌಕರ್ಯವನ್ನು ಹೆಚ್ಚಿಸುತ್ತದೆ.

ಈವಾ 2025 ಡಿಜಿಟಲ್ ಡಿಸ್ಪ್ಲೇ, ಡೇಟೈಮ್ ರನ್ನಿಂಗ್ ಲೈಟ್‌ಗಳು (DRL), ಕೀಲೆಸ್ ಡ್ರೈವ್, ಆಂಟಿ-ಥೆಫ್ಟ್ ಅಲಾರ್ಮ್, ಪಾರ್ಕಿಂಗ್ ಗೇರ್, USB ಚಾರ್ಜಿಂಗ್ ಪೋರ್ಟ್ ಮತ್ತು ಪ್ಯಾಸೆಂಜರ್ ಫುಟ್‌ರೆಸ್ಟ್ ಸೇರಿದಂತೆ ಹಲವಾರು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಬ್ಲೂ, ಗ್ರೇ, ವೈಟ್ ಮತ್ತು ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.

ZELIO ತನ್ನ ಸ್ಕೂಟರ್‌ಗಳ ಮೇಲೆ 2 ವರ್ಷಗಳ ವಾರೆಂಟಿ ಮತ್ತು ಎಲ್ಲಾ ಬ್ಯಾಟರಿ ವೇರಿಯೆಂಟ್‌ಗಳ ಮೇಲೆ 1 ವರ್ಷದ ವಾರೆಂಟಿಯನ್ನು ನೀಡುತ್ತಿದೆ. Eeva ಫೇಸ್‌ಲಿಫ್ಟ್‌ನ ಬಿಡುಗಡೆಯು ZELIO ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಉಪಸ್ಥಿತಿಯನ್ನು ಮತ್ತು ನಾವೀನ್ಯತೆ, ಪ್ರಾಯೋಗಿಕತೆ ಮತ್ತು ಬಳಕೆದಾರ-ಕೇಂದ್ರಿತ ವಿನ್ಯಾಸದೊಂದಿಗೆ ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಮುನ್ನಡೆಸುವ ಉದ್ದೇಶವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ.


Previous Post Next Post