ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ವ್ಯಾಪ್ತಿಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಪಶುಸಂಗೋಪನೆಯಲ್ಲಿ(Diploma in veterinary application) 2 ವರ್ಷದ ಪಶು ಸಂಗೋಪನೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ವಿಶ್ವವಿದ್ಯಾಲಯದಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಪಶುಸಂಗೋಪನೆ ಡಿಪ್ಲೊಮಾ(Diploma Veterinary ) ಪ್ರವೇಶವನ್ನು ಪಡೆಯಲು ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳೇನು? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ, ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ದಾಖಲೆಗಳು ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
ರಾಜ್ಯದಲ್ಲಿ ಪಶುಸಂಗೋಪನೆ ಡಿಪ್ಲೊಮಾ ಶಿಕ್ಷಣವನ್ನು(Diploma Veterinary Admission-2025) ಒಟ್ಟು 5 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನೀಡಲಾಗುತ್ತಿದ್ದು ಐದು ಪಾಲಿಟೆಕ್ನಿಕ್ ಸೇರಿ ಒಟ್ಟು 250 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ ಇದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Diploma Veterinary Colleges In Karnataka-ಲಭ್ಯವಿರುವ ಸೀಟುಗಳು:
ಡಿಪ್ಲೊಮಾ ಪಶು ಸಂಗೋಪನೆ ಕೋರ್ಸ್ ಪ್ರವೇಸವನ್ನು ಬಯಸುವ ಅಭ್ಯರ್ಥಿಗಳ ಮಾಹಿತಿಗಾಗಿ ರಾಜ್ಯದಲ್ಲಿರುವ ಒಟ್ಟು ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜ್ ಗಳ ವಿಳಾಸ ಮತ್ತು ಲಭ್ಯವಿರುವ ಸೀಟುಗಳ ಅಂಕಿ- ಅಂಶ ಹೀಗಿದೆ:
(1) ಪಶುಸಂಗೋಪನಾ ಪಾಲಿಟೆಕ್ನಿಕ್, ಕೊನೆಹಳ್ಳಿ-50
(2) ಪಶುಸಂಗೋಪನಾ ಪಾಲಿಟೆಕ್ನಿಕ್, ಕುನ್ನೂರು,ಶಿಗ್ಗಾಂವ-50
(3) ಪಶುಸಂಗೋಪನಾ ಪಾಲಿಟೆಕ್ನಿಕ್, ಕೊರಮಂಗಲ ಕ್ರಾಸ್ ಹಾಸನ ಜಿಲ್ಲೆ-50
(4) ಪಶುಸಂಗೋಪನಾ ಪಾಲಿಟೆಕ್ನಿಕ್, ಬರ್ಗಿ-50
(5) ಪಶುಸಂಗೋಪನಾ ಪಾಲಿಟೆಕ್ನಿಕ್, ಡೊರ್ನಳ್ಳಿ-50
Last Date For Application-ಆಸಕ್ತ ಅರ್ಹ ವಿದ್ಯಾರ್ಥಿಗಳು ಪಶು ಸಂಗೋಪನೆ ಡಿಪ್ಲೊಮಾ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2025 ಅಗಿರುತ್ತದೆ.
Education Qualification-ಪ್ರವೇಶ ಪಡೆಯಲು ವಿದ್ಯಾರ್ಹತೆ:
ವಿದ್ಯಾರ್ಥಿಯು ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸುವ ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯೋಂದಿಗೆ ಕನ್ನಡ ಒಂದು ವಿಷಯವನ್ನು ಕಡ್ಡಾಯವಾಗಿ ಓದಿ ಕನಿಷ್ಟ ಶೇ 45 ರಷ್ಟ ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. ಪ.ಜಾತಿ/ಪ.ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳು ಶೇ 40 ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತ್ತು ಅರ್ಜಿದಾರ ಅಭ್ಯರ್ಥಿಯು ಕಡ್ಡಾಯವಾಗಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.
Age Limit-ಅರ್ಜಿ ಸಲ್ಲಿಸಲು ವಯೋಮಿತಿ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31 ಜುಲೈ 2025 ರಂದು ಅಭ್ಯರ್ಥಿಯ ವಯಸ್ಸು 20 ವರ್ಷ ಮೀರಿರಬಾರದು.
Monthly stipend-ಪ್ರತಿ ತಿಂಗಳು ರೂ 1,000 ಶಿಷ್ಯವೇತನ:
ಪಶು ಸಂಗೋಪನೆ ಡಿಪ್ಲೊಮಾ ಗೆ ಪ್ರವೇಶವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸುವವರೆಗೆ ಪ್ರತಿ ತಿಂಗಳಿಗೆ ರೂ 1,000 ಶಿಷ್ಯವೇತನವನ್ನು ವ್ಯಾಸಂಗದ ಅವಧಿಯಲ್ಲಿ ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
Agriculture Quota-ಕೃಷಿಕ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ 50% ಮೀಸಲಾತಿ:
ಪಶು ಸಂಗೋಪನೆ ಡಿಪ್ಲೊಮಾ ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಮಯದಲ್ಲಿ ಶೇ 50% ರಷ್ಟು ಸೀಟುಗಳನ್ನು ಕೃಷಿಕ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲಾಗುತ್ತದೆ.
How To Apply For Diploma Veterinary Course-ಅರ್ಜಿ ಸಲ್ಲಿಸುವುದು ಹೇಗೆ?
ಡಿಪ್ಲೊಮಾ ಪಶು ಸಂಗೋಪನೆ ಪ್ರವೇಶವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಅವಕಾಶ ನೀಡಲಾಗಿದ್ದು 01 ಜುಲೈ 2025 ರಿಂದ 31 ಜುಲೈ 2025ರ ವರೆಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಸ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Online application link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: Apply Now
Required Documents for application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:
ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar.
ಪೋಟೋ/Photo.
SSLC ಅಂಕಪಟ್ಟಿ/Marks Card.
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ/Rural Study Certificate.
ಕನ್ನಡ ಮಾಧ್ಯಮ ಪ್ರಮಾಣ ಪತ್ರ/Kannada medium certificate.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income Certificate.
ವ್ಯವಸಾಯಗಾರರ ಪ್ರಮಾಣ ಪತ್ರ(Agriculture Certificate)
Diploma In Veterinary Admission-ಪ್ರವೇಶ ವಿಧಾನ:
ಪಶು ಸಂಗೋಪನೆ ಡಿಪ್ಲೊಮಾ ಕೋರ್ಸಿಗೆ ಪ್ರವೇಶವನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೇರೆಗೆ ಸರಕಾರದ ಮೀಸಲಾತಿ ಆದೇಶದಂತೆ ಹಾಗೂ ಮೆರಿಟ್ ಆಧರಿಸಿ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.
For More Information-ಇನ್ನು ಹೆಚ್ಚಿನ ಮಾಹಿತಿಗಾಗಿ:
Diploma Veterinary Notification-ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಲು ಲಿಂಕ್: Download Now
Diploma Veterinary Course Guidelines-ಪಶು ಸಂಗೋಪನೆ ಡಿಪ್ಲೊಮಾ ಪ್ರವೇಶದ ಮಾಹಿತಿ ಪುಸ್ತಕ-Download Now
Application Linkಅರ್ಜಿ ಸಲ್ಲಿಸಲು ಲಿಂಕ್: Apply Now
Bidar Veterinary University Website-ಅಧಿಕೃತ ವೆಬ್ಸೈಟ್ ಲಿಂಕ್: Click Here