ರೈತರು ಕೃಷಿ ಮತ್ತು ಪೂರಕ ಇಲಾಖೆಯಲ್ಲಿ(Karnataka Agriculture Deparment) ಲಭ್ಯವಿರುವ ಸಹಾಯಧನ ಆಧಾರಿತ ಯೋಜನೆಗಳ ಪ್ರಯೋಜನವನ್ನು(Krishi Ilake Yojane) ಪಡೆಯಲು ಅತೀ ಮುಖ್ಯವಾಗಿ ಎಲ್ಲಾ ರೈತರು ಕಡ್ಡಾಯವಾಗಿ ಮಾಡಬೇಕಾದ ಕೆಲಸದ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಂದು ಈ ಅಂಕಣದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷವು ಸಹ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಪ್ರಾರಂಭದಲ್ಲಿ(Crop Survey) ನಮ್ಮ ಪುಟದಿಂದ ಈ ಮಾಹಿತಿಯನ್ನು ಪ್ರಕಟಿಸುತ್ತಾ ಬಂದಿದ್ದೇವೆ ಪ್ರಸ್ತುತ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಬಹುತೇಕ ರೈತರು ಬಿತ್ತನೆಯನ್ನು ಪೂರ್ಣಗೊಳಿಸಿದ್ದಾರೆ. ನಮ್ಮ ರೈತರು ಬೆಳೆ ಬೆಳೆಯುವುದರ ಜೊತೆಗೆ ಕೆಲವು ಪೂರಕ ತಾಂತ್ರಿಕ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕ.
ಬೆಳೆಯನ್ನು ಕಟಾವು ಮಾಡಿದ ಬಳಿಕ ಬೆಂಬಲ ಬೆಲೆಯಲ್ಲಿ(Bembala Bele) ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು, ಬೆಳೆ ವಿಮೆ(Bele Vime) ಯೋಜನೆಯಡಿ ವಿಮಾ ಅರ್ಜಿಯನ್ನು ಸಲ್ಲಿಸಿ ಪರಿಹಾರವನ್ನು ಪಡೆಯಲು, NDRF ಮಾರ್ಗಸೂಚಿಯನ್ವವ ಬೆಳೆ ಪರಿಹಾರವನ್ನು ಪಡೆಯಲು ಹೀಗೆ ಬಹುತೇಕ ಬೆಳೆ ಆಧಾರಿತ ಸಬ್ಸಿಡಿ ಯೋಜನೆಯ(Agriculture Subsidy Schemes)ಪ್ರಯೋಜನವನ್ನು ಪಡೆಯಲು ಜಮೀನಿನ ಸರ್ವೆ ನಂಬರ್ ಪಹಣಿಯಲ್ಲಿ ಬೆಳೆ ವಿವರ ಸರಿಯಾಗಿ ದಾಖಲಾಗುವುದು ಕಡ್ಡಾಯವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Crop Survey IImportance-ರೈತರು ಈ ಕೆಲಸ ಮಾಡದಿದ್ದರೆ ಬೆಳೆ ವಿಮೆ ಇತರೆ ಯೋಜನೆಗಳ ಸೌಲಭ್ಯ ಬಂದ್:
ಹೌದು ರೈತ ಮಿತ್ರರೇ ಜಮೀನಿನ ಸರ್ವೆ ನಂಬರಿನ ಪಹಣಿಯಲ್ಲಿ/RTC ಬೆಳೆ ಮಾಹಿತಿ ಸರಿಯಾಗಿ ದಾಖಲಾಗಿದ್ದರೆ ಮಾತ್ರ ಸರ್ಕಾರದ ವಿವಿಧ ಯೋಜನೆಯ ಪ್ರಯೋಜನ ಪಡೆಯಲು ನಿಮಗೆ ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.
RTC Crop Information-ರೈತರೇ ತಮ್ಮ ಜಮೀನಿನ ಬೆಳೆ ವಿವರವನ್ನು ಪಹಣಿಯಲ್ಲಿ ದಾಖಲಿಸಲು ಅವಕಾಶ:
ಕಳೆದ 2-3 ವರ್ಷದಿಂದ ಕೃಷಿ ಇಲಾಖೆಯಿಂದ Farmer Crop Survey ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದ್ದು ಈ ಮೊಬೈಲ್ ಅಪ್ಲಿಕೇಶನ್ ಅನ್ನು ರೈತರು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ GPS ಆಧಾರಿತ ಪೋಟೋ ವನ್ನು ತೆಗೆದು ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸಲು ಸ್ವಂತ ತಾವೇ ಬೆಳೆ ಸಮೀಕ್ಷೆಯನ್ನು ಮಾಡಲು ಇಲಾಖೆಯಿಂದ ಅವಕಾಶ ನೀಡಲಾಗಿದೆ.
Importance Of Crop Curvey- ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ:
ಬೆಂಬಲ ಬೆಲೆ ಯೋಜನೆಯಡಿ ರೈತರು ತಾವು ಬೆಳೆದಿರುವ ಬೆಳೆಯನ್ನು ಮಾರಾಟ ಮಾಡಲು ಬೆಳೆ ಸಮೀಕ್ಷೆಯ ಬೆಳೆ ವಿವರವನ್ನು ಪರಿಗಣಿಸಲಾಗುತ್ತದೆ. ಬೆಳೆ ಮಾಹಿತಿ ತಾಳೆಯಾಗದೇ ಇದ್ದಲ್ಲಿ ರೈತರು ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.
ಬೆಳೆ ವಿಮೆ ಪರಿಹಾರವನ್ನು ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲು ಬೆಳೆ ಸಮೀಕ್ಷೆಯ ಮತ್ತು ಬೆಳೆ ವಿಮೆ ಅರ್ಜಿ ಬೆಳೆ ತಾಳೆಯಾದರೆ ಮಾತ್ರ ಪರಿಹಾರವನ್ನು ರೈತರಿಗೆ ವಿತರಣೆ ಮಾಡಲಾಗುತ್ತದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಇಂತಹ ಸಮಯದಲ್ಲಿ ಬೆಳೆ ನಷ್ಟವಾದ ಅರ್ಹ ರೈತರನ್ನು ಬೆಳೆ ಸಮೀಕ್ಷೆಯ ಬೆಳೆ ವಿವರದ ಆಧಾರದ ಮೇಲೆಯೇ ಗುರುತಿಸಿ NDRF ಮಾರ್ಗಸೂಚಿ ಪ್ರಕಾರ ಬೆಳೆ ಪರಿಹಾರವನ್ನು ನೀಡಲಾಗುತ್ತದೆ.
ಇದೇ ರೀತಿ ಬೆಳೆ ಆಧಾರಿತ ವಿವಿಧ ಇಲಾಖೆಯ ಸಬ್ಸಿಡಿ ಯೋಜನೆಯ ಸೌಲಭ್ಯವನ್ನು ಪಡೆಯಲು ಬೆಳೆ ಸಮೀಕ್ಷೆ ವಿವರ ಅತೀ ಮುಖ್ಯವಾಗಿದೆ.
Kharif Farmer Crop Survey App-2025: ರೈತರು ತಮ್ಮ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡುವ ವಿಧಾನ:
ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ದಾಖಲಿಸಲು ಬೆಳೆ ಸಮೀಕ್ಷೆಯನ್ನು ಮಾಡುವುದ ಅತ್ಯಗತ್ಯ ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ದಾಖಲಿಸಲು ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಕೃಷಿ ಇಲಾಖೆಯ ಅಧಿಕೃತ "Kharif Farmer Crop Survey App" ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಿ ಬೆಳೆ ಮಾಹಿತಿಯನ್ನು ದಾಖಲಿಸಲು ಅವಕಾಶವಿರುತ್ತದೆ.
Step-1: ರೈತರು ಮೊದಲ ಹಂತದಲ್ಲಿ ಇಲ್ಲಿ ಕ್ಲಿಕ್ ಮಾಡಿ Kharif Farmer Crop Survey App ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
Step-2: ಬಳಿಕ ಅಪ್ಲಿಕೇಶನ್ ತೆರೆದು 3 ರಿಂದ 4 ಬಾರಿ allow ಎಂದು ಒತ್ತಿ ಬಳಿಕ ಕೊನೆಯಲ್ಲಿ "Agree" ಬಟನ್ ಮೇಲೆ ಕ್ಲಿಕ್ ಮಾಡಿ ತದನಂತರ "E-KYC ಮೂಲಕ ಆಧಾರ್ ದೃಡೀಕರಿಸಿ" ಆಯ್ಕೆಯ ಮೇಲೆ ಒತ್ತಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಸಹಮತಿ ಇದೆ ಎಂದು ಕ್ಲಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ "ಓಟಿಪಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ ಇದಾದ ನಂತರ "ಸಲ್ಲಿಸಿ" ಬಟನ್ ಮೇಲೆ ಒತ್ತಿದರೆ ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ "ಸಕ್ರಿಯಗೊಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.
Step-4: ತದನಂತರ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ತೋರಿಸುತ್ತವೆ ಬಳಿಕ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ "ಬೆಳೆ ವಿವರ ದಾಖಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈಗ ತಾವು ಆ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.
Crop survey Upload- ಸಮೀಕ್ಷೆ ಮಾಡಿದ ಬಳಿಕ ವಿವರವನ್ನು ತಪ್ಪದೇ ಅಪ್ಲೋಡ್ ಮಾಡಿ:
ರೈತರು ಮೇಲಿನ ಹಂತಗಳನ್ನು ಅನುಸರಿಸಿ ಸಮೀಕ್ಷೆಯನ್ನು ಮಾಡಿದ ಬಳಿಕ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು "ಅಪ್ಲೋಡ್ ಮಾಡಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ತಪ್ಪದೇ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಬೇಕು.
Crop Survey App Helpline- ಬೆಳೆ ಸಮೀಕ್ಷೆ ಕುರಿತು ಹೆಚ್ಚಿನ ಮಾಹಿತಿಗಾಗಿ:
ಸಹಾಯವಾಣಿ ಸಂಖ್ಯೆ: 18004253553
Crop Survey Website-ವೆಬ್ಸೈಟ್ ಲಿಂಕ್: click here
Crop Survey Video-ಬೆಳೆ ಸಮೀಕ್ಷೆ ಮಾಡುವ ವಿಧಾನದ ವಿಡಿಯೋ: Watch Nows
ಮೊಬೈಲ್ ಅಪ್ಲಿಕೇಶನ್ ನಲ್ಲಿ ಬೆಳೆ ವಿವರ ದಾಖಲಾತಿ ಹೇಗೆ ಮಾಡುವುದು ಎನ್ನುವ ಮಾಹಿತಿಯ ಕುರಿತು ಅಗತ್ಯ ಮಾಹಿತಿಯನ್ನು ಪಡೆಯಲು ನಿಮ್ಮ ಗ್ರಾಮಕ್ಕೆ ಕೃಷಿ ಇಲಾಖೆಯಿಂದ ನೇಮಿಸಿರುವ ಖಾಸಗಿ ನಿವಾಸಿ(PR)ಯನ್ನು ಅಥವಾ ನಿಮ್ಮ ಹಳ್ಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.