Vibhuti Ghataka Subsidy- ₹4.00 ಲಕ್ಷದಲ್ಲಿ ವಿಭೂತಿ ಘಟಕ ಸ್ಥಾಪನೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿಭೂತಿ ಘಟಕ ಸ್ಥಾಪನೆ(Vibhuti Ghataka Subsidy) ಯೋಜನೆಯಡಿ ಸ್ವಂತ ಉದ್ಯೋಗವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಪ್ರಸ್ತುತ ಈ ಲೇಖನದಲ್ಲಿ ವಿಭೂತಿ ಘಟಕ ಸ್ಥಾಪನೆ ಯೋಜನೆಯಡಿ(Vibhuti Ghataka Subsidy Yojane)ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಲು ವಿಭೂತಿಯನ್ನು ತಯಾರು ಮಾಡುವ ಘಟಕವನ್ನು ಪ್ರಾರಂಭಿಸಲು ಸಬ್ಸಿಡಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Vibhuti Ghataka Subsidy Scheme-ವಿಭೂತಿ ಘಟಕ ಸ್ಥಾಪನೆ ಸಬ್ಸಿಡಿ ಯೋಜನೆ:

ಲಿಂಗಾಯತ ನಿಗಮದಿಂದ ಸ್ವಂತ ಉದ್ಯೋಗವನ್ನು ಆರಂಭಿಸಲು ಇಚ್ಚೆಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ವಿಭೂತಿಯನ್ನು ಉತ್ಪಾದನೆ ಮಾಡುವ ಕೇಂದ್ರಗಳಿಗೆ ನೆರವು ನೀಡುವ ಯೋಜನೆ ಇದಾಗಿದ್ದು ಈ ಯೋಜನೆಯ ಮೂಲಕ ವಿಭೂತಿ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡುವವರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.

ರಾಜ್ಯಾದ್ಯಂತ ಹಾಗೂ ದೇಶದಾದ್ಯಂತ ವೀರಶೈವ ಲಿಂಗಾಯತ ಸಮುದಾಯದ ಜನರು ಪೂಜಾ ಪುನಸ್ಕಾರಗಳಿಗೆ ಹಾಗೂ ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮಕ್ಕೆ ವಿಭೂತಿಯನ್ನು ಬಳಸಲಾಗುತ್ತಿದ್ದು, ಈ ದೃಷ್ಠಿಯಿಂದ ವೀರಶೈವ ಲಿಂಗಾಯತ ಸಮುದಾಯದ ಜನರು ಪಾರಂಪರಿಕವಾಗಿ ಬಂದಿರುವಂತಹ ವಿಭೂತಿಯನ್ನು ತಯಾರು ಮಾಡಲು ನಿಗಮದಿಂದ ಈ ಯೋಜನೆಯಡಿ ಸಾಲ ಮತ್ತು ಸಬ್ಸಿಡಿ ನೀಡಲು ಅವಕಾಶ ನೀಡಲಾಗಿದೆ.

Last Date for Online Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ವೀರಶೈವ ಅಂಗಾಯತ ಅಭಿವೃದ್ಧಿ ನಿಗಮದಿಂದ ವಿಭೂತಿ ಘಟಕ ಸ್ಥಾಪನೆ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಪ್ರಮುಖ ದಿನಾಂಕಗಳ ಮಾಹಿತಿ ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಅರ್ಜಿ ಸಲ್ಲಿಕೆ ಪ್ರಾರಂಭ- ನಿಗಮದಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿರುತ್ತದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ- 31 ಜುಲೈ 2025

Vibhuti Ghataka Subsidy Amount-ವಿಭೂತಿ ಘಟಕ ಸ್ಥಾಪನೆ ಎಷ್ಟು ಸಹಾಯಧನ ನೀಡಲಾಗುತ್ತದೆ?

ವಿಭೂತಿ ಘಟಕವನ್ನು ನಿರ್ಮಾಣ ಮಾಡಲು ನಿಗಮದಿಂದ ಎಷ್ಟು ಸಬ್ಸಿಡಿಯನ್ನು ಒದಗಿಸಲಾಗುತ್ತದೆ ಎನ್ನುವ ವಿವರ ಹೀಗಿದೆ:

ಒಟ್ಟು ಘಟಕ ವೆಚ್ಚ:- ರೂ 4.00 ಲಕ್ಷ

ಸಾಲ ಸೌಲಭ್ಯ:- 3,60,000/-

ಸಬ್ಸಿಡಿ ಮೊತ್ತ:- ರೂ. 40,000/-

ವಾರ್ಷಿಕ ಬಡ್ಡಿದರ:- ಶೇ.3%

ಸಾಲ ಮರುಪಾವತಿಗೆ ನಿಗದಿಪಡಿಸಿರುವ ಅವಧಿ:- ಸಾಲದ ಮೊತ್ತವನ್ನು 36 ತಿಂಗಳುಗಳಲ್ಲಿ, 12 ತ್ರೈಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು.

Eligibility Criteria Details-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ವಿಭೂತಿ ಘಟಕ ಸ್ಥಾಪನೆ ಯೋಜನೆ ಮೂಲಕ ಸಬ್ಸಿಡಿಯಲ್ಲಿ ವಾಹನವನ್ನು ಖರೀದಿ ಮಾಡಲು ನಿಗಮದಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ವಿವರ ಈ ಕೆಳಗಿನಂತಿದೆ.

1) ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2) ಅಭ್ಯರ್ಥಿಯು ವೀರಶೈವ ಲಿಂಗಾಯತ ಸಮುದಾಯಕ್ಕೆ (ಪ್ರವರ್ಗ-3ಬಿ) ಸೇರಿದವರಾಗಿರಬೇಕು.

3) ಅರ್ಜಿದಾರರು ವಯಸ್ಸು 18 ವರ್ಷದಿಂದ 55 ವರ್ಷದ ಒಳಗಿರಬೇಕು.

4) ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹3.50 ಲಕ್ಷ ಮಿತಿಯಲ್ಲಿರಬೇಕು.

5) ಅಭ್ಯರ್ಥಿಯು ಕುಟುಂಬದ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರಕಾರಿದ ನೌಕರಿಯಲ್ಲಿರಬಾರದು.

6) ಈ ಹಿಂದೆ ನಿಗಮದಿಂದ ಈ ಯೋಜನೆಯಡಿ ಸೌಲಭ್ಯವನ್ನು ಪಡೆದಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

7)ಮಹಿಳೆಯರಿಗೆ ಈ ಯೋಜನೆಯಲ್ಲಿ ಶೇ.33 ರಷ್ಟು ಮೀಸಲು ನಿಗದಿಪಡಿಸಿದೆ.

8)ಅಂಗವಿಕಲರಿಗೆ ಈ ಯೋಜನೆಯಲ್ಲಿ ಶೇ.5 ರಷ್ಟು ಮೀಸಲು ನಿಗದಿಪಡಿಸಿದೆ.

9)ಒಂದು ಕುಟುಂಬದಲ್ಲಿ ಒಬ್ಬ ಅಭ್ಯರ್ಥಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

How To Apply-ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನೇರವಾಗಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿಯು ಸಹ ಅರ್ಜಿಯನ್ನು ಸಲ್ಲಿಸಬಹುದು.

Online Application Link-ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿವರಿಸಿರುವ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ತಂತ್ರಾಂಶವನ್ನು ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ನಿಗಮದಿಂದ ಅವಕಾಶವನ್ನು ಮಾಡಿಕೊಡಲಾಗಿದೆ.

Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Apply Now ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ ಈ ವೆಬ್ಸೈಟ್ ಗೆ ಪ್ರಥಮ ಬಾರಿಗೆ ಭೇಟಿ ಮಾಡುತ್ತಿರುವವರು ಈ ಪೇಜ್ ನಲ್ಲಿ ಕಾಣುವ "Register Here" ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿಯನ್ನು ಸಕ್ರಿಯಗೊಳಿಸಬೇಕು. ಬಳಿಕ ಬಳಕೆದಾರ ಐಡಿ ಮತು OTP ಅನ್ನು ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

Required Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:

ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

1) ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ/Aadhr

2) ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book

3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income certificate

4) ಪೋಟೋ/Photo

5) ರೇಶನ್ ಕಾರ್ಡ ಪ್ರತಿ/Ration Card

6) ಮೊಬೈಲ್ ನಂಬರ್/mobile Number

7) ಅರ್ಜಿದಾರರು ಕೈಗೊಳ್ಳುವ ಆರ್ಥಿಕ ಚಟುವಟಿಕೆಯ ಅನುಭವ/ತರಬೇತಿ ಬಗ್ಗೆ ಪ್ರಮಾಣ ಪತ್ರ/ಸ್ವಯಂ ಘೋಷಣೆ ಪತ್ರ/Trainig Cetificate

For More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು:

Application link-ಅರ್ಜಿ ವೆಬ್ಸೈಟ್- Click Here

Lingayat Nigama Website-ಅಧಿಕೃತ ಜಾಲತಾಣ- Click Here

Helpline-ಸಹಾಯವಾಣಿ ಸಂಖ್ಯೆ- 8022865522/9900012351





Previous Post Next Post