ಕೇವಲ ₹1000 ಇಟ್ಟು ₹10 ಲಕ್ಷ ಪಡೆಯೋ ಪೋಸ್ಟ್ ಆಫೀಸ್ ಸ್ಕೀಮ್ ಇದು! ಬಂಪರ್ ಯೋಜನೆ

 ₹1000 ರೂಪಾಯಿಯಿಂದ ಪ್ರಾರಂಭಿಸಿ, ಗರಿಷ್ಠ ಮಿತಿಯಿಲ್ಲ.ಶೇ. 7.5 ಬಡ್ಡಿದರ, ಹಣ 115 ತಿಂಗಳಲ್ಲಿ ದ್ವಿಗುಣ,ಸರ್ಕಾರದ ಭದ್ರತೆ ಇರುವ ನಿಖರ ಆದಾಯದ ಯೋಜನೆ

ನಿಮ್ಮ ಹಣವನ್ನು ಭದ್ರವಾಗಿ ದ್ವಿಗುಣಗೊಳಿಸುವ ಗುರಿ ಇದ್ಯಾ? ಅಂಚೆ ಇಲಾಖೆ ತಂದಿರುವ ‘ಕಿಸಾನ್ ವಿಕಾಸ್ ಪತ್ರ’ (Kisan Vikas Patra – KVP) ಯೋಜನೆಯು ಇದಕ್ಕೆ ನಿಜವಾದ ಉತ್ತರ.

ಇದು ಕೇಂದ್ರ ಸರ್ಕಾರದಿಂದ ಲಾಂಚ್ ಮಾಡಲಾಗಿರುವ (Indian Post small saving scheme) ಹೂಡಿಕೆ ಯೋಜನೆಯಾಗಿದ್ದು, ನಿಗದಿತ ಅವಧಿಯಲ್ಲಿ ಹಣವನ್ನು ಡಬಲ್ ಮಾಡುವ ಭರವಸೆ ನೀಡುತ್ತದೆ.

ಕೇವಲ ₹1000 ಇಟ್ಟು ₹10 ಲಕ್ಷ ಪಡೆಯೋ ಪೋಸ್ಟ್ ಆಫೀಸ್ ಸ್ಕೀಮ್ ಇದು! ಬಂಪರ್ ಯೋಜನೆ

ಈ ಯೋಜನೆಯ ವಿಶೇಷತೆಯೆಂದರೆ ₹1000 ರಿಂದ ಆರಂಭಿಸಲು ಅವಕಾಶವಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಶೇ. 7.5 ಬಡ್ಡಿದರದೊಂದಿಗೆ ನಿಮ್ಮ ಹಣವು 115 ತಿಂಗಳುಗಳಲ್ಲಿ, ಅಂದರೆ 9 ವರ್ಷ 5 ತಿಂಗಳಲ್ಲಿ ಎರಡು ಪಟ್ಟು ಆಗುತ್ತದೆ. ಕಡಿಮೆ ಬಡ್ಡಿದರದ ಬ್ಯಾಂಕ್ (bank interest) ಅಥವಾ ನಷ್ಟದ ಭೀತಿಯಿರುವ ಶೇರು ಮಾರುಕಟ್ಟೆ (stock market) ಗಿಂತ ಇದು ಹೆಚ್ಚು ಭದ್ರವಾಗಿದೆ.

ಹೂಡಿಕೆದಾರರು ಸಿಂಗಲ್ ಅಥವಾ ಜಂಟಿ ಖಾತೆಗಳ ರೂಪದಲ್ಲಿ ಹಣವನ್ನು ಹೂಡಬಹುದು. ಅಪ್ರಾಪ್ತ ವಯಸ್ಕರಿಗಾಗಿ ಪೋಷಕರು ಖಾತೆ ತೆರೆದು ಹೂಡಿಕೆ ಮಾಡಬಹುದು. ಖಾತೆ ತೆರೆದ ಮೇಲೆ ಹಣವನ್ನು ಬ್ಯಾಂಕುಗಳಿಗೆ ಭದ್ರತಾ ಆಧಾರವಾಗಿ ಬಳಸಬಹುದಾಗಿದೆ.

ಈ ಯೋಜನೆಗೆ ಅರ್ಜಿ ಹಾಕಲು, ಪಾಸ್‌ಪೋರ್ಟ್ ಸೈಜ್ ಫೋಟೋ, ಗುರುತಿನ ಚೀಟಿ (ಪಾನ್ ಕಾರ್ಡ್, ಆಧಾರ್), ವಿಳಾಸದ ದಾಖಲೆಗಳನ್ನು ಹೊಂದಿರಬೇಕು. ₹50,000ಕ್ಕಿಂತ ಹೆಚ್ಚು ಹೂಡಿಕೆಗೆ ಪ್ಯಾನ್ ಕಾರ್ಡ್ ವಿವರ ಕಡ್ಡಾಯ. ಖಾತೆ ತೆರೆದ ನಂತರ, ಹಣವನ್ನು ಯಾವುದೇ ಅಂಚೆ ಕಚೇರಿಯಲ್ಲಿ ನಿರ್ವಹಿಸಬಹುದಾಗಿದೆ.

ಅದರ ಜೊತೆಗೆ, ನೀವು ಹಣವನ್ನು 2.5 ವರ್ಷಗಳ ನಂತರ ಮುಚ್ಚಬಹುದು. ಟಿಡಿಎಸ್ (TDS) ಕಡಿತವನ್ನು ಹೂಡಿಕೆಯ ಅವಧಿ ಪೂರ್ತಿಯಾದ ಮೇಲೆ ಮಾತ್ರ ಅನ್ವಯಿಸಲಾಗುತ್ತದೆ. ಆದರೂ ಇದರಲ್ಲಿ Income Tax exemption ಇಲ್ಲದಿರುವುದು ಗಮನವಿರಲಿ.

ಅನಿವಾಸಿ ಭಾರತೀಯರು (NRI) ಈ ಯೋಜನೆಗೆ ಅರ್ಹರಾಗಿಲ್ಲ. ಯೋಜನೆಯು ಕೇವಲ ಭಾರತೀಯ ನಾಗರಿಕರಿಗೆ ಮಾತ್ರ ಸೀಮಿತವಾಗಿದೆ. ಇನ್ನು ಈ ಪತ್ರವನ್ನು ಬ್ಯಾಂಕ್‌ಗಳಲ್ಲಿ ಸಾಲ (Bank Loan) ಪಡೆಯಲು ಅಡಮಾನವಾಗಿ ಬಳಸಬಹುದಾಗಿದೆ.

ಕಿಸಾನ್ ವಿಕಾಸ್ ಪತ್ರದ (KVP) ಉದ್ದೇಶ ನಿಶ್ಚಿತ ಆದಾಯವನ್ನೇ ಮೊದಲಿಗೆ ನೋಡುವವರು, ಮಧ್ಯಮ ವರ್ಗದವರು ಮತ್ತು ನಿವೃತ್ತಿಯ ನಂತರ ಶಾಂತಿಗೆ ಹೂಡಿಕೆ ಬಯಸುವವರಿಗೆ ಸಕ್ಕತ್ತಾದ ಆಯ್ಕೆ. ಬಡ್ಡಿದರವು ಇತರ ಶೇರು ಅಥವಾ ಮೆಚ್ಚಿನ ನಿಧಿಗಳಿಗಿಂತ ಕಡಿಮೆ ಇದ್ದರೂ, ಭದ್ರತೆ ಮತ್ತು ಭರವಸೆ ಇದರಲ್ಲಿ ಹೆಚ್ಚಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಸಂಪರ್ಕಿಸಿ ಅಥವಾ www.indiapost.gov.in ವೆಬ್‌ಸೈಟ್ ವೀಕ್ಷಿಸಿ. ಸಂಶಯಗಳಿಗೆ 1800 266 6868 ಗೆ ಕರೆಮಾಡಿ.


Previous Post Next Post