ಒನ್‌ಪ್ಲಸ್ ತನ್ನ ಹೊಸ ವೈರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳಾದ 'ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z3' ಸಾಧನವನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಿದೆ. ಈ ಹೊಸ ಇಯರ್‌ಫೋನ್‌ಗಳು ಹಿಂದಿನ ಬುಲೆಟ್ಸ್ ವೈರ್‌ಲೆಸ್ Z2 ಮಾದರಿಯ ಉತ್ತರಾಧಿಕಾರಿಯಾಗಿ ಬಂದಿದ್ದು, ಗ್ರಾಹಕರ ಗಮನಸೆಳೆಯುವಂತಹ ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಉತ್ತಮ ಆಡಿಯೋ ಅನುಭವ ನೀಡಲು 3D ಸ್ಪಾಟಿಯಲ್ ಆಡಿಯೊ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾದರೆ, ಹೊಸ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z3 ಇಯರ್‌ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z3: ಪ್ರಮುಖ ವೈಶಿಷ್ಟ್ಯಗಳು
ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z3 ಇಯರ್‌ಫೋನ್‌ಗಳು 12.4mm ಡೈನಾಮಿಕ್ ಬಾಸ್ ಡ್ರೈವರ್‌ಗಳನ್ನು ಹೊಂದಿದೆ. ಇವು ತಲ್ಲೀನಗೊಳಿಸುವ 3D ಸ್ಪಾಟಿಯಲ್ ಆಡಿಯೊ ಅನುಭವವನ್ನು ನೀಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಇಯರ್‌ಫೋನ್‌ಗಳು ಕರೆ ಶಬ್ದ ಅಡಚಣೆಗಳನ್ನು ಕಡಿಮೆ ಮಾಡಲು AI- ಬೆಂಬಲಿತ ಪರಿಸರ ಶಬ್ದ ರದ್ದತಿ (ENC) ಅನ್ನು ಬೆಂಬಲಿಸುತ್ತವೆ. ಜೊತೆಗೆ, ಬ್ಯಾಲೆನ್ಸ್ಡ್, ಸೆರೆನೇಡ್, ಬಾಸ್ ಮತ್ತು ಬೋಲ್ಡ್ ಎಂಬ ನಾಲ್ಕು ಪೂರ್ವನಿಗದಿ EQ ಮೋಡ್‌ಗಳೊಂದಿಗೆ ಬಂದಿರುವ ಈ ಸಾಧನದಲ್ಲಿ ಹೇ ಮೆಲೊಡಿ ಅಪ್ಲಿಕೇಶನ್‌ನೊಂದಿಗೆ ಬಳಕೆದಾರರು ಬಾಸ್ ಮಟ್ಟವನ್ನು ಕಸ್ಟಮೈಸ್ ಮಾಡಬಹುದು.
ಈ ಬುಲೆಟ್ಸ್ ವೈರ್‌ಲೆಸ್ Z3 ಇಯರ್‌ಫೋನ್‌ಗಳು ಬ್ಲೂಟೂತ್ 5.4 ಸಂಪರ್ಕ ಹೊಂದಿವೆ ಮತ್ತು ಗೂಗಲ್ ಫಾಸ್ಟ್ ಪೇರಿಂಗ್, ಹಾಗೆಯೇ AAC ಮತ್ತು SBC ಆಡಿಯೊ ಕೋಡೆಕ್‌ಗಳನ್ನು ಬೆಂಬಲಿಸುತ್ತವೆ. ಇಯರ್‌ಫೋನ್‌ಗಳಲ್ಲಿರುವ ಭೌತಿಕ ಬಟನ್‌ಗಳನ್ನು ವಾಲ್ಯೂಮ್ ಅನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು, ಕರೆಗಳನ್ನು ತೆಗೆದುಕೊಳ್ಳಲು ಮತ್ತು ಒಂದೇ ಕ್ಲಿಕ್‌ನಲ್ಲಿ ಜೋಡಿಯಾಗಿರುವ ಸ್ಮಾರ್ಟ್‌ಫೋನ್‌ನ ಧ್ವನಿ ಸಹಾಯಕವನ್ನು ಪ್ರವೇಶಿಸಲು ಬಳಸಬಹುದು. ಒನ್‌ಪ್ಲಸ್ ಪ್ರಕಾರ, ಈ ಇಯರ್‌ಫೋನ್ ಅನ್ನು ಸಿಲಿಕೋನ್ ವಸ್ತುಗಳಿಂದ ತಯಾರಿಸಲಾಗಿದೆ.
ಬ್ಯಾಟರಿ ಬಾಳಿಕೆಯು ಈ ಸಾಧನದ ಪ್ರಮುಖ ಅಂಶವಾದ್ದು, ಒನ್‌ಪ್ಲಸ್ ಕಂಪನಿಯ ಪ್ರಕಾರ, ಈ ಬುಲೆಟ್ಸ್ ವೈರ್‌ಲೆಸ್ Z3 ಇಯರ್‌ಫೋನ್‌ಗಳು ಒಂದೇ ಚಾರ್ಜ್‌ನಲ್ಲಿ 36 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ಈ ಹೆಡ್‌ಸೆಟ್‌ಗಳಲ್ಲಿ 220mAh ಬ್ಯಾಟರಿ ಇದೆ. ಇದು 10 ನಿಮಿಷಗಳ ತ್ವರಿತ ಚಾರ್ಜಿಂಗ್ ಮೂಲಕ, ಇವು 27 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತವೆ. USB ಟೈಪ್-C ಚಾರ್ಜಿಂಗ್ ಪೋರ್ಟ್ ಕೂಡ ಹೊಂದಿರುವ ಈ ಸಾಧನವು ಧೂಳು ಮತ್ತು ನೀರಿನ ನಿರೋಧಕತೆಗೆ IP55 ರೇಟಿಂಗ್ ಹೊಂದಿದೆ.
ಈ ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್‌ಗಳು ವಿನ್ಯಾಸದಲ್ಲಿಯೂ ಬಳಕೆದಾರ ಸ್ನೇಹಿಯಾಗಿವೆ. ಅವು ಮ್ಯಾಗ್ನೆಟಿಕ್ ಇಯರ್‌ಬಡ್‌ಗಳನ್ನು ಹೊಂದಿದ್ದು, ಬಳಸದಿದ್ದಾಗ ಅವುಗಳನ್ನು ಒಟ್ಟಿಗೆ ಜೋಡಿಸಲು ಅನುಕೂಲವಾಗುತ್ತದೆ.
ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z3: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ Z3 ಇಯರ್‌ಫೋನ್ ಸಾಧನವು 1,699 ರೂ.ಗೆ ಬಿಡುಗಡೆಯಾಗಿವೆ. ಮ್ಯಾಂಬೊ ಮಿಡ್‌ನೈಟ್ ಮತ್ತು ಸಾಂಬಾ ಸನ್‌ಸೆಟ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರಲಿರುವ ಈ ಇಯರ್‌ಫೋನ್ ಸಾಧನವು ಜೂನ್ 24 ರಂದು ಮಧ್ಯಾಹ್ನ 12 ಗಂಟೆಯಿಂದ ಮಾರಾಟಕ್ಕೆ ಬರುತ್ತಿದೆ. ಗ್ರಾಹಕರು ಇವುಗಳನ್ನು ಅಮೆಜಾನ್, ಫ್ಲಿಪ್‌ಕಾರ್ಟ್, ಮೈಂತ್ರಾ, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಅಧಿಕೃತ ಒನ್‌ಪ್ಲಸ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಅಲ್ಲದೆ, ಕ್ರೋಮಾ, ರಿಲಯನ್ಸ್ ಡಿಜಿಟಲ್, ವಿಜಯ್ ಸೇಲ್ಸ್ ಮತ್ತು ಬಜಾಜ್ ಎಲೆಕ್ಟ್ರಾನಿಕ್ಸ್‌ನಂತಹ ಆಯ್ದ ಚಿಲ್ಲರೆ ಅಂಗಡಿಗಳಲ್ಲಿಯೂ ಇವು ಲಭ್ಯವಿರುತ್ತವೆ ಎಂದು ಕಂಪೆನಿ ತಿಳಿಸಿದೆ.