ಕೃಷಿ ಇಲಾಖೆಯಿಂದ(Agriculture Department) 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರೇ ತಮ್ಮ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ(Bele Samikshe) ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಲು ಹಾಗೂ ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಬೆಳೆ ಸಮೀಕ್ಷೆ(Kharif crop survey-2025)ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರೈತರು ಈ ಮೊಬೈಲ್ ಅಪ್ಲಿಕೇಶನ್(Bele Samikshe App) ಅನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು(Crop Survey) ಸ್ವಂತ ತಾವೇ ದಾಖಲಿಸಲು ಅವಕಾಶವನ್ನು ಇಲಾಖೆಯಿಂದ ಮಾಡಿಕೊಡಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಸ್ತುತ ಈ ಅಂಕಣದಲ್ಲಿ ಬೆಳೆ ಸಮೀಕ್ಷೆಯಿಂದ(Crop Survey Details) ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ? ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಬೆಳೆ ವಿವರ ದಾಖಲಿಸುವುದು ಹೇಗೆ?ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಕುರಿತು ಪ್ರಮುಖ ಸೂಚನೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
Crop Survey App Benefits- ಬೆಳೆ ಸಮೀಕ್ಷೆಯಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ?
ರೈತರು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಬೆಳೆ ಸಮೀಕ್ಷೆಯನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿದ್ದು ಈ ಸಮೀಕ್ಷೆಯಲ್ಲಿ ದಾಖಲಾದ ಮಾಹಿತಿಯನ್ನು ರೈತರಿಗೆ ಹಲವು ಯೋಜನೆಯ ಪ್ರಯೋಜನವನ್ನು ಒದಗಿಸಲು ಅರ್ಹ ರೈತರನ್ನು ಗುರುತಿಸಲು ಬಳಕೆ ಮಾಡಿಕೊಳ್ಳಲಾಗುತ್ತದೆ ಇವುಗಳ ವಿವರ ಈ ಕೆಳಗಿನಂತಿವೆ.
ಪೃಕೃತಿ ವಿಕೋಪ ಅದ ಸಮಯದಲ್ಲಿ ಪರಿಹಾರದ ಹಣವನ್ನು ವಿತರಣೆ ಮಾಡಲು ಅರ್ಹ ರೈತರನ್ನು ಗುರುತಿಸಲು ಈ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ವಿವರವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸಲು ಬಳಕೆ ಮಾಡಿಕೊಳ್ಳಲಾಗುತ್ತದೆ.
ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಒದಗಿಸಲು ಈ ಸಮೀಕ್ಷೆ ಅತ್ಯಗತ್ಯವಾಗಿದೆ.
ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಪ್ರಯೋಜನ ಪಡೆಯಲು ಅವಶ್ಯಕ.
ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.
Kharif Farmer Crop Survey App-2025: ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಬೆಳೆ ವಿವರ ದಾಖಲಿಸುವುದು ಹೇಗೆ?
ರೈತರು ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಕೃಷಿ ಇಲಾಖೆಯ ಅಧಿಕೃತ "Kharif Farmer Crop Survey App" ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲಿ ಜಮೀನಿನಲ್ಲಿ ಬೆಳೆದಿರುವ ಬೆಳೆಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಬಹುದು.
Step-1: ಪ್ರಥಮದಲ್ಲಿ Kharif Farmer Crop Survey App ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಭೇಟಿ ಮಾಡಿ ಕೃಷಿ ಇಲಾಖೆಯ ಅಧಿಕೃತ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಒಪನ್ ಮಾಡಿಕೊಂಡು 3 ರಿಂದ 4 ಬಾರಿ allow ಎಂದು ಒತ್ತಿ ಬಳಿಕ ಕೊನೆಯಲ್ಲಿ "Agree" ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ "E-KYC ಮೂಲಕ ಆಧಾರ್ ದೃಡೀಕರಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಸಹಮತಿ ಇದೆ ಎಂದು ಟಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ "ಓಟಿಪಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ನಂತರ ನಿಮ್ಮ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ದಾಖಲಿಸಿ ಬಳಿಕ "ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ "ಸಕ್ರಿಯಗೊಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿದ ನಂತರ "ಸಲ್ಲಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸಕ್ರಿಯಗೊಳಿಸಿಕೊಳ್ಳಬೇಕು.
Step-4: ಮೇಲಿನ ಹಂತಗಳನ್ನು ಪೂರ್ಣಗೊಳಿಸದ ಬಳಿಕ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ತೋರಿಸುತ್ತವೆ ಬಳಿಕ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ "ಬೆಳೆ ವಿವರ ದಾಖಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈಗ ತಾವು ಆ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.
Crop survey- ಬೆಳೆ ಸಮೀಕ್ಷೆ ವಿವರವನ್ನು ತಪ್ಪದೇ ಅಪ್ಲೋಡ್ ಮಾಡಿ:
ರೈತರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಮೀನಿನ ಸರ್ವೆ ನಂಬರ್ ವಿವರವನ್ನು ಪಡೆದು ಬೆಳೆ ಮಾಹಿತಿಯ ವಿವರ ಮತ್ತು ಬೆಳೆಯ ಪೋಟೋ ವನ್ನು ದಾಖಲಿಸಿದ ಬಳಿಕ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ತೆರೆದು "ಅಪ್ಲೋಡ್ ಮಾಡಿ" ಬಟನ್ ಮೇಲೆ ಕ್ಲಿಕ್ ಮಾಡಿ ತಪ್ಪದೇ ನೀವು ಮಾಡಿರುವ ಬೆಳೆ ಸಮೀಕ್ಷೆ ವರದಿಯನ್ನು ಅಪ್ಲೋಡ್ ಮಾಡಬೇಕು ತಪ್ಪಿದ್ದಲ್ಲಿ ನಿಮ್ಮ ಜಮೀನಿನ ಬೆಳೆ ಸಮೀಕ್ಷೆಯ ವಿವರವು ನಿಮ್ಮ ಮೊಬೈಲ್ ನಲ್ಲೇ ಉಳಿದು ಬಿಡುತ್ತದೆ.
Crop Survey App-ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಬಳಕೆಗೆ ಮಾಹಿತಿ ಪಡೆಯಲು ಹೀಗಿ ಮಾಡಿ:
ರೈತರು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬೆಳೆ ವಿವರ ದಾಖಲಾತಿ ಹೇಗೆ ಮಾಡುವುದು ಎನ್ನುವ ಮಾಹಿತಿಯ ಕುರಿತು ಅಗತ್ಯ ಮಾಹಿತಿಯನ್ನು ಪಡೆಯಲು ನಿಮ್ಮ ಗ್ರಾಮಕ್ಕೆ ಕೃಷಿ ಇಲಾಕೆಯಿಂದ ನೇಮಕ ಮಾಡಿರುವ ಖಾಸಗಿ ನಿವಾಸಿ(PR)ಅವರನ್ನು ಅಥವಾ ನಿಮ್ಮ ಹಳ್ಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
Crop Survey Information-ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಕುರಿತು ಪ್ರಮುಖ ಸೂಚನೆಗಳು:
ಕೃಷಿ ಇಲಾಖೆಯಿಂದ ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಬಳಕೆಯ ಕುರಿತು ಪ್ರಮುಖ ಸೂಚನೆಗಳನ್ನು ನೀಡಲಾಗಿದ್ದು ಇವುಗಳ ವಿವರ ಈ ಕೆಳಗಿನಂತಿವೆ.
2025-26 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ Mobile App ನ್ನು ಬಿಡುಗಡೆ ಮಾಡಲಾಗಿರುತ್ತದೆ.
ರೈತರು ತಮ್ಮ ಮೊಬೈಲ್‌ನಲ್ಲಿ (Google Play Store) ರೈತರ ಬೆಳೆ ಸಮೀಕ್ಷೆ App Install ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಿ ಬೆಳೆ ವಿವರಗಳನ್ನು ದಾಖಲಿಸಬಹುದಾಗಿದೆ.
ಬೆಳೆ ಸಮೀಕ್ಷೆ ದತ್ತಾಂಶವನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಳೆ ಸಾಲ ಮತ್ತು RTC ಯಲ್ಲಿ ದಾಖಲಿಸಲು ಬಳಸುವುದರಿಂದ ನಿಖರವಾದ ಬೆಳೆ ಮಾಹಿತಿಯನ್ನು ಬೆಳೆ ಸಮೀಕ್ಷೆಯಲ್ಲಿ ದಾಖಲಿಸುವ ಅವಶ್ಯಕತೆ ಇರುತ್ತದೆ.
ಬೆಳೆ ಸಮೀಕ್ಷೆಯಲ್ಲಿ ದಾಖಲಿಸಲಾದ ಬೆಳೆ ಸಮೀಕ್ಷೆ ವಿವರಗಳನ್ನು ಬೆಳೆ ದರ್ಶಕ್ ಮೊಬೈಲ್ App Install ಮಾಡಿಕೊಂಡು ಪರಿಶೀಲಿಸಿ ಮಾಹಿತಿ ತಪ್ಪಾಗಿದ್ದರೆ, ನಿಗದಿತ ದಿನಾಂಕದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಳೆ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗದ/ಬೆಳೆ ಸಮೀಕ್ಷೆ ಮಾಡದೆ ಇರುವ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಖಾಸಗಿ ನಿವಾಸಿಗಳ (PR) ಮೂಲಕ ನಡೆಸಲಾಗುತ್ತದೆ.
Crop Survey App Helpline- ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಉಪಯುಕ್ತ ಕೊಂಡಿಗಳು:
Crop Survey Helpline-ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ: 18004253553
Karanataka Crop Survey Website-ವೆಬ್ಸೈಟ್ ಲಿಂಕ್: click here
Crop survey App-2025 Download link: Download Now
Crop Survey Video-ಬೆಳೆ ಸಮೀಕ್ಷೆ ಮಾಡುವ ವಿಧಾನದ ವಿಡಿಯೋ: Watch Now