KCET Counselling Updates- ಕೆಸಿಇಟಿ ಕೌನ್ಸೆಲಿಂಗ್ ಪ್ರಾರಂಭ | ಹೊಸ ಅಪ್ಡೇಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ

KCET Counselling Updates- ಕೆಸಿಇಟಿ ಕೌನ್ಸೆಲಿಂಗ್ ಪ್ರಾರಂಭ | ಹೊಸ ಅಪ್ಡೇಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವತಿಯಿಂದ ನಡೆಸಲಾಗುವ ಕೆಸಿಇಟಿ (Karnataka Common Entrance Test) 2025ರ ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು ಬಹುನಿರೀಕ್ಷಿತ ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ. ಈಗ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಅಧಿಕೃತ ಘೋಷಣೆಯಂತೆ, 2025ರ ಜೂನ್ 25ರಿಂದ ಮೊದಲನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ಈ ಲೇಖನದಲ್ಲಿ ನೀವು ಕೆಸಿಇಟಿ ಕೌನ್ಸೆಲಿಂಗ್ ಕುರಿತಾದ ಎಲ್ಲ ಹಂತಗಳು, ಅಗತ್ಯ ದಾಖಲೆಗಳು, ಆಯ್ಕೆ ಭರ್ತಿ ವಿಧಾನ, ಸೀಟು ಹಂಚಿಕೆ ಹಾಗೂ ಫಲಿತಾಂಶದ ನಂತರದ ಪ್ರವೇಶ ದೃಢೀಕರಣದ ವರೆಗೆ ಎಲ್ಲ ಮಾಹಿತಿಯನ್ನು ಹಂತ ಹಂತವಾಗಿ ತಿಳಿದುಕೊಳ್ಳಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಿರೀಕ್ಷಿತ ಮುಖ್ಯ ದಿನಾಂಕಗಳು (Expected Schedule)

ಸೀಟ್ ಮ್ಯಾಟ್ರಿಕ್ಸ್ ಪ್ರಕಟಣೆ: ಜೂನ್ 20, 2025

ಮೊದಲ ಹಂತದ ಕೌನ್ಸೆಲಿಂಗ್ ಪ್ರಾರಂಭ : ಜೂನ್ 25, 2025

ಆಯ್ಕೆ ಭರ್ತಿ ಪ್ರಕ್ರಿಯೆ ಆರಂಭ: ಜೂನ್ 26 – ಜುಲೈ 2, 2025

ಅಣಕು ಸೀಟು ಹಂಚಿಕೆ: ಜುಲೈ 3, 2025

ಅಂತಿಮ ಸೀಟು ಹಂಚಿಕೆ: ಜುಲೈ 5, 2025

ಕಾಲೇಜಿಗೆ ರಿಪೋರ್ಟ್ ಮಾಡಲು ಕೊನೆಯ ದಿನ: ಜುಲೈ 10, 2025

ಕೌನ್ಸೆಲಿಂಗ್‌ಗೆ ಅಗತ್ಯವಿರುವ ಪ್ರಮುಖ ದಾಖಲೆಗಳು

ವಿದ್ಯಾರ್ಥಿಗಳು ಈ ಕೆಳಕಂಡ ದಾಖಲೆಗಳನ್ನು ತಯಾರಿಸಿಕೊಂಡು ನೋಡಲ್ ಕೇಂದ್ರದಲ್ಲಿ ದಾಖಲೆ ಪರಿಶೀಲನೆಗೆ ಹಾಜರಾಗಬೇಕು:

ಕೆಸಿಇಟಿ 2025 ಪ್ರವೇಶ ಪತ್ರ

SSLC ಮತ್ತು PUC ಅಂಕಪಟ್ಟಿಗಳುರ‍್ಯಾAಕ್ ಕಾರ್ಡ್

ಅಧ್ಯಯನ ಪ್ರಮಾಣಪತ್ರ

ಜಾತಿ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ಕನ್ನಡ ಮೀಡಿಯಂ ಅಥವಾ ಗ್ರಾಮೀಣ ಹಿನ್ನಲೆ ಪ್ರಮಾಣಪತ್ರ

ಫೋಟೋ ಮತ್ತು ಸಹಿ ಸಮೇತ ಆಧಾರ್ ಕಾರ್ಡ್

ವಿಶೇಷ ವರ್ಗದ ದಾಖಲಾತಿಗಳು (PwD, NCC, Sports, Ex-Servicemen ಮುಂತಾದವರು)

2025ನೇ ಸಾಲಿನ ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ದಿನಗಣನೆ ಆರಂಭವಾಗಿದೆ. ಈ ಕುರಿತ ಹಂತ ಹಂತದ ಹೊಸ ಅಪ್ಡೇಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ...

KCET Counselling Updates Starts June 25

ಕೌನ್ಸೆಲಿಂಗ್ ಹಂತಗಳ ವಿವರಣೆ

ಹಂತ 1: ದಾಖಲೆ ಪರಿಶೀಲನೆ: ಪ್ರತಿ ವಿದ್ಯಾರ್ಥಿ ಸಂಬಂಧಿತ ನೋಡಲ್ ಕೇಂದ್ರದಲ್ಲಿ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸಬೇಕು. ಪರಿಶೀಲನೆಯ ನಂತರ ನಿಮ್ಮ ಪ್ರೊಫೈಲ್‌ಗೆ ಲಾಗಿನ್ ಮಾಡಲು Verification Slip ನೀಡಲಾಗುತ್ತದೆ.

ಹಂತ 2: ಆಯ್ಕೆ ಭರ್ತಿ (Choice Entry): ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ, ಇಚ್ಛಿತ ಕೋರ್ಸ್ ಮತ್ತು ಕಾಲೇಜುಗಳನ್ನು ಕ್ರಮಾನುಸಾರವಾಗಿ ಆಯ್ಕೆ ಮಾಡಬೇಕು. ಹೆಚ್ಚು ಆಯ್ಕೆಗಳನ್ನು ಸೇರ್ಪಡೆ ಮಾಡುವುದು ಉತ್ತಮ. ಆಯ್ಕೆಗಳ ಆಧಾರದ ಮೇಲೆ ಸೀಟು ಹಂಚಿಕೆ ಆಗುತ್ತದೆ. ಉದಾಹರಣೆ:

BE in Computer Science @ RVCE

BE in ECE @ BMSCE

B.Pharm @ JSS College

ಹಂತ 3: ಅಣಕು ಸೀಟು ಹಂಚಿಕೆ (Mock Allotment): ಈ ಹಂತವು ವಿದ್ಯಾರ್ಥಿಗೆ ತನ್ನ ಆಯ್ಕೆಗಳಲ್ಲಿ ಎಷ್ಟು ಸಾಧ್ಯತೆ ಇದೆ ಎಂಬುದನ್ನು ತೋರಿಸುತ್ತದೆ. ಈ ಹಂತದ ನಂತರ ನೀವು ನಿಮ್ಮ ಆಯ್ಕೆಗಳನ್ನು ಬದಲಾಯಿಸಬಹುದು.

ಹಂತ 4: ಅಂತಿಮ ಸೀಟು ಹಂಚಿಕೆ: ಈ ಹಂತದಲ್ಲಿ ನೀವು ಲಭ್ಯವಿರುವ ರ‍್ಯಾಂಕ್ ಮತ್ತು ಆಯ್ಕೆಗಳ ಆಧಾರದಲ್ಲಿ ನಿಮಗೆ ಸೀಟು ನೀಡಲಾಗುತ್ತದೆ. ನಂತರ ನಿಮಗೆ ಈ ಕೇಲಗಿನ ನಾಲ್ಕು ಆಯ್ಕೆಗಳ ಅನುಕೂಲ ಕಲ್ಪಿಸಲಾಗುತ್ತದೆ:

ಆಯ್ಕೆ 1: ಸೀಟು ಒಪ್ಪಿಕೊಂಡು ಫೀಸ್ ಪಾವತಿಸಿ ಪ್ರವೇಶ ಪಡೆಯುವುದು

ಆಯ್ಕೆ 2: ಸೀಟು ಕಾಯ್ದಿರಿಸಿ ಮುಂದಿನ ಸುತ್ತಿನಲ್ಲಿ ಭಾಗವಹಿಸುವುದು

ಆಯ್ಕೆ 3: ಸೀಟು ತಿರಸ್ಕರಿಸಿ ಮುಂದಿನ ಸುತ್ತಿನಲ್ಲಿ ಮಾತ್ರ ಪಾಲ್ಗೊಳ್ಳುವುದು

ಆಯ್ಕೆ 4: ಸಂಪೂರ್ಣವಾಗಿ ಕೌನ್ಸೆಲಿಂಗ್ ನಿರಾಕರಿಸಿ ಹೊರ ಬರುವುದು

ಹಂತ 5: ಪ್ರವೇಶ ದೃಢೀಕರಣ: ಒಪ್ಪಿಕೊಂಡ ಸೀಟಿಗಾಗಿ ನೀವು ನಿಗದಿತ ಕಾಲೇಜಿಗೆ ನಿಗದಿತ ದಿನಾಂಕದೊಳಗೆ ಹಾಜರಾಗಿ ದಾಖಲೆ ಸಲ್ಲಿಸಿ, ಶುಲ್ಕ ಪಾವತಿಸಿ ಪ್ರವೇಶ ದೃಢೀಕರಿಸಬೇಕು. ಇಲ್ಲದಿದ್ದರೆ ಸೀಟು ರದ್ದಾಗಬಹುದು.

ಯಶಸ್ವಿ ಕೌನ್ಸೆಲಿಂಗ್‌ಗೆ ಟಿಪ್ಸ್

ಹಳೆಯ ವರ್ಷದ cut-off ಗಳನ್ನು ಅಧ್ಯಯನ ಮಾಡಿ

ಆಸಕ್ತಿಯ ಕೋರ್ಸ್ ಮತ್ತು ಕಾಲೇಜುಗಳ ಹಾಸ್ಟೆಲ್, ಪ್ಲೇಸ್ಮೆಂಟ್, ಫೀ ಇತ್ಯಾದಿ ಮಾಹಿತಿಯನ್ನು ಪರಿಶೀಲಿಸಿ

ಎಲ್ಲ ದಾಖಲೆಗಳನ್ನು ಲ್ಯಾಮಿನೇಟ್ ಮಾಡಿ, ಸ್ಪಷ್ಟವಾಗಿ ಫೈಲ್ ಮಾಡಿಟ್ಟುಕೊಳ್ಳಿ

ನಿಮ್ಮ ಆಸಕ್ತಿ, ಹಣಕಾಸು ಸ್ಥಿತಿ, ಪ್ರಯಾಣದ ಅಂತರವನ್ನು ಲೆಕ್ಕಹಾಕಿ ಆಯ್ಕೆ ಮಾಡಿ

ಪೋಷಕರ ಮತ್ತು ಶಿಕ್ಷಕರ ಸಲಹೆ ಪಡೆದು ಆಯ್ಕೆ ಭರ್ತಿ ಮಾಡಿ

ಕೆಸಿಇಟಿ 2025 ಕೌನ್ಸೆಲಿಂಗ್ ಪ್ರಕ್ರಿಯೆ ನಿಮ್ಮ ಭವಿಷ್ಯದ ಕೋರ್ಸ್ ಮತ್ತು ಕಾಲೇಜು ಆಯ್ಕೆಯಲ್ಲಿ ನಿರ್ಣಾಯಕ ಹಂತ. ಸರಿಯಾದ ಯೋಜನೆ, ಸಮಯಕ್ಕೆ ಸರಿಯಾಗಿ ಡಾಕ್ಯುಮೆಂಟ್ ಸಿದ್ಧತೆ ಮತ್ತು ಆಯ್ಕೆ ಭರ್ತಿ ಮಾಡುವ ಜಾಣತನವು ಉತ್ತಮ ಸೀಟು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಪ್ರತಿಯೊಂದು ಹಂತದ ತಯಾರಿ ಸದೃಢವಾಗಿರಲಿ…


Post a Comment

Previous Post Next Post

Top Post Ad

CLOSE ADS
CLOSE ADS
×