ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಲಾಗಿದ್ದು, ಗ್ರಾಮೀಣ ಪ್ರದೇಶದ ನಾಗರಿಕರು ಈಗ ತಮ್ಮ ಮನೆಯಲ್ಲೇ ಕೂತು ಗ್ರಾಮ ಪಂಚಾಯತಿ ಸೇವೆಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ಪಡೆಯಬಹುದು.
ಹೌದು ‘ಪಂಚಮಿತ್ರ’ ಯೋಜನೆಯ ಮೂಲಕ ಸರ್ಕಾರ ಗ್ರಾಮ ಪಂಚಾಯತಿ ಸೇವೆಗಳನ್ನು ಪಡೆಯುವುದಷ್ಟೇ ಅಲ್ಲ, ಕುದು-ಕೊರತೆ ದೂರುಗಳನ್ನು ಕೂಡ ವಾಟ್ಸಾಪ್ ಮೂಲಕ ದಾಖಲಿಸಬಹುದಾಗಿದೆ. ಈ ಯೋಜನೆಯು ದೇಶದಲ್ಲಿಯೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಯಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣಾಭಿವೃದ್ಧಿಗೆ ಡಿಜಿಟಲ್ ಕ್ರಾಂತಿ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಾಮಾನ್ಯರು ಕಚೇರಿಗೆ ಭೇಟಿ ನೀಡಿ ಅರ್ಜಿ ನೀಡುವುದು, ಮಾಹಿತಿ ಪಡೆಯುವುದು, ದೂರು ಸಲ್ಲಿಸುವಂತಹ ಕಾರ್ಯಗಳಿಗೆ ಸರಳ ಪರಿಹಾರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ‘ಪಂಚಮಿತ್ರ’ ಪೋರ್ಟಲ್ ಹಾಗೂ ‘ಪಂಚಮಿತ್ರ ವಾಟ್ಸಾಪ್ ಚಾಟ್‌ಬಾಟ್’ ಸೇವೆಗಳನ್ನು ಪ್ರಾರಂಭಿಸಿದೆ.
ಈ ಸೇವೆಯ ಮೂಲಕ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಹಲವಾರು ಸರ್ಕಾರಿ ಸೇವೆಗಳು ಲಭ್ಯವಾಗಲಿದ್ದು, ಕಚೇರಿಗೆ ಹೋಗದೆ ವಾಟ್ಸಾಪ್‌ನಲ್ಲಿ ನೇರವಾಗಿ ಈ ಸೇವೆಗಳನ್ನು ಪಡೆಯಬಹುದು. ಕುಂದು-ಕೊರತೆ ದೂರುಗಳನ್ನು ಸಲ್ಲಿಸಬಹುದು. ವಾಟ್ಸಾಪ್‌ನಲ್ಲಿ ಸಿಗುವ ಪ್ರಮುಖ ಸೇವೆಗಳ ಪಟ್ಟಿ ಈ ಕೆಳಗಿನಂತಿದೆ:
ನಿಮ್ಮೂರಿನ ಗ್ರಾಮ ಪಂಚಾಯತಿಯಲ್ಲಿ ಸಿಗುವ ವಿವಿಧ ಸೇವೆಗಳನ್ನು ವಾಟ್ಸಾಪ್ ಮೂಲಕ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕುಂದು-ಕೊರತೆಗಳಿಗೂ ವಾಟ್ಸಾಪ್‌ನಲ್ಲಿ ಪರಿಹಾರ
ಪಂಚಮಿತ್ರ ಚಾಟ್‌ಬಾಟ್ ಮೂಲಕ ನೀರಿನ ಕೊರತೆ, ರಸ್ತೆ ದುರಸ್ತಿಗಾಗಿ ಮನವಿ, ಬೀದಿ ದೀಪ ದುರಸ್ತಿ, ನರೇಗಾ ಕೆಲಸದ ವಿಚಾರಗಳು ಸೇರಿದಂತೆ 39 ತರಹದ ಕುಂದು-ಕೊರತೆಗಳಿಗೆ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಈ ದೂರುಗಳನ್ನು ಸಂಬಂಧಿತ ಅಧಿಕಾರಿಗಳಿಗೆ ತಲುಪಿಸಿ, ನಿರ್ಧಿಷ್ಟ ಕಾಲದಲ್ಲಿ ಪರಿಹಾರ ನೀಡಲಾಗುತ್ತದೆ.
ಪಂಚಮಿತ್ರ ಸೇವೆ ಬಳಸುವುದು ಹೇಗೆ?
ಹಂತ 1: ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಅಲ್ಲಿ ಈ ನಂಬರನ್ನು 82775 06000 ಸೇವ್ ಮಾಡಿ, ನಂತರ ‘Hi’ ಅಥವಾ ‘ಹಾಯ್’ ಎಂದು ಸಂದೇಶ ಕಳಿಸಿ.
ಹಂತ 2: ಭಾಷೆ ಆಯ್ಕೆ (ಕನ್ನಡ / ಇಂಗ್ಲಿಷ್) ಮಾಡಿ
ಹಂತ 3: ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿ ಆಯ್ಕೆ
ಹಂತ 4: ನಿಮಗೆ ಬೇಕಾದ ಸೇವೆ ಅಥವಾ ದೂರು ಆಯ್ಕೆ ಮಾಡಿ ಅದನ್ನು ದೃಢಪಡಿಸಿ.
ಹಂತ 5: ನಿಮಗೆ ಸಂಬಂಧಿಸಿದ ಮಾಹಿತಿಯನ್ನು ವಾಟ್ಸಾಪ್‌ನಲ್ಲೇ ತಕ್ಷಣ ಪಡೆಯಬಹುದು ಅಥವಾ ಸೇವೆಯನ್ನು ಶುರು ಮಾಡಬಹುದು.
ಮುಂದಿನ ನಿರೀಕ್ಷೆಗಳು
ಈ ಯೋಜನೆಯು ಪ್ರಾರಂಭದ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ವಾಟ್ಸಾಪ್ ಚಾಟ್‌ಬಾಟ್‌ಗೆ ಸೇರಿಸಲಾಗುತ್ತದೆ. ವಿಶೇಷವಾಗಿ ಪಡಿತರ ಚೀಟಿ ನವೀಕರಣ, ಸ್ವಚ್ಛ ಭಾರತ ಮಿಷನ್ ಮಾಹಿತಿ, ಭೂಮಿ ಸಂಬಂಧಿತ ದಾಖಲೆಗಳ ವಿತರಣೆಯಂತಹ ಸೇವೆಗಳು ಕೂಡ ಸೇರಿಸಬಹುದು ಎಂಬ ನಿರೀಕ್ಷೆಯಿದೆ.
ಈ ಪ್ಲಾಟ್‌ಫಾರ್ಮ್ ಗ್ರಾಮೀಣ ಜನತೆಗೆ ತಂತ್ರಜ್ಞಾನ ಲಾಭವನ್ನು ಒದಗಿಸುವ ಮಹತ್ತರ ಹೆಜ್ಜೆಯಾಗಿದೆ. ಈಗ ಗ್ರಾಮೀಣ ಸೇವೆಗಳಿಗಾಗಿ ದೂರ ಹೋಗಬೇಕಿಲ್ಲ, ನಿಮ್ಮ ಮೊಬೈಲ್‌ದಲ್ಲಿಯೇ ಸರ್ಕಾರಿ ಸೇವೆಗಳು ಲಭ್ಯ!
ವಾಟ್ಸಾಪ್ ನಂಬರ್: 82775 06000
ಸರ್ಕಾರದ ಅಧಿಕೃತ ವೆಬ್‌ಸೈಟ್: panchamitra.karnataka.gov.in