Cow mat Subsidy-50% ಸಬ್ಸಿಡಿಯಲ್ಲಿ ಕೌ ಮ್ಯಾಟ್ ಪಡೆಯಲು ಅರ್ಜಿ ಆಹ್ವಾನ

ಹೈನುಗಾರಿಕೆಯಲ್ಲಿ(Dairy Farming) ತೊಡಗಿಕೊಂಡಿರುವ ರೈತರಿಗೆ ಕೊಟ್ಟಿಗೆಯಲ್ಲಿ ಹಸುವಿನ ಕೆಳಗೆ ಹಾಕಲು ಅತೀ ಕಡಿಮೆ ಬೆಲೆಯಲ್ಲಿ ಸಬ್ಸಿಡಿಯಲ್ಲಿ ಕೌ ಮ್ಯಾಟ್(Cow Mat Subsidy) ಅನ್ನು ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ರಾಜ್ಯದಲ್ಲಿ ಹೈನುಗಾರಿಕೆಯು ಬಹುತೇಕ ಎಲ್ಲಾ ಭಾಗಗಳಲ್ಲಿ ಒಂದು ಉಪ ಆದಾಯದ ಭಾಗವಾಗಿದ್ದು ದೊಡ್ಡ ಸಂಖ್ಯೆಯ ರೈತರು ಹಸುಗಳನ್ನು ಸಾಕಾಣಿಕೆ(Dairy Farming Scheme) ಮಾಡಿಕೊಂಡು ಹೋಗುತ್ತಿದ್ದಾರೆ ಇತೀಚಿನ ದಿನಗಳನ್ನು ಕೊಟ್ಟಿಗೆಯಲ್ಲಿ ಹಸುಗಳಿಗೆ ಉತ್ತಮ ನೆಲ ಹಾಸು ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಕೌ ಮ್ಯಾಟ್ ಅನ್ನು ಬಳಕೆ ಮಾಡಲಾಗುತ್ತದೆ ಈ ಕೌ ಮ್ಯಾಟ್ ಅನ್ನು KMF ಮತ್ತು ಪಶುಪಾಲನಾ ಇಲಾಖೆಯಿಂದ(Karnataka Veterinary Department) ಸಬ್ಸಿಡಿಯಲ್ಲಿ ಪಡೆಯಲು ಅವಕಾಶವಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ರೈತರು ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಕೌ ಮ್ಯಾಟ್(Cow Mat Subsidy Yojana)ಅನ್ನು ಖರೀದಿ ಮಾಡುವುದು ಹೇಗೆ? ಸಬ್ಸಿಡಿಯಲ್ಲಿ ಕೌ ಮ್ಯಾಟ್ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Cow Mat Subsidy Application-ಕೌ ಮ್ಯಾಟ್ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು KMF ಮತ್ತು ಪಶುಪಾಲನಾ ಇಲಾಖೆಯಿಂದ ಗುಣಮಟ್ಟದ ಮತ್ತು ಅತೀ ಕಡಿಮೆ ಬೆಲೆಯಲ್ಲಿ ಕೌ ಮ್ಯಾಟ್ ಅನ್ನು ಪಡೆಯಲು ಅವಕಾಶವಿದ್ದು ಕರ್ನಾಟಕ ಹಾಲು ಒಕ್ಕೂಟದಿಂದ(KMF) ಕೌ ಮ್ಯಾಟ್ ಅನ್ನು ಖರೀದಿ ಮಾಡಲು ನಿಮ್ಮ ಹತ್ತಿರ ಹಾಲು ಡೈರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಪಡೆಯಬಹುದು.

ಪಶುಪಾಲನಾ ಇಲಾಖೆಯಿಂದ ಕೌ ಮ್ಯಾಟ್ ಅನ್ನು ಖರೀದಿ ಮಾಡಲು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಸಬ್ಸಿಡಿಯಲ್ಲಿ ಕೌ ಮ್ಯಾಟ್ ಪಡೆಯಲು ಅವಕಾಶವಿರುತ್ತದೆ.

Who Can Apply For This Cow Mat Subsidy Scheme-ಪಶುಪಾಲನಾ ಇಲಾಖೆಯಿಂದ ಕೌ ಮ್ಯಾಟ್ ಪಡೆಯಲು ನಿಗದಿಪಡಿಸಿ ಅರ್ಹತೆಗಳು:

ಅರ್ಜಿದಾರ ರೈತರು ಕನಿಷ್ಟ 2 ಜಾನುವಾರುಗಳನ್ನು(ಹಸು/ಎಮ್ಮೆ) ಹೊಂದಿರುವುದು ಕಡ್ಡಾಯವಾಗಿದೆ.

ಈ ಹಿಂದೆ ಸಬ್ಸಿಡಿಯಲ್ಲಿ ಕೌ ಮ್ಯಾಟ್ ಪಡೆದಿರಬಾರದು.

ಅರ್ಜಿದಾರ ರೈತರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

Required Documenst For Cow Mat Subsidy-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ರೈತರ ಆಧಾರ್ ಕಾರ್ಡ

ಜಮೀನಿನ ಪಹಣಿ/ಊತಾರ್/RTC

ಬ್ಯಾಂಕ್ ಪಾಸ್ ಬುಕ್

ಪೋಟೋ

ಹಸು ಸಾಕಾಣಿಕೆ ಕುರಿತು ದೃಡೀಕರಣ ಪತ್ರ

Cow Mat Subsidy-ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ರೈತರಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ 50% ರಷ್ಟು ಸಹಾಯಧನದಲ್ಲಿ ಹಾಗೂ SC/ST ವರ್ಗದ ರೈತರಿಗೆ ಶೇ 90% ರಷ್ಟು ಸಹಾಯಧನದಲ್ಲಿ ಕೌ ಮ್ಯಾಟ್ ಪಡೆಯಲು ಅವಕಾಶವಿರುತ್ತದೆ.

Cow Mat Benefits-ಹೈನುಗಾರಿಕೆಯಲ್ಲಿ ಕೌ ಮ್ಯಾಟ್ (Cow Mat) ಬಳಕೆಯಿಂದ ಯಾವೆಲ್ಲ ಪ್ರಯೋಜನಗಳಲಿವೆ:

ಆರಾಮದಾಯಕವಾದ ವ್ಯವಸ್ಥೆ ಇದಾಗಿದೆ: ಕೌ ಮ್ಯಾಟ್ ಜಾನುವಾರುಗಳಿಗೆ ಮೃದುವಾದ ಮತ್ತು ಆರಾಮದಾಯಕವಾದ ಮೇಲ್ಮೈ ಒದಗಿಸುತ್ತದೆ, ಇದರಿಂದ ಕಾಲುಗಳು ಮತ್ತು ಕೀಲುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಗಾಯಗಳ ತಡೆಗಟ್ಟುವಿಕೆ: ಗಟ್ಟಿಯಾದ ನೆಲದಿಂದ ಅಥವಾ ಕೊಟ್ಟಿಗೆಯಲ್ಲಿ ಹಾಕಿರುವ ಕಲ್ಲುಗಳಿಂದ ಉಂಟಾಗುವ ಗಾಯಗಳು, ಒತ್ತಡದ ಗುರುತುಗಳು ಮತ್ತು ಚರ್ಮದ ಸಮಸ್ಯೆಗಳನ್ನು ಕೌ ಮ್ಯಾಟ್ ಕಡಿಮೆ ಮಾಡಲು ಸಹಕಾರಿಯಾಗಿದೆ.

ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳ: ಹಸುಗಳಿಗೆ ಕೊಟ್ಟಿಗೆಯಲ್ಲಿ ಆರಾಮದಾಯಕ ವಾತಾವರಣ ನಿರ್ಮಾಣವಾಗುವುದರಿಂದ ಒತ್ತಡ ಕಡಿಮೆಯಾಗಿ ಜಾನುವಾರುಗಳು ಹೆಚ್ಚು ಹಾಲು ಉತ್ಪಾದನೆ ಮಾಡಲು ನೆರವಾಗುತ್ತದೆ.

ಸ್ವಚ್ಛತೆ ಮತ್ತು ಆರೋಗ್ಯ: ಕೌ ಮ್ಯಾಟ್ ಸುಲಭವಾಗಿ ಸ್ವಚ್ಛಗೊಳಿಸಬಹುದು, ಇದರಿಂದ ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಲು ಸಹಾಯವಾಗುತ್ತದೆ ಮತ್ತು ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.

ಜಾರುವಿಕೆ ತಡೆಗಟ್ಟುವಿಕೆ: ಕೌ ಮ್ಯಾಟ್‌ಗಳು ಜಾರು-ನಿರೋಧಕ ಮೇಲ್ಮೈ ಒದಗಿಸುತ್ತವೆ, ಇದರಿಂದ ಜಾನುವಾರುಗಳು ಬಿದ್ದು ಗಾಯಗೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ಉಷ್ಣತೆ ನಿಯಂತ್ರಣ: ಚಳಿಗಾಲದಲ್ಲಿ ಮ್ಯಾಟ್‌ಗಳು ಬೆಚ್ಚಗಿನ ಮೇಲ್ಮೈ ಒದಗಿಸುತ್ತವೆ, ಜಾನುವಾರುಗಳಿಗೆ ಆರಾಮವನ್ನು ನೀಡುತ್ತವೆ.

ದೀರ್ಘಾವಧಿಯ ಬಾಳಿಕೆ: ಗುಣಮಟ್ಟದ ಕೌ ಮ್ಯಾಟ್‌ಗಳು ದೀರ್ಘಕಾಲ ಬಾಳಿಕೆ ಬರುತ್ತವೆ, ಇದರಿಂದ ವೆಚ್ಚದ ಉಳಿತಾಯವಾಗುತ್ತದೆ.

ಪರಿಸರ ಸ್ನೇಹಿ: ಕೆಲವು ಕೌ ಮ್ಯಾಟ್‌ಗಳು ಪರಿಸರ ಸ್ನೇಹಿ ವಸ್ತುಗಳಿಂದ ತಯಾರಾಗಿರುತ್ತವೆ, ಇದು ಸುಸ್ಥಿರತೆಗೆ ಸಹಕಾರಿಯಾಗುತ್ತದೆ.

ಒಟ್ಟಾರೆಯಾಗಿ, ಕೌ ಮ್ಯಾಟ್‌ಗಳು ಜಾನುವಾರುಗಳ ಆರೋಗ್ಯ, ಉತ್ಪಾದಕತೆ ಮತ್ತು ಕೊಟ್ಟಿಗೆಯ ಸ್ವಚ್ಛತೆಯನ್ನು ಸುಧಾರಿಸುವ ಮೂಲಕ ಹೈನುಗಾರಿಕೆಯ ದಕ್ಷತೆಯನ್ನು ಹೆಚ್ಚಿಸುತ್ತವೆ.

Karnataka Veterinary Department-ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಇಲಾಖೆಯ ಅಧಿಕೃತ ಜಾಲತಾಣ- Click Here

Previous Post Next Post