2025-26ನೇ ಸಾಲಿನ ಪಶುಪಾಲನಾ ಅಭಿವೃದ್ಧಿ ಕಾರ್ಯಕ್ರಮದಡಿ, ಗಣಿ ಭಾದಿತ ಹಾಗೂ ಗಣಿ ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗಾಗಿ ಉಚಿತವಾಗಿ ಹೈನುರಾಸು ಘಟಕ (1 ಹಸು + 1 ಎಮ್ಮೆ) ಹಾಗೂ ಮೇವು ಕತ್ತರಿಸುವ ಯಂತ್ರ (2 ಊP) ಯೋಜನೆಯಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಮಹತ್ವದ ಯೋಜನೆಯನ್ನು ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅನುಷ್ಠಾನಗೊಳಿಸುತ್ತಿದ್ದು, ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲ ಸಮುದಾಯಗಳಿಗೆ ಆಧುನಿಕ ಪಶುಪಾಲನೆ, ಹೈನುಗಾರಿಕೆ ಹಾಗೂ ಸ್ವ ಉದ್ಯೋಗ ಸೃಷ್ಟಿಗಾಗಿ ಈ ಯೋಜನೆ ರೂಪುಗೊಳಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಉದ್ದೇಶ
ಹೈನುಗಾರಿಕೆಯನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು
ಗಣಿ ಪ್ರಭಾವಿತ ಪ್ರದೇಶಗಳ ಜನರಿಗೆ ನೇರ ಆರ್ಥಿಕ ನೆರವು ನೀಡುವುದು
ಮೇವು ಸಂಸ್ಕರಣೆಗಾಗಿ ಯಂತ್ರಜ್ಞಾನ ಬಳಸಿ ಕಾರ್ಮಿಕ ವೆಚ್ಚ ಕಡಿಮೆ ಮಾಡುವುದು
ಸಹಾಯಧನ ಸೌಲಭ್ಯಗಳ ವಿವರ
ಘಟಕ ವೆಚ್ಚ: ₹1,20,000/-
SC/ST ಸಹಾಯಧನ ಪ್ರಮಾಣ: ಶೇಕಡಾ 90 (₹1,08,000/-)
ಸಾಮಾನ್ಯ ವರ್ಗ ಸಹಾಯಧನ ಪ್ರಮಾಣ: ಶೇಕಡಾ 60 (₹72,000/-)
ಬಾಕಿ ಮೊತ್ತ: ಫಲಾನುಭವಿಯ ವಂತಿಕೆ ಅಥವಾ ಬ್ಯಾಂಕ್ ಸಾಲ
ಮೇವು ಕತ್ತರಿಸುವ ಯಂತ್ರ: 2 ಹೆಚ್.ಪಿ ಸಾಮರ್ಥ್ಯದ ಯಂತ್ರ ಉಚಿತವಾಗಿ ಲಭ್ಯವಿದೆ
ಹೈನುರಾಸು ಘಟಕ: 1 ಮಿಶ್ರತಳಿ ಹಸು + 1 ಸುಧಾರಿತ ಎಮ್ಮೆ
ಅರ್ಹ ಫಲಾನುಭವಿಗಳಿಗೆ ಹೈನುರಾಸು ಘಟಕ ಹಾಗೂ ಮೇವು ಕತ್ತರಿಸುವ ಯಂತ್ರ ಸೌಲಭ್ಯ ಒದಗಿಸಲು ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ.
ಅರ್ಹತೆಯ ಮಿತಿಗಳು ಮತ್ತು ಆದ್ಯತೆಗಳು
ಅರ್ಜಿದಾರರು ಗಣಿ ಭಾದಿತ ಅಥವಾ ಗಣಿ ಪ್ರಭಾವಿತ ಗ್ರಾಮಗಳಿಗೆ ಸೇರಿದವರಾಗಿರಬೇಕು
ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ ಹೊಂದಿರಬೇಕು
ಮಹಿಳಾ ಫಲಾನುಭವಿಗಳಿಗೆ ಶೇಕಡಾ 33% ಮೀಸಲು
ವಿಕಲಚೇತನ ಫಲಾನುಭವಿಗಳಿಗೆ ಶೇಕಡಾ 3% ಮೀಸಲು
ಅರ್ಜಿಯೊಂದಿಗೆ ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್ ಪ್ರತಿಗೆ
ಜಾತಿ ಮತ್ತು ಆದಾಯ ಪ್ರಮಾಣಪತ್ರ
ನಿವಾಸದ ದಾಖಲೆ
ಬ್ಯಾಂಕ್ ಖಾತೆ ವಿವರಗಳು
ಪಾಸ್‌ಪೋರ್ಟ್ ಗಾತ್ರದ ಫೋಟೋ
ಬಿಪಿಎಲ್ ಕಾರ್ಡ್
ಸದ್ಯಕ್ಕೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಮಟ್ಟದಲ್ಲಿ ಒಟ್ಟು 1,323 ಹೈನುರಾಸು ಘಟಕ ಹಾಗೂ ಒಟ್ಟು 104 ಮೇವು ಕತ್ತರಿಸುವ ಯಂತ್ರಗಳ ವಿತರಣಾ ಗುರಿಯನ್ನು ಹೊಂದಿದ್ದು; ಈ ತಾಲೂಕಿನ ಅರ್ಹ ರೈತರು ಇದರ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಎಲ್ಲಿ ಅರ್ಜೀ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಪಶುವೈದ್ಯಕೀಯ ಆಸ್ಪತ್ರೆ ಅಥವಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ. ಅರ್ಜಿ ನಮೂನೆಗಳು ಹಾಗೂ ಮಾರ್ಗದರ್ಶಿ ಸೂಚನೆಗಳನ್ನು ಕೂಡ ಅಲ್ಲಿ ಪಡೆಯಬಹುದಾಗಿದೆ.