ಬಜಾಜ್ ಫ್ರೀಡಂ 125 (Bajaj Freedom 125) ವಿಶ್ವದ ಮೊಟ್ಟ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ ಎಂದೇ ಹೆಸರುವಾಗಿದೆ. 2024ರ ಜುಲೈ 5 ರಂದು ಈ ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದನ್ನು ಪುಷ್ಟಿಕರಿಸುವಂತೆ ಇದೇ ವರ್ಷದ ಮಾರ್ಚ್‌ವರೆಗೆ 50,047 ಯುನಿಟ್ ಫ್ರೀಡಂ ಸಿಎನ್‌ಜಿ ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಲಾಗಿದೆ. ವಿಶೇಷವಾಗಿ ಕರ್ನಾಟಕದಲ್ಲಿ 3,540 ಯುನಿಟ್‌ಗಳನ್ನು ಗ್ರಾಹಕರು ಕೊಂಡುಕೊಂಡಿದ್ದರು. ನೀವು ಇದೇ ಬೈಕ್‌ನ್ನು ದಿನಬಳಕೆಗಾಗಿ ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಇಲ್ಲಿದೆ ಸಿಹಿಸುದ್ದಿ.
ಸದ್ಯ, ಬಜಾಜ್ ಕಂಪನಿಯು ಫ್ರೀಡಂ ಮೋಟಾರ್‌ಸೈಕಲ್‌ನ್ನು ಮತ್ತಷ್ಟು ಖರೀದಿದಾರರಿಗೆ ಹತ್ತಿರವಾಗಿಸಲು ಮುಂದಾಗಿದೆ. ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ಎನ್‌ಜಿ04 ಡ್ರಮ್ ಬೆಲೆಯನ್ನು ರೂ.5,000 ಕಡಿತಗೊಳಿಲಾಗಿದೆ. ಇದರೊಂದಿಗೆ ರೂ.85,976 ಹೊಸ ದರವಾಗಿದೆ. ಈ ಮೊದಲು ಈ ರೂಪಾಂತರವು ರೂ.90,976 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿತ್ತು.
ಅದರ ಹೊರತಾಗಿ, ಮಧ್ಯಮ ಶ್ರೇಣಿ ರೂಪಾಂತರ (ಮಿಡ್ ಲೆವೆಲ್ ವೇರಿಯೆಂಟ್) ಎನ್‌ಜಿ04 ಡ್ರಮ್ ಎಲ್ಇಡಿ ಹಾಗೂ ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಲೆವೆಲ್ ವೇರಿಯೆಂಟ್) ಎನ್‌ಜಿ04 ಡಿಸ್ಕ್ ಎಲ್ಇಡಿ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇವೆರೆಡು ಬೈಕ್‌ಗಳು ಕ್ರಮವಾಗಿ ರೂ.95,981 ಹಾಗೂ ರೂ.1.11 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡಿದಿವೆ.
ಬಜಾಜ್ ಫ್ರೀಡಂ 125 ವಿಶೇಷತೆಗಳೇನು:
ಇದು ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುತ್ತದೆ. ಚೆನ್ನಾಗಿರುವ ಎಲ್ಇಡಿ ಹೆಡ್‌ಲೈಟ್‌ನ್ನು ಪಡೆದಿದೆ. ಕೆರಿಬಿಯನ್ ಬ್ಲೂ, ಎಬೊನಿ ಬ್ಲ್ಯಾಕ್ - ಗ್ರೇ, ಪ್ಯೂಟರ್ ಗ್ರೇ - ಬ್ಲ್ಯಾಕ್, ರೇಸಿಂಗ್ ರೆಡ್ ಹಾಗೂ ಸೈಬರ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಮೋಟಾರ್‌ಸೈಕಲ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 125 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ 9.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 330 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ನೂತನ ಫ್ರೀಡಂ ಬೈಕ್ ತಲಾ 2 ಲೀಟರ್/ಕೆಜಿ ಸಾಮರ್ಥ್ಯವಿರುವ ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಇದು 147.8 ಕೆಜಿ ತೂಕವು ಇದೆ. 825 ಎಂಎಂ ಸೀಟ್ ಹೈಟ್, 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1340 ಎಂಎಂ ವೀಲ್ ಬೇಸ್‌ನ್ನು ಪಡೆದಿದೆ.
Bajaj Freedom 125 Price Reduced Details
ಈ ಮೋಟಾರ್‌ಸೈಕಲ್ ಎಲ್‌ಸಿಡಿ ಡಿಸ್‌ಪ್ಲೇ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಡಿಸ್ಕ್/ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. 16-ಇಂಚಿನ ವೀಲ್‌ಗಳನ್ನು ಪಡೆದಿದ್ದು, ರಸ್ತೆಯ ಮೇಲೆ ಬಿಗಿಯಾಗಿ ಹಿಡಿತ ಒದಗಿಸಲು ಉತ್ತಮವಾಗಿರುವ ಟೈರ್‌ಗಳನ್ನು ತನ್ನದಾಗಿಸಿಕೊಂಡಿದೆ.
ಒಟ್ಟಾರೆ, ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ನ ಆರಂಭಿಕ ಶ್ರೇಣಿ ರೂಪಾಂತರವಾದ ಎನ್‌ಜಿ04 ಡ್ರಮ್ ಬೆಲೆಯನ್ನು ಕಡಿತಗೊಳಿಸಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಸಾಕಷ್ಟು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಅಧಿಕ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ನಿರೀಕ್ಷೆಯಿದ್ದು, ಸ್ಪ್ಲೆಂಡರ್ ಹಾಗೂ ಶೈನ್ ಮೋಟಾರ್‌ಸೈಕಲ್‌ಗಳಿಗೆ ಯಾವ ರೀತಿಯಲ್ಲಿ ಸ್ಪರ್ಧೆಯೊಡ್ಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.