(Kotak Mahindra Group 25:) 2025-26 ನೇ ಸಾಲಿನ ಕೋಟಕ್ ಜೂನಿಯರ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
10ನೇ ತರಗತಿ ಉತ್ತೀರ್ಣರಾಗಿ, 2025–26ರ ಶೈಕ್ಷಣಿಕ ವರ್ಷಕ್ಕೆ 11 ನೇ ತರಗತಿಗೆ ಪ್ರವೇಶ ಪಡೆದಿರುವ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (ಎಂಎಂಆರ್) ವಿದ್ಯಾರ್ಥಿಗಳಿಂದ ಕೋಟಕ್ ಮಹೀಂದ್ರಾ ಗ್ರೂಪ್ ಆಫ್ ಕಂಪನೀಸ್ನ ಎಜುಕೇಶನ್ ಅಂಡ್ ಲೈವ್ಲಿಹುಡ್ ಕುರಿತ ಸಿಎಸ್ಆರ್ ಉಪಕ್ರಮಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್ ಕೋಟಕ್ ಜೂನಿಯರ್ ಸ್ಕಾಲರ್ಶಿಪ್ ಪ್ರೋಗ್ರಾಂ 2025-26ಕ್ಕೆ ಅರ್ಜಿಗಳನ್ನು ಅಹ್ವಾನಿಸುತ್ತದೆ.
(Kotak Mahindra Group 25:) ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
• ಅರ್ಜಿದಾರರು 2025ರಲ್ಲಿ ತಮ್ಮ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ (ಎಸ್ಎಸ್ಸಿ/ಸಿಬಿಎಸ್ಇ/ಐಸಿಎಸ್ಇ) ಒಟ್ಟಾರೆ 85% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
• ಅವರು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (ಎಂಎಂಆರ್) ಜೂನಿಯರ್ ಕಾಲೇಜು/ಶಾಲೆಗಳಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗಗಳಿಗೆ 2025-26ರ ಶೈಕ್ಷಣಿಕ ವರ್ಷಕ್ಕೆ 11ನೇ ತರಗತಿಗೆ ಪ್ರವೇಶ ಪಡೆದಿರಬೇಕು.
• ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ. 3,20,000 ಅಥವಾ ಕಡಿಮೆ ಇರಬೇಕು.
• ಅರ್ಜಿದಾರರು ಪ್ರಸ್ತುತ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ (ಎಂಎಂಆರ್) ಒಳಗೆ ವಾಸವಿರಬೇಕು.
• ಕೋಟಕ್ ಎಜುಕೇಶನ್ ಫೌಂಡೇಶನ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಕೋಟಕ್ ಜೂನಿಯರ್ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸುವಂತಿಲ್ಲ.
ಗಮನಿಸಿ: ಎಂಎಂಆರ್ ಪ್ರದೇಶಗಳು ಮುಂಬೈ ಉಪನಗರ ಮತ್ತು ಮುಂಬೈ ನಗರ, ಥಾಣೆ ಜಿಲ್ಲೆ- ಥಾಣೆ, ಕಲ್ಯಾಣ್, ಡೊಂಬಿವಿಲಿ, ಉಲ್ಲಾಸನಗರ್, ಭಿವಂಡಿ, ಆಂಬರ್ನಾಥ್, ಬದ್ಲಾಪುರ್, ಮುರ್ಬಾದ್, ಶಹಾಪುರ್, ವಾಸೈ, ವಿರಾರ್, ಪಾಲ್ಘರ್, ರಾಯಗಢ್ ಜಿಲ್ಲೆ- ಪನ್ವೇಲ್, ಉರಾನ್, ಕರ್ಜತ್, ಖಲಾಪುರ್, ಪೇನ್, ಅಲಿಬಾಗ್, ಮೀರಾ ಭಯಾಂದರ್ ಮತ್ತು ನವೀ ಮುಂಬೈ ಮುನಿಸಿಪಾಲ್ ಕಾರ್ಪೊರೇಶನ್ ಪ್ರದೇಶಗಳನ್ನು ಒಳಗೊಂಡಿರುತ್ತದೆ.
(Kotak Mahindra Group 25:) ಎಷ್ಟು ಸ್ಕಾಲರ್ ಶಿಪ್ ಲಭ್ಯ?:
11 ಮತ್ತು 12ನೇ ತರಗತಿಯಲ್ಲಿ ಮಾಸಿಕ ರೂ. 3,500ರ ವಿದ್ಯಾರ್ಥಿವೇತನ, 21 ತಿಂಗಳವರೆಗೆ ಒಟ್ಟು ರೂ. 73,500. ಜೊತೆಗೆ ಮಾರ್ಗದರ್ಶನ ಸಹಾಯ, ಶೈಕ್ಷಣಿಕ ನೆರವು, ವೃತ್ತಿ ಮಾರ್ಗದರ್ಶನ ಮತ್ತು ಎಕ್ಸ್ಪೋಶರ್ ಭೇಟಿಗಳು.
ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/KJSP3 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?:(Kotak Mahindra Group 25:)
30-06-2025