ISROದಿಂದ ಶಾಲಾ ಶಿಕ್ಷಕರಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಕುರಿತ ಆನ್‌ಲೈನ್‌ ಕೋರ್ಸ್

ISROದಿಂದ ಶಾಲಾ ಶಿಕ್ಷಕರಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಕುರಿತ ಆನ್‌ಲೈನ್‌ ಕೋರ್ಸ್,ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅದರ ಉಪಯೋಗಗಳ ಕುರಿತು ಶಾಲಾ ಶಿಕ್ಷಕರಿಗೆ ಐದು ದಿನಗಳ ಆನ್‌ಲೈನ್‌ ಕೋರ್ಸ್‌ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಆಯೋಜಿಸಿದೆ.

‘ಮಕ್ಕಳು ಮತ್ತು ಯುವ ಉತ್ಸಾಹಿಗಳು ಬಾಹ್ಯಾಕಾಶ ಕುರಿತು ಆಸಕ್ತಿ ಹೊಂದುವ ಮೂಲಕ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಇಸ್ರೊ ಈ ಕಾರ್ಯಕ್ರಮ ಆಯೋಜಿಸಿದೆ. ಇದಕ್ಕಾಗಿ ‘ಅಂತರಿಕ್ಷ ಜಿಗ್ಯಾಸ’ ಎಂಬ ವರ್ಚುವಲ್‌ ಆನ್‌ಲೈನ್‌ ವೇದಿಕೆಯನ್ನು ರಚಿಸಿದೆ. ಇಲ್ಲಿ ತರಬೇತಿ ಪಡೆಯುವ ಶಿಕ್ಷಕರ ಮೂಲಕ ಮಕ್ಕಳು ಬ್ಯಾಹಾಕಾಶ ವಿಜ್ಞಾನ ಕುರಿತ ತಮ್ಮ ಕಲ್ಪನೆಗೆ ವಿದ್ಯಾರ್ಥಿಗಳು ರೆಕ್ಕೆ ಕಟ್ಟಿಕೊಳ್ಳಬಹುದಾಗಿದೆ’ ಎಂದು ಇಸ್ರೊ ಹೇಳಿದೆ.

‘ವಿಜ್ಞಾನ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಹೊಸ ತಂತ್ರಜ್ಞಾನವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಮಕ್ಕಳಿಗೆ ಕಲಿಸಬಲ್ಲರು. ಅದು ಮುಂದಿನ ತಲೆಮಾರಿಗೆ ನೆರವಾಗಲಿದೆ’ ಎಂದು ಇಸ್ರೊ ತನ್ನ ಅಂತರ್ಜಾಲ ಪುಟದಲ್ಲಿ ಹೇಳಿದೆ. 

ಬಾಹ್ಯಾಕಾಶ ಶಿಕ್ಷಕರ ತರಬೇತಿ ಮತ್ತು ಕೌಶಲ ಉನ್ನತೀಕರಣ ಕಾರ್ಯಕ್ರಮ (SETU) ಅಡಿಯಲ್ಲಿ ಈ ಕೋರ್ಸ್‌ ಅನ್ನು ಇಸ್ರೊ ಪರಿಚಯಿಸಿದೆ. ಜೂನ್ 9ರಿಂದ ಜೂನ್ 13ರವರೆಗೆ ಆನ್‌ಲೈನ್‌ ವೇದಿಕೆಯಲ್ಲಿ ತರಗತಿ ನಡೆಯಲಿದೆ. ಆಸಕ್ತರು ‘ಅಂತರಿಕ್ಷ ಜಿಗ್ಯಾಸ’ ಪುಟಕ್ಕೆ jigyasa.iirs.gov.in/setu ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. 

ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನ. ಮೊದಲು ನೋಂದಾಯಿಸಿದವರಿಗೆ ಆದ್ಯತೆ ಎಂದು ಇಸ್ರೊ ಸಾಮಾಜಿಕ ಮಾಧ್ಯಮದಲ್ಲಿನ ಪ್ರಕಟಣೆಯಲ್ಲಿ ಹೇಳಿದೆ.

Previous Post Next Post