‘ಐಡಿಬಿಐ’ನಿಂದ 676 ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

‘ಐಡಿಬಿಐ’ನಿಂದ 676 ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ಉದ್ಯೋಗಗಳನ್ನು ಘೋಷಣೆ ಮಾಡಿದೆ. ಈಗಾಗಲೇ ತನ್ನ ವೆಬ್ ಸೈಟ್ ನಲ್ಲಿ ಉದ್ಯೋಗಗಳ ಪೂರ್ಣ ಮಾಹಿತಿಯನ್ನು ಪ್ರಕಟ ಮಾಡಿದೆ. ಆನ್ ಲೈನ್ ಅರ್ಜಿಗಳು ಇದೇ ತಿಂಗಳಿನಿಂದ ಆರಂಭವಾಗಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಉದ್ಯೋಗದ ಹೆಸರು- ಜೂನಿಯರ್ ಸಹಾಯಕ ವ್ಯವಸ್ಥಾಪಕ (JAM- Grade ‘O’) ಒಟ್ಟು ಉದ್ಯೋಗಗಳು- 676 (ಸರ್ಕಾರಿ ಉದ್ಯೋಗಗಳು).ಆಯ್ಕೆ ಆದ ಅಭ್ಯರ್ಥಿಗಳಿಗೆ ಮೊದಲು ತಿಂಗಳು 5,000 ರೂ. ನೀಡಲಾಗುತ್ತದೆ. ಇಲ್ಲಿಂದ ತರಬೇತಿಗೆ ಆಯ್ಕೆ ಮಾಡಿ ತಿಂಗಳಿಗೆ 15,000 ರೂ ನೀಡಲಾಗುತ್ತದೆ. ಪ್ರೊಬೇಷನರಿ ಅವಧಿ ಪೂರ್ಣಗೊಂಡ ನಂತರ ವರ್ಷಕ್ಕೆ 6.14 ಲಕ್ಷದಿಂದ 6.50 ಲಕ್ಷ ರೂಪಾಯಿವರೆಗೆ ಸಂಬಳ ಇರುತ್ತದೆ. ಅಂದರೆ ಪ್ರತಿ ತಿಂಗಳಿಗೆ 54,166 ರೂಪಾಯಿ ಸ್ಯಾಲರಿ ನೀಡಲಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜನರಲ್, ಒಬಿಸಿ, ಇಡಬ್ಲುಎಸ್- 1050 ರೂಪಾಯಿ ಅರ್ಜಿ ಶುಲ್ಕ ವಿಧಿಸಲಾಗಿದೆ, ಎಸ್ ಸಿ. ಎಸ್ಟಿ, ವಿಕಲ ಚೇತನರು- 250 ರೂಪಾಯಿ ನಿಗಧಿ ಪಡಿಸಲಾಗಿದೆ.

ಯಾವುದೇ ಪದವಿ (ಕಂಪ್ಯೂಟರ್ ಜ್ಞಾನ ತಿಳಿದಿರಬೇಕು) ಹೊಂದಿದವರು ಅರ್ಜಿ ಸಲ್ಲಿಸಬಹುದು. 20 ರಿಂದ 25 ವರ್ಷದೊಳಗಿನವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಯುಆರ್- 271, ಒಬಿಸಿ- 124, ಇಡಬ್ಲ್ಯೂಎಸ್- 67, ಎಸ್‌ಸಿ- 140, ಎಸ್‌ಟಿ- 74 ಗಳಿಗೆ ವರ್ಗವಾರು ಮೀಸಲಾತಿ ನೀಡಲಾಗಿದೆ

ಮುಖ್ಯವಾದ ದಿನಾಂಕಗಳು:

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 08 ಮೇ 2025 ಆಗಿದ್ದು, ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಮೇ 2025 ಆಗಿದೆ.

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಮೊದಲು ಪೂರ್ಣವಾದ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ನಿಂದ ಓದಿಕೊಳ್ಳಬೇಕು. ಬಳಿಕ ಈ ಉದ್ಯೋಗಕ್ಕೆ ಅರ್ಹರಾಗಿದ್ದರೆ ಅಧಿಕೃತ IDBI ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ- https://ibpsonline.ibps.in/idbiamapr25/ ಈ ಲಿಂಕ್ ಅನ್ನು ಒತ್ತಿ.

Post a Comment

Previous Post Next Post

Top Post Ad

CLOSE ADS
CLOSE ADS
×