Free LPG Connection- ಮಹಿಳೆಯರಿಗೆ ಉಚಿತ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಮಹಿಳೆಯರಿಗೆ ಪಿಎಂ ಉಜ್ವಲ ಯೋಜನೆ (PMUY) ಅಡಿಯಲ್ಲಿ ಕೇಂದ್ರ ಸರ್ಕಾರವು ಉಚಿತ ಎಲ್.ಪಿ.ಜಿ (LPG) ಅಡಿಗೆ ಅನಿಲ ಸಂಪರ್ಕವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಇಂಧನಗಳ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಮತ್ತು ಪರಿಸರ ಸಂರಕ್ಷಣೆಗೆ ಸಹಕಾರಿಯಾಗುವ ಈ ಯೋಜನೆ ದೇಶದಾದ್ಯಂತ ಕೋಟ್ಯಾಂತರ ಫಲಾನುಭವಿಗಳನ್ನು ತಲುಪಿದೆ.


ಕಳೆದ ಮೇ 1, 2016ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ಉಜ್ವಲ ಯೋಜನೆಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ವಹಿಸುತ್ತದೆ. ಬಡ ಮಹಿಳೆಯರಿಗೆ ಶುದ್ಧ ಅಡಿಗೆ ಅನಿಲ ಒದಗಿಸುವ ಮೂಲಕ ಅವರ ಆರೋಗ್ಯ ಸುಧಾರಿಸುವುದು ಮತ್ತು ಪರಿಸರ ಸಂರಕ್ಷಣೆ ಈ ಯೋಜನೆಯ ಗುರಿಯಾಗಿದೆ.

10.33 ಕೋಟಿ ಅನಿಲ ಸಂಪರ್ಕ

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಮಾರ್ಚ್ 1, 2025ರ ವರೆಗೆ, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ದೇಶಾದ್ಯಂತ 10.33 ಕೋಟಿ ಅನಿಲ ಸಂಪರ್ಕಗಳನ್ನು ನೀಡಲಾಗಿದೆ. ಅದೇ ವೇಳೆ, ಈ ಹಣಕಾಸು ವರ್ಷದ ಫೆಬ್ರವರಿ ವರೆಗೆ 41.95 ಕೋಟಿ ಸಿಲಿಂಡರ್’ಗಳನ್ನು ಮರುಪೂರಣ ಮಾಡಲಾಗಿದ್ದು, 2023-24ರಲ್ಲಿ 39.38 ಕೋಟಿ ಸಿಲಿಂಡರ್’ಗಳನ್ನು ಮರುಪೂರಣ ಮಾಡಲಾಗಿದೆ.

ಇದು ಗ್ರಾಮೀಣ ಮಹಿಳೆಯರ ಆರೋಗ್ಯವನ್ನು ಸುಧಾರಿಸಿದೆ ಮತ್ತು ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಸಬ್ಸಿಡಿಗಳು ಮತ್ತು ಜಾಗೃತಿ ಅಭಿಯಾನಗಳು ಭಾರತದಾದ್ಯಂತ ನಿರಂತರ ಎಲ್ಪಿಜಿ ಬಳಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಅಡಿಗೆ ಅನಿಲ ಪಡೆಯಲು ಅರ್ಹ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಸಿಗುವ ಸೌಲಭ್ಯಗಳು

ಒಂದು ಉಚಿತ ಎಲ್.ಪಿ.ಜಿ ಸಂಪರ್ಕ (ಸಿಲಿಂಡರ್, ರೆಗ್ಯುಲೇಟರ್, ಪೈಪ್)

ಎರಡು ಬರ್ನರ್‌ಗಳ ಸ್ಟೌವ್ (ಅಭ್ಯರ್ಥಿಯ ಆಯ್ಕೆಯ ಪ್ರಕಾರ)

ಒಂದು 14.2 ಕೆಜಿ ಅಥವಾ ಎರಡು 5 ಕೆಜಿ ಸಿಲಿಂಡರ್

ಡಿ.ಜಿ.ಸಿ.ಸಿ ಬುಕ್ಕು (Gas Consumer Book)

ಸುರಕ್ಷಿತ ಬಳಕೆಗೆ ಜಾಗೃತಿ ಮತ್ತು ತರಬೇತಿ

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿ ಸಲ್ಲಿಸುವವರು ಮಹಿಳೆಯರಾಗಿರಬೇಕು

ಕನಿಷ್ಠ 18 ವರ್ಷ ವಯಸ್ಸು ಇರಬೇಕು

ಕುಟುಂಬದಲ್ಲಿ LPG ಸಂಪರ್ಕ ಇರಬಾರದು

ಬಿಪಿಎಲ್ (BPL) ಅಥವಾ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸದಸ್ಯರಾಗಿರಬೇಕು

ಎಸ್.ಇ.ಸಿ.ಸಿ (SECC) ಡೇಟಾ ಅಥವಾ ಅಂತ್ಯೋದಯ ಆಧಾರಿತ ಕುಟುಂಬಗಳು ಆದ್ಯತೆ

ಬೇಕಾಗುವ ಅಗತ್ಯ ದಾಖಲೆಗಳು

ಅಭ್ಯರ್ಥಿಯ ಆಧಾರ್ ಕಾರ್ಡ್

ಬ್ಯಾಂಕ್ ಪಾಸ್‌ಬುಕ್ ನ ಪ್ರತಿ

ಕುಟುಂಬದ ರೇಶನ್ ಕಾರ್ಡ್ ಅಥವಾ ಆರ್ಥಿಕ ಹಿಂದುಳಿತ ಪ್ರಮಾಣಪತ್ರ

ಮೊಬೈಲ್ ನಂಬರ್

ಪಾಸ್‌ಪೋರ್ಟ್ ಗಾತ್ರದ ಫೋಟೋ

ಸ್ಥಳೀಯ ವಿಳಾಸದ ದಾಖಲೆ

ಅರ್ಜಿಸಲ್ಲಿಸುವ ವಿಧಾನ

ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಯೋಜನೆಯಡಿಯಲ್ಲಿ ಮಹಿಳೆಯರು ಉಚಿತ ಎಲ್.ಪಿ.ಜಿ ಗ್ಯಾಸ್ ಸಂಪರ್ಕ ಪಡೆಯಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ರೀತಿಯಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

ಆನ್‌ಲೈನ್ ವಿಧಾನ:

pmuy.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. Click Here to apply for New Ujjwala 2.0 Connection ಲಿಂಕ್ ಮೇ ಕ್ಲಿಕ್ ಮಾಡಿ. ನಿಮಗೆ ಬೇಕಾದ ಸಿಲಿಂಡರ್ ಕಂಪನಿ ಸೆಲೆಕ್ಟ್ ಮಾಡಿ. ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಕೆ ಮಾಡಬಹುದು.

ಅಫ್ಲೈನ್ ವಿಧಾನ: 

ನಿಮ್ಮ ಹತ್ತಿರದ ಎಲ್.ಪಿ.ಜಿ ವಿತರಣಾ ಏಜೆನ್ಸಿಗೆ ಭೇಟಿ ನೀಡಿ. ಉಜ್ವಲ ಯೋಜನೆಗೆ ಸಂಬAಧಿಸಿದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಅಧಿಕೃತ ಪರಿಶೀಲನೆಯ ನಂತರ ಉಚಿತ ಅನಿಲ ಸಂಪರ್ಕ ಒದಗಿಸಲಾಗುತ್ತದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಭಾರತದ ಬಡ ಮಹಿಳೆಯರ ಬದುಕಿನಲ್ಲಿ ಭದ್ರತೆ, ಆರೋಗ್ಯ ಮತ್ತು ಸುಧಾರಣೆಯನ್ನು ತರುವ ಮಹತ್ವದ ಹೆಜ್ಜೆಯಾಗಿದೆ. ಅರ್ಹ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಸಹಾಯ ಬೇಕಾದರೆ ನಿಮ್ಮ ಹತ್ತಿರದ ಎಲ್.ಪಿ.ಜಿ ಏಜೆನ್ಸಿಯನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಅರ್ಜಿ ಲಿಂಕ್: Apply Now

Previous Post Next Post