ಆ್ಯಂಡ್ರಾಯ್ಡ್ ಫೋನ್ ಉತ್ತಮವಾಗಿಯೇ ಬಳಸುತ್ತಿರುತ್ತೀರಿ. ಆದರೆ, ಇದ್ದಕ್ಕಿದ್ದ ಹಾಗೆ ಕೆಲವು ತಾಂತ್ರಿಕ ಸಮಸ್ಯೆಗಳಾಗುತ್ತವೆ. ಇಷ್ಟಾದರೂ ಸಮಸ್ಯೆ ಏನೆಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವೂ ಸರಿ ಇದ್ದಾಗ ಏಕಾಏಕಿ ಮೊಬೈಲ್ ಆ್ಯಪ್ಸ್ ಸಹಿತ ಕೆಲವು ಫೀಚರ್ಸ್ ಕೈ ಕೊಡಲು ಪ್ರಾರಂಭಿಸಿದರೆ ಏನೋ ಸಮಸ್ಯೆಯಾಗಿದೆ ಎಂದರ್ಥ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಸಹ ಆಗಿರಬಹುದು. ಅಷ್ಟಕ್ಕೂ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆ ಎಂದು ತಿಳಿದುಕೊಳ್ಳೋದು ಹೇಗೆ?
ಆ್ಯಂಡ್ರಾಯ್ಡ್ ಫೋನ್ ಉತ್ತಮವಾಗಿಯೇ ಬಳಸುತ್ತಿರುತ್ತೀರಿ. ಆದರೆ, ಇದ್ದಕ್ಕಿದ್ದ ಹಾಗೆ ಕೆಲವು ತಾಂತ್ರಿಕ ಸಮಸ್ಯೆಗಳಾಗುತ್ತವೆ. ಇಷ್ಟಾದರೂ ಸಮಸ್ಯೆ ಏನೆಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವೂ ಸರಿ ಇದ್ದಾಗ ಏಕಾಏಕಿ ಮೊಬೈಲ್ ಆ್ಯಪ್ಸ್ ಸಹಿತ ಕೆಲವು ಫೀಚರ್ಸ್ ಕೈ ಕೊಡಲು ಪ್ರಾರಂಭಿಸಿದರೆ ಏನೋ ಸಮಸ್ಯೆಯಾಗಿದೆ ಎಂದರ್ಥ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಸಹ ಆಗಿರಬಹುದು. ಅಷ್ಟಕ್ಕೂ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆ ಎಂದು ತಿಳಿದುಕೊಳ್ಳೋದು ಹೇಗೆ?
ಮೊಬೈಲ್ ವಿಚಿತ್ರವಾಗಿ ಅಡುತ್ತಿದೆ ಅಂದರೆ ಹ್ಯಾಕ್ ಆಗಿರಬಹುದು ಎಂದರ್ಥ. ವಿಪರ್ಯಾಸವೆಂದರೆ ಹೀಗೆ ಹ್ಯಾಕ್ ಆಗಿರುವುದೂ ನಮಗೇ ಗೊತ್ತಾಗೋಲ್ಲ. ಅಷ್ಟರಮಟ್ಟಿಗೆ ಹ್ಯಾಕರ್ಸ್ ತಮ್ಮ ಕೈ ಚಳಕ ತೋರಿರುತ್ತಾರೆ. ನನ್ನ ಮೊಬೈಲ್‌ನಲ್ಲಿ ಅಂಥದ್ದೇನಿದೆ? ಅದನ್ನು ಹ್ಯಾಕ್ ಮಾಡಿ ಹ್ಯಾಕರ್ಸ್ ಏನು ಮಾಡುತ್ತಾರೆಂದು ಕೊಳ್ಳಬಹುದು. ಆದರೆ, ನಮ್ಮ ಬ್ಯಾಂಕಿಂಗ್ ಆ್ಯಪ್ಸ್ ಇರಬಹುದು, ಇಲ್ಲವೇ ನೀವು ಕೆಲವು ಮಹತ್ವದ ಮಾಹಿತಿಗಳನ್ನು ಇ-ಮೇಲಲ್ಲೋ, ಯಾವುದೋ ಫೋಲ್ಡರ್‌ನಲ್ಲಿಯೋ ಇಟ್ಟಿರಬಹುದು. ಅದು ಹ್ಯಾಕರ್ಸ್ ಕೈ ಸೇರಿದರೆ?
ಅಲ್ಲಗಳೆಯುವಂತಿಲ್ಲ. ಹೆಚ್ಚಾಗಿ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ಹ್ಯಾಕ್ ಆಗುತ್ತಿವೆ. ಇವೇ ಹ್ಯಾಕರ್ಸ್ ಅಥವಾ ಸೈಬರ್ ಅಪರಾಧಿಗಳ ಟಾರ್ಗೆಟ್. ಇಲ್ಲಿ ಹ್ಯಾಕ್ ಮಾಡಲೆಂದೇ ಕೆಲವು ದೋಷಪೂರಿತ ಆ್ಯಪ್‌ಗಳನ್ನೂ ಸೃಷ್ಟಿಸಲಾಗುತ್ತದೆ. ಇಂಥ ದೋಷಪೂರಿತ URLಗಳೂ ಇದ್ದು, ಇವುಗಳ ಮೇಲೆ ಅಪ್ಪಿತಪ್ಪಿಯೂ ಒಂದು ಕ್ಲಿಕ್ಕಿಸಿದರೆ ಸಾಕು, ಮೊಬೈಲ್‌ನ ಸಂಪೂರ್ಣ ಮಾಹಿತಿ ಹ್ಯಾಕರ್‌ಗಳ ಕಂಪ್ಯೂಟರ್ ಅನ್ನು ಸೇರಿರುತ್ತದೆ ಎಂದೇ ಅರ್ಥ.
ಥರ್ಡ್ ಪಾರ್ಟಿ APK ಫೈಲ್ಸ್ ಸಹವಾಸವೂ ಅಷ್ಟೇ ಅಪಾಯಕಾರಿ. ಇವನ್ನು ಓಪನ್ ಮಾಡುತ್ತಿದ್ದಂತೆ ಸಂಬಂಧವಿಲ್ಲದ ಜಾಹೀರಾತುಗಳು ಒಂದಾದ ಮೇಲೊಂದರಂತೆ ತೆರೆದುಕೊಳ್ಳುತ್ತವೆ. ಜೊತೆಗೆ ನೀವು ಸಬ್‌ಸ್ಕ್ರೈಬ್ ಆಗದಿರುವ ಷಯಗಳೂ ಓಪನ್ ಆಗುತ್ತವೆ. ಹೀಗಾಗಿ ನಮ್ಮ ಮೊಬೈಲ್‌ನಲ್ಲಿ ಕೆಲವೊಮ್ಮೆ ನಮಗೇ ಗೊತ್ತಿಲ್ಲದಂತೆ ಅಪಾಯಕಾರಿ ಆ್ಯಪ್ಸ್ ಸಹ ಅಡಗಿರುತ್ತವೆ. ಈ ಎಲ್ಲ ಅಂಶಗಳು ಸೇರಿ ಇತರೆ ಸಮಸ್ಯೆಗಳು ನಮ್ಮ ಮೊಬೈಲ್‌ನಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದೊಳಿತು. ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಎಂದು ತಿಳಿಯಲು ಇವನ್ನು ಗಮನಿಸಿಕೊಳ್ಳಿ.
ಒಂದಾದ ಮೇಲೊಂದು ಬರುತ್ತೆ ಆ್ಯಪ್ಸ್ ಆ್ಯಡ್
ಕೆಲವೊಮ್ಮೆ ನಾವು ಯಾವುದೋ ಅಪರಿಚಿತ ವೆಬ್‌ಸೈಟ್‌ಗೆ ಭೇಟಿ ಕೊಟ್ಟಾಗ ಇದ್ದಕ್ಕಿದ್ದಂತೆ ಅನೇಕ ಪಾಪ್‌ಅಪ್ ಆ್ಯಡ್ಸ್ ಬಂತೆಂದರೆ ನಮ್ಮ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟಕಾಯಿಸಿಕೊಂಡಿರುತ್ತೆ.
ಕೆಲ ಆ್ಯಪ್ಸ್ ತಾನಾಗೇ ಇನ್ಸ್ಟಾಲ್ ಆಗುತ್ತೆ
ಕೆಲವೊಮ್ಮೆ ನಮ್ಮ ಸ್ಮಾರ್ಟ್‌ಫೋನ್ ಪರಿಶೀಲನೆ ಮಾಡುತ್ತಿದ್ದಾಗ ನೀವು ಡೌನ್ಲೋಡ್ ಮಾಡದೆ ಇದ್ದರೂ ಯಾವುದೋ ಹೊಸ ಆ್ಯಪ್ ಇಲ್ಲವೇ ಆ್ಯಪ್‌ಗಳು ಕಂಡುಬಂದರೆ ಫೋನಲ್ಲಿ ಮಾಲ್ವೇರ್ ಅಟ್ಯಾಕ್ ಆಗಿದೆ ಎಂದರ್ಥ.
ಇನ್‌ಸ್ಟಾಲ್ ಮಾಡಿದ ಆ್ಯಪ್ ಐಕಾನ್ ಮಾಯ
ಆಗತಾನೆ ಪ್ಲೇಸ್ಟೋರಿನಿಂದ ಒಂದು ಆ್ಯಪನ್ನು ಇನ್‌ಸ್ಟಾಲ್ ಮಾಡಿರುತ್ತೇವೆ. ಬಳಿಕ ಹೋಂ ಸ್ಕ್ರೀನ್‌ಗೆ ಬಂದು ನೋಡಿದರೆ ಅದರ ಐಕಾನ್ಸ್ ಕಾಣೋಲ್ಲ. ಈ ಸಂದರ್ಭದಲ್ಲಿ ಆ ಆ್ಯಪ್ ದೋಷಪೂರಿತವೆಂದರ್ಥ. ಅವುಗಳ ಸಹವಾಸಕ್ಕೆ ಹೋಗದಿರುವುದೊಳಿತು.
ಬ್ಯಾಟರಿ ಪವರ್ ಕಡಿಮೆ ಆಗೋದು
ಎಲ್ಲವೂ ಸರಿಯಾಗಿಯೇ ಇರುತ್ತೆ ಅಂದುಕೊಳ್ಳುತ್ತಿರುವಾಗಲೇ ಸಡನ್ ಆಗಿ ಬ್ಯಾಟರಿ ಸಾಮರ್ಥ್ಯ ಕುಂಟುತ್ತದೆ. 100 ಪರ್ಸೆಂಟ್ ತೋರಿಸುವ ಬ್ಯಾಟರಿ 2 ಇಲ್ಲವೇ 3 ಗಂಟೆಯೊಳಗೆ 10 ಪರ್ಸೆಂಟ್‌ಗೆ ಬಂದಿದೆ ಎಂದಾದರೆ ಸಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟ್ಯಾಕ್ ಆಗಿದೆ ಎಂದರ್ಥ.
ರಾಂಡಮ್ ಅಥ್ವಾ ಮಿಸ್ಡ್ ಇಂಟರ್ ನ್ಯಾಷನಲ್ ಕಾಲ್ ಬಂದರೆ
ಪದೇ ಪದೆ ಯಾವುದೋ ಅಪರಿಚಿತ ನಂಬರ್‌ನಿಂದ ನಮಗೆ ಇಂಟರ್‌ನ್ಯಾಷನಲ್ ಕರೆಗಳು ಬಂದರೆ ನೀವು ಎಚ್ಚರ ವಹಿಸಿಕೊಳ್ಳುವುದು ಉತ್ತಮ. ಆಗ ಒಮ್ಮೆ ಸ್ಮಾರ್ಟ್‌ಫೋನ್ ಚೆಕ್ ಮಾಡಿಕೊಳ್ಳಬೇಕು.
ಡೇಟಾ ಉಪಯೋಗ ಇದ್ದಕ್ಕಿದ್ದಂತೆ ಹೆಚ್ಚಾದರೆ
ಅನ್ ಲಿಮಿಟೆಡ್ ಮೊಬೈಲ್ ಡೇಟಾವಿದ್ದರೂ ಕೆಲವು ದಿನಗಳಿಂದ ಹೆಚ್ಚಿನ ಡೇಟಾ ಬಳಕೆಯಾಗಿ, ಡೇಟಾ ನಿಧಾನವಾಗುತ್ತಿದೆ ಎಂದನ್ನಿಸಿದರೆ ನಮ್ಮ ಫೋನ್‌ಗೆ ಯಾವುದೋ ವೈರಸ್ ದಾಳಿ ಮಾಡಿರಬಹುದು.
ಆ್ಯಪ್‌ಕ್ರ್ಯಾಶ್ ಆಗೋದು, ಅಪ್ಡೇಟ್ ಆಗ್ದೇ ಇರೋದು
ಆಗಾಗ ನಾವು ಬಳಸುತ್ತಿರುವ ಆ್ಯಪ್ ಕ್ರ್ಯಾಶ್ ಆದರೆ ಅಥವಾ ಒಂದು ನಿರ್ದಿಷ್ಠ ಆ್ಯಪ್ ಎಷ್ಟೇ ಪ್ರಯತ್ನಿಸಿದರೂ ಅಪ್ಡೇಟ್ ಆಗದಿರುವುದೂ ಮಾಲ್ವೇರ್ ಅಟ್ಯಾಕ್ ಆಗಿರುವುದನ್ನು ಕನ್ಫರ್ಮ್ ಮಾಡುತ್ತೆ.
ಮೊಬೈಲ್ ಸ್ಲೋ ಆಗಿದ್ಯಾ?
ಬಹಳ ಫಾಸ್ಟ್ ಆಗಿ ಸ್ಕ್ರೋಲ್ ಆಗುತ್ತಿದ್ದ, ಎಲ್ಲ ಫೀಚರ್ಸ್ ಪಟಪಟನೆ ಓಪನ್ ಆಗ್ತಿರುತ್ತದೆ. ಆದರೆ, ಸಡನ್ ಆಗಿ ನಿಧಾನವಾದರೆ, ಇಲ್ಲವೇ ಆ್ಯಪ್ ಲೋಡ್ ಆಗಲು ಸಿಕ್ಕಾಪಟ್ಟೆ ಟೈಮ್ ತೆಗೆದುಕೊಂಡರೆ ಒಮ್ಮೆ ಮೊಬೈಲ್ ಅನ್ನು ಚೆಕ್ ಮಾಡಿಕೊಳ್ಳಿ.