Crop Loan-ಕೇಂದ್ರ ಸರ್ಕಾರದಿಂದ ಬೆಳೆ ಸಾಲ ವಿತರಣೆ ಕುರಿತು ಮಹತ್ವದ ಆದೇಶ ಪ್ರಕಟ

ಕೇಂದ್ರ ಸರ್ಕಾರದಿಂದ ರೈತರಿಗೆ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿ(Kisan Credit Card) ಅತೀ ಕಡಿಮೆ ಬಡ್ಡಿದರದಲ್ಲಿ ಬೆಳೆ ಸಾಲವನ್ನು ಒದಗಿಸಲು ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಣಯವನ್ನು ಕೈಗೊಂಡು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು(Agriculture loan subsidy) ಕೈಗೊಳ್ಳಲು ಪ್ರಾರಂಭಿಕ ಹಂತದಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಮೂಲಕ ತ್ವರಿತವಾಗಿ ಸಾಲವನ್ನು ಪಡೆಯಲು ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆ(KCC Loan)ಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯ ಅನುಷ್ಠಾನದ ಕುರಿತು ಕೇಂದ್ರ ಸಚಿವ ಸಂಪುಟದಿಂದ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು ಇದರ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿ(Agriculture loan scheme) ರೈತರು ಎಷ್ಟು ಮೊತ್ತದ ಸಾಲವನ್ನು ಪಡೆಯಬಹುದು? ಸಾಲ(Crop loan) ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಪ್ರಸ್ತುತ ಆದೇಶದಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಇದರ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Agriculture loan interest subsidy-ಕೃಷಿ ಸಾಲದ ಮೇಲೆ ಶೇ 3% ಬಡ್ಡಿ ರಿಯಾಯಿತಿ:

ರೈತರು ಬ್ಯಾಂಕ್ ಮೂಲಕ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿ ಕೃಷಿ ಸಾಲವನ್ನು ಪಡೆದುಕೊಂಡ ನಂತರ ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿದರೆ ಕೇಂದ್ರದಿಂದ ಶೇ 3% ಬಡ್ಡಿ ರಿಯಾಯಿತಿಯನ್ನು ರೈತರಿಗೆ ನೀಡಲಾಗುತ್ತದೆ.

ಇದರಿಂದ ಒಟ್ಟು ಶೇ 7% ಸಾಲಕ್ಕೆ ಬಡ್ದಿಯಲ್ಲಿ ಕೇಂದ್ರದ ಶೇ 3% ಬಡ್ಡಿದರ ರಿಯಾಯಿತಿಯಿಂದ ಶೇ 4% ಬಡ್ಡಿದರದಲ್ಲಿ ರೈತರಿಗೆ ಬೆಳೆ ಸಾಲ ದೊರೆಯುತ್ತದೆ.

Crop loan Limit-2 ಲಕ್ಷದ ವರೆಗೆ ಯಾವುದೇ ಅಡಮಾನ ಅವಶ್ಯವಿಲ್ಲ:

ರೈತರು ಯಾವುದೇ ಮೇಲಾಧಾರವಿಲ್ಲದೆ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿ 2 ಲಕ್ಷದವರೆಗೆ ಕೃಷಿ ಸಾಲವನ್ನು ಪಡೆಯಲು ಅವಕಾಶವಿರುತ್ತದೆ ಇದರ ಕುರಿತು ಕೇಂದ್ರದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದ್ದು 2 ಲಕ್ಷಕ್ಕೂ ಮೀರಿದ ಸಾಲಕ್ಕೆ ಮೇಲಾಧಾರ ನೀಡಬೇಕಾಗುತ್ತದೆ.

KRP Portal-ಕೃಷಿ ಸಾಲ ವಿತರಣೆಗೆ ಡಿಜಿಟಲ್ ತಂತ್ರಾಂಶ:

ಕಿಸಾನ್ ಕೇಡಿಟ್ ಕಾರ್ಡ ಯೋಜನೆಯಡಿ ರೈತರಿಗೆ ವಿತರಣೆ ಮಾಡುವ ಬೆಳೆ ಸಾಲದ ಕುರಿತು ಪಾರದರ್ಶಕತೆ ಮತ್ತು ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಕೇಂದ್ರದಿಂದ ಆಗಸ್ಟ್ 2023 ರಿಂದ ಕಿಸಾನ್ ರಿನ್ ಪೋರ್ಟಲ್ (KRP) ಅನ್ನು ಪ್ರಾರಂಭಿಸಲಾಗಿದ್ದು ಈ ತಂತ್ರಾಂಶವನ್ನು ಭೇಟಿ ಮಾಡಿ ರೈತರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕ ಕಿಸಾನ್ ಕೇಡಿಟ್ ಕಾರ್ಡ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ತಿಳಿಯಬಹುದು.

ಅಧಿಕೃತ ವೆಬ್ಸೈಟ್ ಲಿಂಕ್- Click Here

Kisan Credit Card Yojana-ಕೃಷಿ ಸಾಲದ ಗರಿಷ್ಠ ಮಿತಿ 5 ಲಕ್ಷಕ್ಕೆ ಏರಿಕೆ ಸಾಧ್ಯತೆ:

ಕೇಂದ್ರ ಸರ್ಕಾರದಿಂದ ಕಿಸಾನ್ ಕೇಡಿಟ್ ಕಾರ್ಡ ಯೋಜನೆಯಡಿ ರೈತರಿಗೆ ಕೃಷಿ ಸಾಲದ ಮಿತಿಯನ್ನು ₹ 3 ಲಕ್ಷದಿಂದ ₹ 5 ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ ಎಂದು 2025 ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದ್ದು ಇದರ ಅನುಷ್ಟಾನಕ್ಕೆ ಸರ್ಕಾರವು ಬದ್ದವಾಗಿ ಎಂದು ಪ್ರಸ್ತುತ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Agriculture loan eligibility-ಕಿಸಾನ್ ಕೇಡಿಟ್ ಕಾರ್ಡ ಯೋಜನೆಯಡಿ ಸಾಲ ಪಡೆಯಲು ಅರ್ಹತೆಗಳು:

ಕಿಸಾನ್ ಕೇಡಿಟ್ ಕಾರ್ಡ ಯೋಜನೆಯಡಿ ಕೃಷಿಕರು ಸಾಲವನ್ನು ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

1) ಅರ್ಜಿದಾರ ರೈತರ ಹೆಸರಿಗೆ ಕೃಷಿ ಜಮೀನನ್ನು ಹೊಂದಿರಬೇಕು.

2) ಇತರೆ ಬ್ಯಾಂಕ್ ಗಳಲ್ಲಿ ಈಗಾಗಳೇ ಬೆಳೆ ಸಾಲ ಇದ್ದರೆ ಅದನ್ನು ಮರು ಪಾವತಿ ಮಾಡಿರಬೇಕು.

3) ಸಣ್ಣ ಮತ್ತು ಅತೀ ಸಣ್ಣ ರೈತರ ವರ್ಗಕ್ಕೆ ಸೇರಿದವರಾಗಿರಬೇಕು.

Loan Application-ಸಾಲ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ಈ ಯೋಜನೆಯಡಿ ಸಾಲವನ್ನು ಪಡೆಯಲು ತಮ್ಮ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಯನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಸಾಲ ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು.

Documents for agriculture loan-ಅರ್ಜಿ ಸಲ್ಲಿಸಲು ದಾಖಲೆಗಳು:

ರೈತರ ಆಧಾರ್ ಕಾರ್ಡ/Aadhar

ಬ್ಯಾಂಕ್ ಪಾಸ್ ಬುಕ್/Bank Pass book

ಪಾನ್ ಕಾರ್ಡ್/Pan card

ಪೋಟೋ/Photo

ಜಮೀನಿನ ಪಹಣಿ/ಊತಾರ್/RTC

Crop Loan Schemeಕೃಷಿ ಸಾಲ 25.49 ಲಕ್ಷ ಕೋಟಿಗೆ ಏರಿಕೆ:

ನಮ್ಮ ದೇಶದಲ್ಲಿ ಪ್ರಸ್ತುತ ಕೃಷಿ ಸಾಲದ ಹರಿವು ₹7.3 ಲಕ್ಷ ಕೋಟಿಯಿಂದ ₹25.49 ಲಕ್ಷ ಕೋಟಿಗೆ ಏರಿದೆ ಕೇಂದ್ರ ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಕಿಸಾನ್ ಕೇಡಿಟ್ ಕಾರ್ಡ ಯೋಜನೆಯ ಮೂಲಕ ಸಾಲದ ಹರಿವು ₹4.26 ಲಕ್ಷ ಕೋಟಿಯಿಂದ (2014) ₹9.81 ಲಕ್ಷ ಕೋಟಿಗೆ (2024) ದ್ವಿಗುಣಗೊಂಡಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.

KCC Press News-ಇದರ ಕುರಿತು ಕೇಂದ್ರದ ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ-Click Here

Previous Post Next Post