Car Subsidy-ಸಬ್ಸಿಡಿಯಲ್ಲಿ ಕಾರ್ ಮತ್ತು ಆಟೋ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Car Subsidy-ಸಬ್ಸಿಡಿಯಲ್ಲಿ ಕಾರ್ ಮತ್ತು ಆಟೋ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಿರುದ್ಯೋಗ ಯುವಕರು ಸ್ವಂತ ಉದ್ಯೋಗವನ್ನು ಆರಂಭಿಸಲು ಕಾರ್ ಮತ್ತು ಆಟೋ(Car Subsidy Yojane) ಅನ್ನು ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ಸಬ್ಸಿಡಿಯಲ್ಲಿ ಪಡೆಯಲು ಅವಕಾಶವಿದ್ದು ಕರ್ನಾಟಕದಲ್ಲಿ ಯಾವೆಲ್ಲ ಯೋಜನೆಯಡಿ ನಾಗರಿಗಕು ಸಹಾಯಧನದಲ್ಲಿ ಕಾರ್ ಮತ್ತು ಆಟೋ ರಿಕ್ಷಾವನ್ನು ಪಡೆಯಬಹುದು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಸೇರಿದಂತೆ ಇತರೆ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ರಾಜ್ಯದ ವಿವಿಧ ನಿಗಮದಡಿಯಲ್ಲಿ ಸ್ವಾವಲಂಭಿ ಸಾರಥಿ ಯೋಜನೆ(Swavalambi Sarathi) ಮತ್ತು ಬೆಂಗಳೂರು(Bengaluru) ಮಹಾನಗರ ವ್ಯಾಪ್ತಿಯಲ್ಲಿ ಇ-ಸಾರಥಿ(e-Sarati Yojane)ಯೋಜನೆಯಡಿ ಕಾರ್ ಅನ್ನು ಸಹಾಯಧನದಲ್ಲಿ ಕಾರ್ ಮತ್ತು ಆಟೋ ರಿಕ್ಷಾವನ್ನು ಪಡೆಯಲು ಅವಕಾಶವಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ವಿವರಿಸಲಾಗಿದೆ.

ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ ಸ್ವಾವಲಂಬಿ ಸಾರಥಿ ಯೋಜನೆ ಮತ್ತು ಇ-ಸಾರಥಿ ಯೋಜನೆಯು ಕಾರ್ ಮತ್ತು ಆಟೋ ರಿಕ್ಷಾವನ್ನು ಸಬ್ಸಿಡಿಯಲ್ಲಿ(Car and auto Subsidy Scheme) ಖರೀದಿಸಲು ಸಹಾಯ ಮಾಡುವ ಪ್ರಮುಖ ಯೋಜನೆಗಳಾಗಿವೆ.

ಈ ಯೋಜನೆಗಳ ಮೂಲಕ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಅಲ್ಪಸಂಖ್ಯಾತರು ಮತ್ತು ಒಬಿಸಿ ಸಮುದಾಯದ ಯುವಕರಿಗೆ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಈ ಲೇಖನದಲ್ಲಿ ಈ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ, ಅರ್ಜಿ ಸಲ್ಲಿಕೆ ವಿಧಾನ, ಅಗತ್ಯ ದಾಖಲಾತಿಗಳು ಮತ್ತು ವೆಬ್‌ಸೈಟ್ ಲಿಂಕ್‌ಗಳನ್ನು ಒದಗಿಸಲಾಗಿದೆ.

1) ಸ್ವಾವಲಂಬಿ ಸಾರಥಿ ಯೋಜನೆ-Swavalambi Sarathi Yojane:

ಸ್ವಾವಲಂಬಿ ಸಾರಥಿ ಯೋಜನೆಯು ಕರ್ನಾಟಕ ಸರ್ಕಾರದ ವಿವಿಧ ನಿಗಮಗಳಾದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC), ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇತ್ಯಾದಿಗಳ ಮೂಲಕ ಜಾರಿಗೊಳಿಸಲಾಗುತ್ತದೆ. ಈ ಯೋಜನೆಯ ಉದ್ದೇಶವು ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ, ಸರಕು ವಾಹನ (ಗೂಡ್ಸ್ ವೆಹಿಕಲ್) ಮತ್ತು ಪ್ರಯಾಣಿಕ ಆಟೋ ರಿಕ್ಷಾವನ್ನು ಖರೀದಿಸಲು ಸಬ್ಸಿಡಿ ಒದಗಿಸುವುದಾಗಿದೆ. ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Swavalambi Sarathi Subsidy Details-ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ಟ್ಯಾಕ್ಸಿ/ಸರಕು ವಾಹನ: ವಾಹನದ ಮೌಲ್ಯದ 50% ಅಥವಾ ಗರಿಷ್ಠ ರೂ. 3 ಲಕ್ಷ (OBC/ಅಲ್ಪಸಂಖ್ಯಾತ/ect) ಮತ್ತು 75% ಅಥವಾ ಗರಿಷ್ಠ ರೂ. 4 ಲಕ್ಷ (SC/ST ಸಮುದಾಯಕ್ಕೆ).

ಆಟೋ ರಿಕ್ಷಾ: ಗರಿಷ್ಠ ರೂ. 75,000.

ಸಾಲ ಸೌಲಭ್ಯ: ಉಳಿದ ವೆಚ್ಚಕ್ಕೆ ರಾಷ್ಟ್ರೀಕೃತ/ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ.

Swavalambi Sarathi Scheme Eligibility- ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡ:

1) ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.

3) ಕುಟುಂಬದ ವಾರ್ಷಿಕ ಆದಾಯ: ರೂ. 4.5 ಲಕ್ಷದಿಂದ ರೂ. 6 ಲಕ್ಷದವರೆಗೆ (ನಿಗಮದ ಆಧಾರದ ಮೇಲೆ).

4) ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಿಗಳ ಕುಟುಂಬದ ಸದಸ್ಯರಿಗೆ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿರುವುದಿಲ್ಲ.

5) ಅರ್ಜಿದಾರರು ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಯನ್ನು ಕಡ್ಡಾಯವಾಗಿ ಹೊಂದಿರಬೇಕು.

6) ವಾಹನದ ಷರತ್ತು: ಯೋಜನೆಯಡಿ ಖರೀದಿಸಿದ ವಾಹನವನ್ನು ಸಾಲದ ಅವಧಿಯಲ್ಲಿ ಮಾರಾಟ ಮಾಡುವಂತಿಲ್ಲ.

7) KMDC ಅಥವಾ ಇತರ ಸರ್ಕಾರಿ ಯೋಜನೆಯಡಿ ವಾಹನ ಸಾಲ ಪಡೆದಿರಬಾರದು.

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

ಕರ್ನಾಟಕದ ನಿವಾಸ ಪುರಾವೆ

ಆಧಾರ್ ಕಾರ್ಡ್ ಪ್ರತಿ

ಜಾತಿ ಮತ್ತು ಆದಾಯ ಪ್ರಮಾಣಪತ್ರ

ಚಾಲನಾ ಪರವಾನಗಿ ಪತ್ರ

ಬ್ಯಾಂಕ್ ಪಾಸ್ ಬುಕ್ ಪ್ರತಿ

ವಾಹನದ ಕೊಟೇಶನ್ (Quotation)

ಪಾಸ್‌ಪೋರ್ಟ್ ಗಾತ್ರದ ಫೋಟೋ

ಸ್ವ-ಘೋಷಣೆ ಪತ್ರ (Affidavit)

Swavalambi Sarati Yojane Application link-ಅರ್ಜಿ ಸಲ್ಲಿಕೆ ವಿಧಾನ:

ಅಭ್ಯರ್ಥಿಗಳು ನೇರವಾಗಿ ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in) ಅಥವಾ ಆಯಾ ನಿಗಮಕ್ಕೆ ಸಂಬಂಧಪಟ್ಟ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಗ್ರಾಮ ಒನ್, ಬೆಂಗಳೂರು ಒನ್, ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

Application Calling Date-ಅರ್ಜಿ ಸಲ್ಲಿಸಲು ಯಾವ ಸಮಯದಲ್ಲಿ ಅವಕಾಶ ನೀಡಲಾಗುತ್ತದೆ?

ಈ ಯೋಜನೆಯಡಿ ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ ಮಧ್ಯದಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಅರ್ಹ ಮತ್ತು ಆಸಕ್ತ ಫಲಾನುಭವಿಗಳು ಈ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

2) ಇ-ಸಾರಥಿ ಯೋಜನೆ (ಬೆಂಗಳೂರು ಮಹಾನಗರ ವ್ಯಾಪ್ತಿ)-e-Sarati Yojane:

ಇ-ಸಾರಥಿ ಯೋಜನೆಯು ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಜಾರಿಗೊಳಿಸಲಾದ ವಿಶೇಷ ಯೋಜನೆಯಾಗಿದ್ದು, ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ವಿದ್ಯುತ್ (ಎಲೆಕ್ಟ್ರಿಕ್) ಕಾರ್‌ಗಳನ್ನು ಖರೀದಿಸಲು ಸಬ್ಸಿಡಿ ಒದಗಿಸುತ್ತದೆ. ಈ ಯೋಜನೆಯು ವಾಣಿಜ್ಯ ಉದ್ದೇಶಕ್ಕಾಗಿ ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಪ್ರೋತ್ಸಾಹಿಸುತ್ತದೆ.

e-Sarati Yojane Details-ಯೋಜನೆಯ ವಿವರ ಹೀಗಿದೆ:

ಸಬ್ಸಿಡಿ: ಎಲೆಕ್ಟ್ರಿಕ್ ಕಾರ್ ಖರೀದಿಗೆ 50% ಸಬ್ಸಿಡಿ, ಗರಿಷ್ಠ ರೂ. 3 ಲಕ್ಷದವರೆಗೆ.

ಉದ್ದೇಶ: ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸುವುದು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ.

ಆದ್ಯತೆ: ಎಸ್‌ಸಿ, ಎಸ್‌ಟಿ, ಒಬಿಸಿ, ಮತ್ತು ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ.

Who Can Apply For Car Subsidy Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಬೆಂಗಳೂರು ಮಹಾನಗರ ವ್ಯಾಪ್ತಿಯ ಖಾಯಂ ನಿವಾಸಿ.

ಅರ್ಜಿದಾರರ ವಯಸ್ಸು 21 ರಿಂದ 55 ವರ್ಷದ ಒಳಗಿರಬೇಕು.

ಅಭ್ಯರ್ಥಿಯು ವಾಹನ ಚಾಲನಾ ಪರವಾನಗಿ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.

ಕುಟುಂಬದ ವಾರ್ಷಿಕ ಆದಾಯ ರೂ. 6 ಲಕ್ಷಕ್ಕಿಂತ ಕಡಿಮೆ.

Required Documnets-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

ಆಧಾರ್ ಕಾರ್ಡ್ ಪ್ರತಿ

BBMP ವ್ಯಾಪ್ತಿಯ ನಿವಾಸಿ ದೃಡೀಕರಣ

ಜಾತಿ ಮತ್ತು ಆದಾಯ ಪ್ರಮಾಣಪತ್ರ

ಚಾಲನಾ ಪರವಾನಗಿ ಪ್ರಮಾಣ ಪತ್ರ

ಬ್ಯಾಂಕ್ ಬ್ಯಾಂಕ್ ಪಾಸ್ ಪ್ರತಿ

ಎಲೆಕ್ಟ್ರಿಕ್ ವಾಹನದ ಕೊಟೇಶನ್

Online Apply Method-ಅರ್ಜಿ ಸಲ್ಲಿಕೆ ವಿಧಾನ:

ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆಹ್ವಾನಿದ ಸಮಯದಲ್ಲಿ BBMP ಕಚೇರಿಯನ್ನು ಅಥವಾ ಸಂಬಂಧಿತ ಜಿಲ್ಲಾ ಕಚೇರಿಗಳಲ್ಲಿ ನೇರವಾಗಿ ಅಗತ್ಯ ದಾಖಲಾತಿಯ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

BBMP Website-ಅಧಿಕೃತ ವೆಬ್ಸೈಟ್ ಲಿಂಕ್- Click here

Application Form-ಅರ್ಜಿ ನಮೂನೆ-Download Now

Scheme Guidelines-ಯೋಜನೆಯ ಮಾರ್ಗಸೂಚಿ- Download Now

Post a Comment

Previous Post Next Post

Top Post Ad

CLOSE ADS
CLOSE ADS
×